ಹಳೆಯಂಗಡಿ ಗ್ರಾಮ ಸಭೆ

ಕಿನ್ನಿಗೋಳಿ: ಹಳೆಯಂಗಡಿ ಗ್ರಾಮ ಪಂಚಾಯಿತಿ ಪಾವಂಜೆ, ಸಸಿಹಿತ್ಲು ಮತ್ತು ಹಳೆಯಂಗಡಿ ಗ್ರಾಮದ ವ್ಯಾಪ್ತಿಯ ದ್ವಿತೀಯ ಹಂತದ ಗ್ರಾಮ ಸಭೆ ಸಸಿಹಿತ್ಲು ಗ್ರಾಮದ ಅಗ್ಗಿದಕಳಿಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಪಂಚಾಯಿತಿ ಅಧ್ಯಕ್ಷೆ ಜಲಜಾ ಪಾಣರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.
ಆರು ತಿಂಗಳಿಗೊಮ್ಮೆ ನಡೆಯುವ ಗ್ರಾಮ ಸಭೆಗೆ ಅಧಿಕಾರಿಗಳು ಗೈರು ಹಾಜರಾಗುವುದು ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಯಾರೂ ಸಹ ಈ ಬಗ್ಗೆ ಗಮನ ಕೊಡುವುದಿಲ್ಲ ಯಾಕೆ..? ಎಂಬ ಪ್ರಶ್ನೆಗೆ ಉತ್ತರಿಸಿದ ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು ಮಾತನಾಡಿ ಈ ಬಗ್ಗೆ ಹಲವಾರು ಬಾರಿ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಪ್ರಸ್ತಾವನೆ ನಡೆಸಿದ್ದೇವೆ. ಕೆಲವೊಂದು ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆಯಿದೆ ಸಹಜವಾದರೂ ಮೇಲಾಧಿಕಾರಿಗಳು ಈ ಬಗ್ಗೆ ಗಮನ ವಹಿಸಬೇಕಾಗಿದೆ ಎಂದರು.
ಭಾಗ್ಯಲಕ್ಷ್ಮೀ ಯೋಜನೆಯಲ್ಲಿ ಅಧಿಕಾರಿಗಳು ತಮಗೆ ಬೇಕೆಂದ ರೀತಿಯಲ್ಲಿ ನಿಯಮಗಳನ್ನು ಜಾರಿಗೊಳಿಸಿ ಫಲಾನುಭವಿಗಳಿಗೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹಳೆಯಂಗಡಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಸಹಿತ ಪಂ. ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಸಸಿಹಿತ್ಲು ಪ್ರದೇಶದಲ್ಲಿ ಸಿಆರ್‌ಝೆಡ್ ಸಮಸ್ಯೆಗಳಿದ್ದು ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿ ಗೈರುಹಾಜರು ಬಗ್ಗೆ ಗ್ರಾಮಸ್ಥರ ಸಹಿತ ಪಂ. ಸದಸ್ಯರಾದ ಚಂದ್ರಕುಮಾರ್, ಅಶೋಕ್‌ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಮುಂದಿನ ದಿನದಲ್ಲಿ ಸಿಆರ್‌ಝೆಡ್ ಅಧಿಕಾರಿಗಳೊಂದಿಗೆ ಮುಖಾಮುಖಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಭರವಸೆ ನೀಡಲಾಯಿತು.
ಸಸಿಹಿತ್ಲು ಗ್ರಾಮದಲ್ಲಿ ಇಂದು ಕೃಷಿ ಭೂಮಿ ಕಡಿಮೆಯಾಗುತ್ತಿದೆ ಆದರೆ ಸಾಮಾನ್ಯ ವರ್ಗದ ಜನರಿಗೆ ಸೂಕ್ತವಾದ ಸವಲತ್ತುಗಳು ಸಿಗುತ್ತಿಲ್ಲ, ಮೀಸಲಾತಿ ನೀತಿಯಿಂದ ಸಿಗುವ ಯಂತ್ರೋಪಕರಣಗಳ ದುರ್ಬಳಕೆ ಆಗುತ್ತಿದೆ ಎಂದು ಕೃಷಿಕರಾದ ರವಿಕುಮಾರ್, ಶ್ರೀನಿವಾಸ್ ರಾವ್ ಹೇಳಿದರು. ಕಾರ್ನಾಡಿನಲ್ಲಿನ ರೈತ ಸಂಪರ್ಕ ಕೇಂದ್ರವನ್ನು ಕಿನ್ನಿಗೋಳಿ ಅಥವ ಹಳೆಯಂಗಡಿಗೆ ವರ್ಗಾಯಿಸಬೇಕು ಎಂದು ಗ್ರಾಂ. ಪಂ. ಸದಸ್ಯರು ಗ್ರಾಮಸ್ಥರು ಒತ್ತಾಯಿಸಿದರು.

ಸಸಿಹಿತ್ಲು ಲಚ್ಚಿಲ್‌ನಲ್ಲಿ ಪಂಪ್ ಚಾಲಕರು ನೀರು ಪೂರೈಕೆ ಸರಿಯಿಲ್ಲ, ಉಪ್ಪು ನೀರು ತಡೆಗೋಡೆ ರಚಿಸಬೇಕು, ಕದಿಕೆಯ ನೂತನ ಸೇತುವೆಗೆ ದಾರಿ ದೀಪದ ವ್ಯವಸ್ಥೆ, ಬೀದಿ ನಾಯಿಗಳ ಕಾಟ, ಪಾವಂಜೆ-ಹಳೆಯಂಗಡಿಗೆ ಪ್ರತ್ಯೇಕ ಆರೋಗ್ಯ ಕೇಂದ್ರ ನೀಡಿ, ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸಿರಿ ಎಂದು ಇನ್ನಿತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಯಶೋಧರ್ ಜೆ. ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು.
ಎಪಿಎಂಸಿ ಅಧ್ಯಕ್ಷ ಪ್ರಮೋದ್‌ಕುಮಾರ್, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಹಳೆಯಂಗಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಎಚ್.ಹಮೀದ್, ಅಬ್ದುಲ್ ಬಶೀರ್, ಎಚ್.ವಸಂತ ಬೆರ್ನಾಡ್, ಅಬ್ದುಲ್ ಖಾದರ್, ಚಿತ್ರಾ ಸುರೇಶ್, ಅಬ್ದುಲ್ ಅಝೀಝ್, ವಿನೋದ್‌ಕುಮಾರ್, ಸುಖೇಶ್, ಸುಗಂಧಿ, ಶರ್ಮಿಳಾ ಎನ್. ಕೋಟ್ಯಾನ್, ಅಶೋಕ್ ಬಂಗೇರ, ಚಿತ್ರಾ ಸುಖೇಶ್, ಗುಣವತಿ, ಮಾಲತಿ ಡಿ. ಕೋಟ್ಯಾನ್, ಪಂಚಾಯಿತಿರಾಜ್ ಇಂಜಿನಿಯರ್ ಪ್ರಶಾಂತ್ ಆಳ್ವ, ಶಿಶು ಅಭಿವೃದ್ಧಿ ಇಲಾಖೆಯ ಶೀಲಾವತಿ, ಮೆಸ್ಕಾಂ ಸಹಾಯಕ ಅಭಿಯಂತರರು ಗಜಾನನ ಅಭ್ಯಂಕರ್ ಎ., ಕೃಷಿ ಅಧಿಕಾರಿ ಅಬ್ದುಲ್ ಬಶೀರ್, ಗ್ರಾಮ ಕರಣಿಕ ಮೋಹನ್ ಬಿ. ಆರ್, ಸಸಿಹಿತ್ಲು ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಲೊಟಿಲ್ದಾ ಎ. ಲೋಬೊ, ಮೆಸ್ಕಾಂ ಹಳೆಯಂಗಡಿಯ ಕೌಶಿಕ್, ಪಶು ಸಂಗೋಪನಾ ಇಲಾಖೆಯ ಪ್ರಭಾಕರ ಶೆಟ್ಟಿ ಕೆಮ್ರಾಲ್ ಆರೋಗ್ಯ ಕೇಂದ್ರದ ಡಾ.ಮಾಧವ ಪೈ, ಉಪಸ್ಥಿತರಿದ್ದರು.
ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್ ಸ್ವಾಗತಿಸಿದರು, ಕಾರ್ಯದರ್ಶಿ ಕೇಶವ ದೇವಾಡಿಗ ವರದಿ ವಾಚಿಸಿ ವಂದಿಸಿದರು.

Kinnigoli-17011802

Comments

comments

Comments are closed.

Read previous post:
ಜ.18 ಏಳಿಂಜೆ – ಬ್ರಹ್ಮ ರಥ ಮೆರವಣಿಗೆ

ಕಿನ್ನಿಗೋಳಿ: ಸುಮಾರು 800 ವರ್ಷಗಳ ಹಿಂದೆ ಮುಲ್ಕಿ ಸೀಮೆ ಅರಸರಿಂದ ಸ್ಥಾಪಿಸಲ್ಪಟ್ಟ ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಳದಲ್ಲಿನ ನೂತನ ಬ್ರಹ್ಮ ರಥದ ಮೆರವಣಿಗೆ ಜ. 18 ಗುರುವಾರ...

Close