ಪಾವಂಜೆಯಲ್ಲಿ ಮಕರ ಸಂಕ್ರಮಣೋತ್ಸವ

ಕಿನ್ನಿಗೋಳಿ: ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮರಣಾರ್ಥ 24ಗಂಟೆಗಳ ಆರಾಧನೋತ್ಸವ
ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಳದಲ್ಲಿ ಮಕರ ಸಂಕ್ರಮಣೋತ್ಸವ ಹಾಗೂ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮರಣಾರ್ಥ ಭಾನುವಾರ ಬೆಳಗ್ಗಿನಿಂದ ಸೋಮವಾರ ಬೆಳಗ್ಗಿನ ವರೆಗೆ ಆರಾಧನೋತ್ಸವ ನಡೆಯಿತು.
ಮಂಗಳೂರು ಸುಬ್ರಹ್ಮಣ್ಯ ಸಭಾ, ಚಂದ್ರಮ್ಮ ಸ್ಮಾರಕ ಮಹಿಳಾ ಮಂಡಳಿಯವರಿಂದ ಭಜನೆ, ವಿದ್ಯಾ ಈಶ್ವರಚಂದ್ರ ಮತ್ತು ತನ್ವಿಯವರಿಂದ ಸಂಗೀತ, ವಾಣಿ ಸತೀಶ್ ಎಲ್ಲೂರು, ಸದಾಶಿವ ಆಚಾರ‍್ಯ ಕಾಸರಗೋಡು, ಶ್ರೀಪತಿ ರಂಗಾ ಭಟ್, ಕುಮಾರಿ ವಂದನಾರಾಣಿ, ವಿಜಯವಲ್ಲಿ ಹೆಜಮಾಡಿ, ಸುಮನಾ ಪ್ರಶಾಂತ್ ಪುತ್ತೂರು, ಶ್ರೀಶ ಆರ್. ಪಾವಂಜೆ, ಅಡೂರು ಸಹೋದರಿಯರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಜರಗಿತು. ಭಗವಾನ್ ದಾಸ್ ಬಪ್ಪನಾಡು, ರಾಮ್ ಗಣೇಶ್ ರಿಂದ ಭಕ್ತಿ ಸಂಗೀತ ಬಳಿಕ ಹಳೆಯಂಗಡಿ ವಿಶ್ವಕರ್ಮ ಭಜನಾ ಮಂಡಳಿ, ವಿಠೋಭ ಭಜನಾ ಮಂಡಳಿ, ಕಾರ್ಕಳ ವೆಂಕಟರಮಣ ಭಜನಾ ಮಂಡಳಿ, ಕೊಲ್ನಾಡು ದುರ್ಗಾಪ್ರಸಾದ ಭಜನಾ ಸಂಘ, ಪೊಳಲಿ ಜಗದೀಶ ದಾಸ ಮತ್ತ ಬಳಗದವರಿಂದ ಭಜನೆ ನಡೆಯಿತು. ನೂರಕ್ಕೂ ಹೆಚ್ಚು ಕಲಾವಿದರು ಈ ಶರವಣಭವನಿಗೆ ನಡೆದ ಆರಾಧನೋತ್ಸವದಲ್ಲಿ ಪಾಲ್ಗೊಂಡರು.
ಕಿನ್ನಿಗೋಳಿಯ ನಿವೃತ್ತ ಶಿಕ್ಷಕ ಬಾಲಕೃಷ್ಣ ಉಡುಪ ಇವರಿಂದ ಅಂಚೆಚೀಟಿ ಪ್ರದರ್ಶನ ನಡೆಯಿತು.
ಪಾವಂಜೆ ಕ್ಷೇತ್ರದಲ್ಲಿ ಇಂದಿನಿಂದ(ತಾ.15) ತಾ. 28ರತನಕ ಪ್ರತಿದಿನ ಸಂಜೆ 5 ರಿಂದ 7ರತನಕ ಸಂಗೀತಾರಾಧನೆ ನಡೆಯಲಿದೆ. ತಾ. 15ರಂದು ಸೌಪರ್ಣಿಕಾರಿಂದ, ತಾ16ಕ್ಕೆ ಅಶ್ವಿನಿ ರಾಔ ಇವರಿಂದ, ತಾ17ಕ್ಕೆ ಭಾರ್ಗವ ಭಜನಾ ಮಂಡಳಿಯವರಿಂದ , ತಾ.18ಕ್ಕೆ ಶ್ರೀಶ ಆರ್ ಪಿ. ಇವರಿಂದ, ತಾ.19ಕ್ಕೆ ಅರ್ಚಕಾ ಮತ್ತು ಸಂಧ್ಯಾರಿಂದ, ತಾ.20ಕ್ಕೆ ಆದಿತ್ಯ ಭಟ್ ಮತ್ತು ಆಗ್ನೇಯ ಭಟ್ ಇವರಿಂದ ತಾ.21ಕ್ಕೆ ಪ್ರಜ್ಞಾ ಅಡಿಗರಿಂದ, ತಾ. 22ಕ್ಕೆ ರಂಜನಿ ಸಾಮಗರಿಂದ ತಾ.23ಕ್ಕೆ ಅನಿರುದ್ಧ್ ಮತ್ತು ತ್ರಿವಿಕ್ರಮ ಭಟ್ಟರಿಂದ, ತಾ. 24ರಂದು ಅರುಣ ಕೆ. ಎಸ್. ಭಟ್ ರಿಂದ , ತಾ, 25ಕ್ಕೆ ಸ್ವರಶ್ರೀ ಭಜನಾ ತಂಡದವರಿಂದ, ತಾ. 26ಕ್ಕೆ ಜಗನ್ನಾಥ ಕುಲಾಲ್ ರಿಂದ , ತಾ. 27ಕ್ಕೆ ಅಪೂರ್ವ ಗುಂಡ್ಯಡ್ಕರಿಂದ, ತಾ. 28ಕ್ಕೆ ಶರಣ್ಯ ಮತ್ತು ಸುಮೇಧಾ ಕೆ. ಎನ್ ಇವರಿಂದ ಕರ್ನಾಟಕ ಸಂಗೀತ ನಡೆಯಲಿದೆ.

Kinnigoli-16011804

Comments

comments

Comments are closed.

Read previous post:
Kinnigoli-16011803
ಕಿನ್ನಿಗೋಳಿ: ಮಕರ ಸಂಕ್ರಾತಿ ತಾಳಮದ್ದಲೆ

ಕಿನ್ನಿಗೋಳಿ: ಯಕ್ಷಗಾನ ತಾಳಮದ್ದಳೆಯಿಂದ ಧಾರ್ಮಿಕ ಪ್ರಜ್ಞೆ ಹಾಗೂ ಧರ್ಮ ಜಾಗೃತಿ ಪಸರಿಸಿದಾಗ ಸುಸಂಸ್ಕೃತ ಸದೃಡ ಸಮಾಜ ನಿರ್ಮಾಣ ಸಾಧ್ಯ ಎಂದು ಕರ್ಣಾಟಕ ಬ್ಯಾಂಕ್ ಮಹಾ ಪ್ರಬಂಧಕ ಚಂದ್ರಶೇಖರ ರಾವ್...

Close