ಸಂಸ್ಕೃತಿ ಸಂಸ್ಕಾರದ ಪ್ರತೀಕ ಧಾರ್ಮಿಕ ಕ್ಷೇತ್ರಗಳು

ಕಿನ್ನಿಗೋಳಿ: ತುಳುನಾಡಿನ ಸಂಸ್ಕೃತಿ ಸಂಸ್ಕಾರದ ಪ್ರತೀಕವಾಗಿದೆ ನಮ್ಮ ಧಾರ್ಮಿಕ ಪುಣ್ಯ ಕ್ಷೇತ್ರಗಳು. ಧಾರ್ಮಿಕ ಸಾಮಾಜಿಕ ಕಾರ್ಯಗಳೊಂದಿಗೆ ದೇವರ ದೈವದ ಕೆಲಸ ಮಾಡುವ ಮದ್ಯಸ್ಥರನ್ನು ಗೌರವಿಸುವುದು ಶ್ಲಾಘನೀಯ ಎಂದು ಮುಂಬಯಿ ಉದ್ಯಮಿ ವಿರಾರ್ ಶಂಕರ್ ಶೆಟ್ಟಿ ಹೇಳಿದರು.
ಕಿನ್ನಿಗೋಳಿ ಸಮೀಪದ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಳದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದ್ಯೆವದ ಸೇವೆ ಮಾಡುವ ನಾರಾಯಣ ಅಂಚನ್ ತಾಳಿಪಾಡಿ, ಶಂಭು ಮುಕ್ಕಾಲ್ದಿ ಕೆಮ್ರಾಲ್, ಉಮೇಶ್ ಬಂಗೇರ ಐಕಳ, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಉಮೇಶ್ ಶೆಟ್ಟಿ ಮಚ್ಚಾರ್ ಗುತ್ತು ನಿಡ್ಡೋಡಿ, ಪ್ರವೀಣ್ ಪೂಜಾರಿ ಕೊಲ್ಲೂರು, ಸುಧಾಕರ ಸಾಲ್ಯಾನ್ ಮುಂಡ್ಕೂರು ಅವರನ್ನು ಸನ್ಮಾನಿಸಲಾಯಿತು.
ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಸುಧಾಕರ ಆಳ್ವ ಮಂಗಳೂರು, ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ದೇವಳದ ಕಾರ್ಯಧ್ಯಕ್ಷ ನಾರಾಯಣ ಶೆಟ್ಟಿ ಉಳೆಪಾಡಿ, ಸುಧಾಕರ ಮೆಸ್ಕಾಂ, ಮಹೇಶ್ ಆರ್ ಉಳೆಪಾಡಿ, ಶ್ರೀಮತಿ ಮೋಹನದಾಸ ಸುರತ್ಕಲ್ ಮತ್ತಿತರರು ಉಪಸ್ಥಿತರಿದ್ದರು.
ದೇವಳದ ಧರ್ಮದರ್ಶಿ ಮೋಹನ್ ದಾಸ್ ಸುರತ್ಕಲ್ ಸ್ವಾಗತಿಸಿದರು. ದಿನಕರ ಶೆಟ್ಟಿ ಬಳ್ಕುಂಜೆ ಕಾರ್ಯಕ್ರಮ ನಿರೂಪಿಸಿದರು.

Kinnigoli-16011806

 

Comments

comments

Comments are closed.

Read previous post:
Kinnigoli-16011805
ಸಸಿಹಿತ್ಲು ತಡೆಗೋಡೆ ಶಿಲನ್ಯಾಸ

ಕಿನ್ನಿಗೋಳಿ: ಪ್ರವಾಸೋದ್ಯಮದ ಹಿತದೃಷ್ಟಿಯಿಂದ ಸಸಿಹಿತ್ಲು ರಸ್ತೆ ಸೇತುವೆಗಳಿಗೆ ಕೋಟ್ಯಾಂತರ ರೂ.ಗಳ ಅನುದಾನ ತಂದು ಅಭಿವೃದ್ಧಿ ಮಾಡಲಾಗಿದೆ. ಈಗಾಗಲೇ 4ಕೋಟಿ ರೂಗಳಲ್ಲಿ ತಡೆಗೋಡೆ ನಿರ್ಮಾಣ ಆಗಿದ್ದು ಇದು ಎರಡನೇ ಹಂತದ...

Close