ಪಡುಪಣಂಬೂರು ಗ್ರಾಮ ಸಭೆ

ಕಿನ್ನಿಗೋಳಿ: ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾಯರು ಕೆರೆಕಾಡು ರಸ್ತೆಯ ಹಾಗೂ ಜಳಕದ ಕೆರೆಯ ಅಭಿವೃದ್ಧಿಯ ಕಾಮಗಾರಿ ನಿಂತಿದೆ ಯಾಕೆ ರಾಜಕೀಯ ಪರ ವಿರೋಧದ ವಾಗ್ವಾದಗಳ ನಡುವೆ ಗ್ರಾಮದ ಅಭಿವೃದ್ಧಿ ನಿಂತಿದೆ. ಜನಪ್ರತಿನಿಧಿಗಳ ರಾಜಕೀಯ ಹಾಗೂ ಸ್ಥಳೀಯ ನಾಯಕರ ಹಸ್ತಕ್ಷೇಪಗಳು ಸರಿಯಲ್ಲ ನಮಗೆ ಅಭಿವೃದ್ಧಿ ಮುಖ್ಯ ಕೂಡಲೇ ಕಾಮಗಾರಿ ಪ್ರಾರಂಭಿಸಿ ಇದು ಯಾರ ಮೇಲ್ವಿಚಾರಿಕೆಯಲ್ಲಿ ನಡೆಯಲಿದೆ ಅದನ್ನು ಸ್ಪಷ್ಟಪಡಿಸಿ ಎಂದು ಗ್ರಾಮಸ್ಥರು ಗ್ರಾಮಸಭೆಯಲ್ಲಿ ಆಗ್ರಹಿಸಿದ ಘಟನೆ ಪಡುಪಣಂಬೂರು ಗ್ರಾಮ ಸಭೆಯಲ್ಲಿ ನಡೆಯಿತು.
ಬೆಳ್ಳಾಯರು ಕೆರೆಕಾಡಿನ ಸರಕಾರಿ ಶಾಲೆಯಲ್ಲಿ ಪಡುಪಣಂಬೂರು ಗ್ರಾಮ ಪಂಚಾಯಿತಿಯ ಎರಡನೇ ಹಂತದ ಗ್ರಾಮ ಸಭೆಯು ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದಾಗ ಗ್ರಾಮಸ್ಥರಾದ ಮಾಧವ ಶೆಟ್ಟಿಗಾರ್ ಹಾಗೂ ಗ್ರಾಮಸ್ಥರು ಪ್ರಶ್ನಿಸಿ, ರಸ್ತೆ ಮತ್ತು ಕೆರೆ ಕಾಮಗಾರಿ ನಿಂತಿದೆ ಯಾಕೆ? ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಮಾಹಿತಿ ಇಲ್ಲದಿದ್ದರೆ ಏನರ್ಥ ಅಭಿವೃದ್ಧಿಯಲ್ಲಿ ದಯವಿಟ್ಟು ರಾಜಕೀಯ ಮಾಡಬೇಡಿ ಎಂದರು.
ಕೆರೆಕಾಡಿನ ಹೌಸಿಂಗ್ ಬೋರ್ಡ್ ಕಾಲೋನಿ ಬಳಿ ಕುಡಿಯುವ ನೀರು ಕಲುಷಿತಗೊಂಡಿದ್ದು ಕನಿಷ್ಠ ವಾರಕ್ಕೆ ಎರಡು ಬಾರಿಯಾದರೂ ಬೇರೆ ಕಡೆಗಳಿಂದ ಶುದ್ಧ ನೀರು ಸರಬರಾಜು ಮಾಡಿ ಎಂದು ಗ್ರಾಮಸ್ಥೆ ಗೀತಾ ಕೇಳಿಕೊಂಡರು. ಪಂಚಾಯಿತಿ ಆಡಳಿತ ಹಾಗೂ ನೀರಿನ ಸಮಿತಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.

ಹಾವು ಮತ್ತು ನಾಯಿ ಕಡಿತಕ್ಕೆ ಸೂಕ್ತ ಚುಚ್ಚು ಮದ್ದು ಒದಗಿಸಿಕೊಡಬೇಕು, ಮೆಸ್ಕಾಂ ಸಿಬ್ಬಂದಿಗಳಿಂದ ರಸ್ತೆ ಬದಿಯ ಮರ ಗೆಲ್ಲು ಕಡಿದ ನಂತರ ತೆಗೆಯುವ ವ್ಯವಸ್ಥೆ, ಮಾತೃ ಪೂರ್ಣ ಯೋಜನೆಯಲ್ಲಿ ಬದಲಾವಣೆ ಮಾಡಿ, ಕದಿಕೆ-ಹೊಗೆಗುಡ್ಡೆ ನದಿ ತೀರದ ರಸ್ತೆ ಬದಿಗೆ ತಡೆಗೋಡೆ, ಬಾವಿ ನೀರು ಉಪ್ಪಾಗುವ ಸಮಸ್ಯೆ, ಗ್ರಾಮ ಪಂಚಾಯಿತಿಗೆ ಮೂಡಾ ನಿಯಮಾವಳಿಗಳಿಂದ ಅನಾನುಕೂಲ, ನೀರಿನ ಸಮಸ್ಯೆ, ಬೋರ್‌ವೆಲ್ ಅವಶ್ಯಕತೆ ಇತ್ಯಾದಿ ಸಮಸ್ಯೆಗಳ ಬಗ್ಗೆ ಆರೋಗ್ಯಕರ ಚರ್ಚೆ ನಡೆಯಿತು.
ಮಂಗಳೂರು ತಾ.ಪಂ. ಸದಸ್ಯ ದಿವಾಕರ ಕರ್ಕೇರ, ಗ್ರಾ. ಪಂ. ಉಪಾಧ್ಯಕ್ಷೆ ಸುರೇಖಾ ಕರುಣಾಕರ್, ಸದಸ್ಯರಾದ ವಿನೋದ್ ಸಾಲ್ಯಾನ್ ಬೆಳ್ಳಾಯರು, ಕುಸುಮಾ, ಲೀಲಾ ಬಂಜನ್, ಪುಷ್ಪಾವತಿ, ದಿನೇಶ್ ಕುಲಾಲ್, ಸಂತೋಷ್‌ಕುಮಾರ್, ಹೇಮಂತ್ ಅಮೀನ್, ಮಂಜುಳಾ, ವಜನಾ, ಸಂಪಾವತಿ, ಉಮೇಶ್ ಪೂಜಾರಿ, ಪುಷ್ಪಾ, ಮೆಸ್ಕಾಂ ಇಲಾಖೆಯ ಕೌಶಿಕ್, ದಾಮೋದರ್, ಕಂದಾಯ ಇಲಾಖೆಯ ಮೋಹನ್ ಟಿ.ಆರ್., ಪಶು ಸಂಗೋಪನಾ ಇಲಾಖೆಯ ಪ್ರಭಾಕರ ಶೆಟ್ಟಿ, ಕೃಷಿ ಇಲಾಖೆಯ ವೈ.ಎಸ್. ನಿಂಗಣ್ಣಗೌಡರ್, ಪಂಚಾಯತ್‌ರಾಜ್ ಇಂಜಿನಿಯರ್ ಪ್ರಶಾಂತ್ ಆಳ್ವಾ, ಅಂಗನವಾಡಿ ಮೇಲ್ವಿಚಾರಕಿರಾದ ಅಶ್ವಿನಿ ಎಂ.ಕೆ., ನಾಗರತ್ನ, ಕೆಮ್ರಾಲ್ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಮಾದವ ಪೈ, ಸುಜಾತಾ, ವಾರಿಜಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜಾ ಸ್ವಾಗತಿಸಿದರು, ಕಾರ್ಯದರ್ಶಿ ಲೋಕನಾಥ ಭಂಡಾರಿ ವರದಿ ವಾಚಿಸಿ ವಂದಿಸಿದರು. ಲೆಕ್ಕಾಧಿಕಾರಿ ಶರ್ಮಿಳಾ ಹಿಮಕರ್ ಕದಿಕೆ ಲೆಕ್ಕಪತ್ರ ಮಂಡಿಸಿದರು.

Kinnigoli-19011803

 

Comments

comments

Comments are closed.

Read previous post:
Kinnigoli-19011802
ಏಳಿಂಜೆ – ನೂತನ ಬ್ರಹ್ಮ ರಥದ ಮೆರವಣಿಗೆ

ಕಿನ್ನಿಗೋಳಿ: ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಳದ ನೂತನ ಬ್ರಹ್ಮ ರಥದ ಮೆರವಣಿಗೆ ಗುರುವಾರ ನಡೆಯಿತು. ಮಧ್ಯಾಹ್ನ 2 ಗಂಟೆಗೆ ಅಶ್ವಥಪುರದ ರಥ ಶಿಲ್ಪಿ ಶಿವಪ್ರಸಾದ್ ಆಚಾರ್ಯರ ನಿವಾಸದಿಂದ ದೇವಳ...

Close