ಭಜನಾ ಸಂಕೀರ್ತನೆಯಿಂದ ಅತ್ಮಶುದ್ಧಿ

ಮಟ್ಟು : ಭಜನಾ ಸಂಕೀರ್ತನೆಯಿಂದ ಮನಸ್ಸಿನ ಆತ್ಮವನ್ನು ಶುದ್ಧೀಕರಿಸಿಕೊಂಡು ಆಧ್ಯಾತ್ಮಕತೆಯ ಒಲವನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ದೇವರಿಗೆ ಭಕ್ತಿಯಿಂದ ನೀಡುವ ವಿವಿಧ ಸೇವೆಗಳಲ್ಲಿ ಭಜಾನಾ ಸೇವೆಯು ಪಾವಿತ್ರ್ಯತೆಯನ್ನು ಹೊಂದಿದೆ. ಗ್ರಾಮೀಣ ಭಾಗದಲ್ಲಿ ಸಂಘಟನಾ ಶಕ್ತಿಗೆ ಭಜನೆ ಪೂರಕ ಎಂದು ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಹೇಳಿದರು.
ಮೂಲ್ಕಿ ಮಟ್ಟುವಿನ ಸಸಿತೋಟದ ಶ್ರೀ ವಿರೋಭ ರುಕುಮಾಯಿ ಭಜನಾ ಮಂದಿರದ 73ನೇ ವಾರ್ಷಿಕ ಭಜನಾ ಮಂಗಲೋತ್ಸವದಲ್ಲಿ ಭಜನಾ ಸಂಕೀರ್ತನೆಗೆ ದೀಪವನ್ನು ಪ್ರಜ್ವಲಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನವನ್ನು ಮಹೇಶ್ ಶಾಂತಿ ನೆರವೇರಿಸಿದರು.
ಮಂದಿರದ ಅರ್ಚಕರಾದ ಮಾಧವ ಸುವರ್ಣ, ಗ್ರಾಮದ ಹಿರಿಯರಾದ ಯಜ್ಞ ಪಂಡಿತ್, ಬಾಲಕೃಷ್ಣ ಸುವರ್ಣ, ಮೂಲ್ಕಿ ಪ್ರೆಸ್ ಕ್ಲಬ್‌ನ ಅಧ್ಯಕ್ಷ ನರೇಂದ್ರ ಕೆರೆಕಾಡು, ಬಾಲಕೃಷ್ಣ ಪೂಜಾರಿ, ಪಾರ್ವತಿ ಸುವರ್ಣ, ಯಾದವ ಕೋಟ್ಯಾನ್, ಸೋಮನಾಥ್, ಜಯ ಮಟ್ಟು ಮತ್ತಿತರರು ಉಪಸ್ಥಿತರಿದ್ದರು.
ಸಾಧು ಅಂಚನ್ ಮಟ್ಟು ಸ್ವಾಗತಿಸಿ, ಪ್ರಸ್ತಾವನೆಗೈದರು, ಮಟ್ಟು ಬಿಲ್ಲವ ಸಂಘದ ಅಧ್ಯಕ್ಷ ಉದಯ ಅಮಿನ್ ಮಟ್ಟು ನಿರೂಪಿಸಿ, ವಂದಿಸಿದರು.

Kinnigoli-17011804

Comments

comments

Comments are closed.

Read previous post:
Kinnigoli-17011803
ಜಯಶೀಲ ಎಮ್.ಸನಿಲ್

ಮೂಲ್ಕಿ: ಪತ್ರಕರ್ತ ಭಾಗ್ಯವಾನ್ ಜೆ.ಸನಿಲ್‌ರವರ ತಂದೆ ಹಾಗೂ ಹಿರಿಯ ತಲೆಮಾರಿನ ಪ್ರಸಿದ್ಧ ಛಾಯಾಗ್ರಾಹಕ ಜಯಶೀಲ ಎಮ್.ಸನಿಲ್(97) ವೃದ್ಯಾಪ್ಯದ ಕಾರಣದಿಂದ ಮಂಗಳವಾರ ಮೂಲ್ಕಿ ಪಂಚಮಹಲ್ ರಸ್ತೆಯ ಸ್ವಗೃಹ ಶ್ರೀ...

Close