ಜಯಶೀಲ ಎಮ್.ಸನಿಲ್

ಮೂಲ್ಕಿ: ಪತ್ರಕರ್ತ ಭಾಗ್ಯವಾನ್ ಜೆ.ಸನಿಲ್‌ರವರ ತಂದೆ ಹಾಗೂ ಹಿರಿಯ ತಲೆಮಾರಿನ ಪ್ರಸಿದ್ಧ ಛಾಯಾಗ್ರಾಹಕ ಜಯಶೀಲ ಎಮ್.ಸನಿಲ್(97) ವೃದ್ಯಾಪ್ಯದ ಕಾರಣದಿಂದ ಮಂಗಳವಾರ ಮೂಲ್ಕಿ ಪಂಚಮಹಲ್ ರಸ್ತೆಯ ಸ್ವಗೃಹ ಶ್ರೀ ಲಕ್ಷ್ಮೀ ನಿವಾಸದಲ್ಲಿ ನಿಧನರಾದರು.
1965 ರಲ್ಲಿ ಮೂಲ್ಕಿಯ ಪ್ರಥಮ ಸ್ಟುಡಿಯೋ “ಚಿತ್ರಾಲಯ”ವನ್ನು ಆರಂಭಿಸಿ ಕಪ್ಪು ಬಿಳುಪು ಫೋಟೋಗ್ರಫಿಯಲ್ಲಿ ಅಪ್ರತಿಮ ಸಾಧನೆ ಮಾಡಿದ್ದರು.ಅತ್ಯುತ್ತಮ ಭಜನೆ ಹಾಡುಗಾರರಾಗಿದ್ದ ಅವರು ಮೂಲ್ಕಿಯ ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂಡಳಿಯನ್ನು ಆರಂಭಿಸಿ ಯುವಕರಿಗೆ ಭಜನೆ ಹಾಡುಗಾರಿಕೆ ಕಲಿಸಿಕೊಟ್ಟಿದ್ದಲ್ಲದೆ ಮೂಲ್ಕಿಯಲ್ಲಿ ಭಜನಾ ನಗರ ಸಂಕೀರ್ತನೆ ಆರಂಭಿಸಿದ ಕೀರ್ತಿ ಹೊಂದಿದ್ದರು.
ಅವರಿಗೆ ಪತ್ನಿ,ಭಾಗ್ಯವಾನ್ ಸನಿಲ್ ಸಹಿತ 2 ಪುತ್ರರು.ಓರ್ವ ಪುತ್ರಿ ಇದ್ದಾರೆ.
ಶಾಸಕ ಕೆ.ಅಭಯಚಂದ್ರ ಜೈನ್ ಸಹಿತ ಹಲವು ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

Kinnigoli-17011803

Comments

comments

Comments are closed.

Read previous post:
Kinnigoli-17011802
ಹಳೆಯಂಗಡಿ ಗ್ರಾಮ ಸಭೆ

ಕಿನ್ನಿಗೋಳಿ: ಹಳೆಯಂಗಡಿ ಗ್ರಾಮ ಪಂಚಾಯಿತಿ ಪಾವಂಜೆ, ಸಸಿಹಿತ್ಲು ಮತ್ತು ಹಳೆಯಂಗಡಿ ಗ್ರಾಮದ ವ್ಯಾಪ್ತಿಯ ದ್ವಿತೀಯ ಹಂತದ ಗ್ರಾಮ ಸಭೆ ಸಸಿಹಿತ್ಲು ಗ್ರಾಮದ ಅಗ್ಗಿದಕಳಿಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ...

Close