ಕಿನ್ನಿಗೋಳಿ ಜ.20 ಮಕ್ಕಳ ಸಪ್ತಮ ನಾಟಕೋತ್ಸವ

ಕಿನ್ನಿಗೋಳಿ: ಉಡುಪಿ ಜಿಲ್ಲೆ ಮತ್ತು ಕಾಸರಗೋಡು ಜಿಲ್ಲೆ ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ (ರಿ.) ಮಂಗಳೂರು ಇವರ ಸಹಯೋಗದಲ್ಲಿ ಯುಗಪುರುಷ ಕಿನ್ನಿಗೋಳಿ ಅರ್ಪಿಸುವ ಮಕ್ಕಳ ಸಪ್ತಮ ನಾಟಕೋತ್ಸವ – 2018 ಜ.20 ಶನಿವಾರ ಬೆಳಿಗ್ಗೆ ಗಂಟೆ 9.30ರಿಂದ ಸಂಜೆ ಗಂಟೆ 4ರತನಕ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಜರಗಲಿದೆ.
ಉಡುಪಿ, ಕಾಸರಗೋಡು, ದ.ಕ.ಜಿಲ್ಲೆಯ ೮ ಶಾಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ನಾಟಕ ಪ್ರದರ್ಶನ ನೀಡಲಿರುವರು. ಮಂಗಳೂರು ಉರ್ವ ಪೊಂಪೈ ಪ್ರೌಢ ಶಾಲೆ-“ರಾಜ್ಯಾಭಿಷೇಕ”, ಅಶೋಕನಗರ ಹಿ.ಪ್ರಾ.ಶಾಲೆ-“ಸುಖದ ಮೂಲ”, ಚೇವಾರು ಶ್ರೀ ಶಾರದಾ ಎ.ಯು.ಪಿ. ಶಾಲೆ-“ಆರಡಿ ಮಣ್ಣು”, ಸುರತ್ಕಲ್ ಇಡ್ಯಾ ವಿದ್ಯಾದಾಯಿನಿ ಹಿ.ಪ್ರಾ.ಶಾಲೆ-“ಮಳೆ ಬಂತು ಮಳೆ”, ಸಾಸ್ತಾನ ವಿದ್ಯೋದಯ ಹಿ.ಪ್ರಾ.ಶಾಲೆ-“ಅಂತಿಮ ಕ್ಷಣ”, ಕಾಸರಗೋಡು ಪೆರ್ಮುದೆ ಬಿ.ಪಿ.ಪಿ.ಎ.ಎಲ್.ಪಿ. ಶಾಲೆ-“ಅದ್ಭುತ ಪಾತ್ರೆ”, ಮಂಗಳೂರು ಅಶೋಕ ವಿದ್ಯಾಲಯ ಆಂಗ್ಲಮಾಧ್ಯಮ ಪ್ರೌಢ ಶಾಲೆ-“ಹಲಗಲಿಯ ಬೇಡರು”, ಕಾಸರಗೋಡು ಸರಕಾರಿ ಪ್ರೌಢ ಶಾಲೆ ಎಡನೀರು ಶಾಲೆ-“ಅಂಗೀಕಾರ” ನಾಟಕಗಳನ್ನು ಪ್ರದರ್ಶಿಸಲಿರುವರು ಎಂದು ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ (ರಿ.) ಮಂಗಳೂರು ಇದರ ಅಧ್ಯಕ್ಷ ಬಿ. ಶ್ರೀನಿವಾಸ ರಾವ್, ಯುಗಪುರುಷದ ಕೆ.ಭುವನಾಭಿರಾಮ ಉಡುಪರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
ತೋಕೂರು ಯುವಕ ಸಂಘ ಸುವರ್ಣ ಮಹೋತ್ಸವ

ಕಿನ್ನಿಗೋಳಿ: ತೋಕೂರು ಯುವಕ ಸಂಘ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದು ತೋಕೂರು ಯುವಕ ಸಂಘ, ಸುವರ್ಣ ಮಹೋತ್ಸವ ಸಮಿತಿ ಮತ್ತು ಮಹಿಳಾ ಮಂಡಲದ ಸಂಯುಕ್ತ ಆಶ್ರಯದಲ್ಲಿ ಜನವರಿ 20 ರಿಂದ...

Close