ಸಸಿಹಿತ್ಲು ತಡೆಗೋಡೆ ಶಿಲನ್ಯಾಸ

ಕಿನ್ನಿಗೋಳಿ: ಪ್ರವಾಸೋದ್ಯಮದ ಹಿತದೃಷ್ಟಿಯಿಂದ ಸಸಿಹಿತ್ಲು ರಸ್ತೆ ಸೇತುವೆಗಳಿಗೆ ಕೋಟ್ಯಾಂತರ ರೂ.ಗಳ ಅನುದಾನ ತಂದು ಅಭಿವೃದ್ಧಿ ಮಾಡಲಾಗಿದೆ. ಈಗಾಗಲೇ 4ಕೋಟಿ ರೂಗಳಲ್ಲಿ ತಡೆಗೋಡೆ ನಿರ್ಮಾಣ ಆಗಿದ್ದು ಇದು ಎರಡನೇ ಹಂತದ ಮುಂದುವರಿದ ಯೋಜನೆ ಆಗಿದೆ. ಮುಂದಿನ ದಿನಗಳಲ್ಲಿ ನಾಲ್ಕು ಕೋಟಿ ರೂ.ನಲ್ಲಿ ಮೀನಿನ ಜಟ್ಟಿ ಆಗಲಿದೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಬಂದರು ಇಲಾಖೆಯ ಅನುದಾನದಿಂದ ಸಸಿಹಿತ್ಲು ಬಬ್ಬರ್ಯ ದೈವಸ್ಥಾನದ ಬಳಿ 4.90 ಕೋಟಿ ರೂ. ವೆಚ್ಚದಲ್ಲಿ 375 ಮೀಟರ್ ಉದ್ದ ಸಮುದ್ರ ಕೊರೆತ ತಡೆಗೋಡೆ ನಿರ್ಮಿಸುವ ಯೋಜನೆಗೆ ಭಾನುವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಈ ಸಂದರ್ಭ ಸಸಿಹಿತ್ಲು ಬೀಚ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಮೂಡಾ ಸದಸ್ಯ ವಸಂತ ಬೆರ್ನಾಡ್, ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಅಝೀಜ್, ಪ್ರವೀಣ್ ಆನಿಲ್, ಚಿತ್ರ ಸುರೇಶ್, ಗುಣವತಿ, ಮಾಲತಿ ಕೋಟ್ಯಾನ್, ಚಂದ್ರಕುಮಾರ್, ಶರ್ಮಿಳಾ, ಧನರಾಜ್ ಕೋಟ್ಯಾನ್, ದರ್ಮಾನಂದ ತೋಕೂರು, ಪ್ರೇಮ್ ಸುವರ್ಣ, ಕೃಷ್ಣಪ್ಪ ಸಾಲ್ಯಾನ್, ರೋಹಿತಾಕ್ಷ, ಶೇಖರ ಕೋಟ್ಯಾನ್, ಭಾಸ್ಕರ ಸಸಿಹಿತ್ಲು, ಬಂದರು ಇಲಾಖೆಯ ಇಂಜಿನಿಯರ್ ಪ್ರವೀಣ್ ಕುಮಾರ್, ಗುತ್ತಿಗೆದಾರ ಸತೀಶ್ ಶೇಟ್ ಉಡುಪಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-16011805

Comments

comments

Comments are closed.

Read previous post:
Kinnigoli-16011804
ಪಾವಂಜೆಯಲ್ಲಿ ಮಕರ ಸಂಕ್ರಮಣೋತ್ಸವ

ಕಿನ್ನಿಗೋಳಿ: ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮರಣಾರ್ಥ 24ಗಂಟೆಗಳ ಆರಾಧನೋತ್ಸವ ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಳದಲ್ಲಿ ಮಕರ ಸಂಕ್ರಮಣೋತ್ಸವ ಹಾಗೂ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮರಣಾರ್ಥ ಭಾನುವಾರ...

Close