ತೋಕೂರು ಯುವಕ ಸಂಘ ಸುವರ್ಣ ಮಹೋತ್ಸವ

ಕಿನ್ನಿಗೋಳಿ: ತೋಕೂರು ಯುವಕ ಸಂಘ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದು ತೋಕೂರು ಯುವಕ ಸಂಘ, ಸುವರ್ಣ ಮಹೋತ್ಸವ ಸಮಿತಿ ಮತ್ತು ಮಹಿಳಾ ಮಂಡಲದ ಸಂಯುಕ್ತ ಆಶ್ರಯದಲ್ಲಿ ಜನವರಿ 20 ರಿಂದ 21 ರವರೆಗೆ ಜಂಟಿ ವಾರ್ಷಿಕೋತ್ಸವ, ಸುವರ್ಣ ಸಭಾಂಗಣ ಉದ್ಘಾಟನೆ ಮತ್ತು ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತೋಕೂರು ಯುವಕ ಸಂಘದ ಅಧ್ಯಕ್ಷ ಹರಿದಾಸ್ ಭಟ್ ಹೇಳಿದರು. ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದ ವಠಾರದಲ್ಲಿರುವ ತೋಕೂರು ಯುವಕ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 1967 ರಲ್ಲಿ ಆರಂಭಗೊಂಡು ಪರಿಸರದಲ್ಲಿ ಕೃಷಿ ಮಾಹಿತಿ, ವ್ಯೆದ್ಯಕೀಯ ಶಿಬಿರ, ಕಾಲು ಸಂಕ ರಚನೆ ಮುಂತಾದ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ದ.ಕ.ಜಿಲ್ಲಾ ಅತ್ಯುತ್ತಮ ಯುವಕ ಮಂಡಳಿ ಪ್ರಶಸ್ತಿ, ದ.ಕ.ಜಿಲ್ಲಾ ಅತ್ಯುತ್ತಮ ಯುವಕ ಸಂಘ ಪ್ರಶಸ್ತಿ, ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪಡೆದುಕೊಂಡಿದೆ. ಸುವರ್ಣ ಮಹೋತ್ಸವದ ಅಂಗವಾಗಿ ಸುಮಾರು ೨೫ ಲಕ್ಷ ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು 2.5 ಲಕ್ಷ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ,1.5 ಲಕ್ಷ ವೆಚ್ಚದಲ್ಲಿ ಸುಬ್ರಹ್ಮಣ್ಯ ದೇವಳದ ಮುಂಭಾಗದಲ್ಲಿ ಸೋಲಾರ್ ಹ್ಯೆಮಾಸ್ಕ್ ದೀಪ ಅಳವಡಿಕೆ, ಸುವರ್ಣ ಸಭಾಂಗಣ ನಿರ್ಮಾಣ, ಗ್ರಾಮದ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮುಳಿ ಹುಲ್ಲಿನ ಮನೆಗೆ ಹಂಚಿನ ಮೇಲ್ಚಾವಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಜನವರಿ 20 ರ ಬೆಳಿಗ್ಗೆ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದ ವಠಾರದಲ್ಲಿ ನಡೆಯಲಿರುವ ಯುವಕ ಸಂಘ ತೋಕೂರು ಮತ್ತು ಮಹಿಳಾ ಮಂಡಲದ ವಾರ್ಷಿಕ ಸಮಾರಂಭದ ಧ್ವಜಾರೋಹಣವನ್ನು ತೋಕೂರು ಶ್ರೀ ಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಗೌರಿ ನೆರವೇರಿಸಲಿದ್ದಾರೆ. ಸಾಯಂಕಾಲ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರತ್ಕಲ್ ಎನ್ ಐ ಟಿ ಕೆ ಹಿರಿಯ ಪ್ರಾಧ್ಯಾಪಕ ಮುರಳೀಧರ ಕುಲಕರ್ಣಿ ವಹಿಸಲಿದ್ದು ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕ್ರತ ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ಗಾಂಧಿಗ್ರಾಮ ಪುರಸ್ಕಾತ ಪಡುಪಣಂಬೂರು ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ತೋಕೂರಿನ ಟೋರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ಅನ್ನು ಅಭಿನಂದಿಸಲಾಗುವುದು. ಲಯನ್ಸ್ ಪ್ರಾಂತ್ಯಾಧ್ಯಕ್ಷ ಓಸ್ವಾಲ್ಡ್ ಡಿ ಸೋಜ, ಕರಾವಳಿ ಕಾವಲು ಪೊಲೀಸ್ ಪಡೆ ಹೆಜಮಾಡಿ ಪೋಲೀಸ್ ನಿರೀಕ್ಷಕ ಹರಿಶ್ಚಂದ್ರ ಕೆ ಪಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಂಗಳೂರು ತಾಲೂಕು ಯೋಜನಾಧಿಕಾರಿ ಉಮ್ಮರಬ್ಬ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ಹಾಗೂ ಮಹಿಳಾ ಮಂಡಲದ ಸದಸ್ಯೆಯರಿಂದ ನೃತ್ಯ ವ್ಯೆವಿಧ್ಯ, ರಾತ್ರಿ ಮನೋಜ್ ಗಣೇಶ್‌ಪುರ ನಿರ್ದೇಶನದಲ್ಲಿ ಮಹಿಳಾಮಂಡಲದ ಸದಸ್ಯೆಯರಿಂದ *ತುಳುನಾಡ ಕ್ಷೇತ್ರ ದರ್ಶನ* ಕಿರು ನೃತ್ಯ ರೂಪಕ ಪ್ರದರ್ಶನ ನಡೆಯಲಿದೆ. ಜ. 21 ರ ಭಾನುವಾರ ಸಂಜೆ ಯುವಕ ಸಂಘದ ೫೦ನೇ ವರ್ಷಾಚರಣೆ ಸವಿನೆನಪಿಗಾಗಿ ನಿರ್ಮಿಸಲ್ಪಟ್ಟ ಸುವರ್ಣ ಸಭಾಂಗಣ ಉದ್ಘಾಟನೆ ಹಾಗೂ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ. ಅಧ್ಯಕ್ಷತೆಯನ್ನು ಮೂಲ್ಕಿ ಸೀಮೆ ಅರಸರಾದ ಎಂ ದುಗ್ಗಣ್ಣ ಸಾವಂತರು ವಹಿಸಲಿದ್ದು ನೂತನ ಸಭಾಂಗಣವನ್ನು ನಿಟ್ಟೆ ವಿ ವಿ ಯ ಕುಲಪತಿ ಎನ್ ವಿನಯ ಹೆಗ್ಡೆ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ವಕೀಲ ರಾಜ್ಯದ ಮಾಜಿ ಅಡ್ವೋಕೇಟ್ ಜನರಲ್ ಬಿ ವಿ ಆಚಾರ್ಯರನ್ನು ಸನ್ಮಾನಿಸಲಾಗುವುದು. ಹೊಸ ದಿಗಂತ ಕನ್ನಡ ಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ ಎನ್ ಪ್ರಕಾಶ್ ರವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದು ಕಟೀಲು ದೇವಳ ಪ್ರಥಮ ದರ್ಜೆ ಕಾಲೇಜು ಪ್ರಿನ್ಸ್‌ಪಾಲ್ ಎಂ ಬಾಲಕೃಷ್ಣ ಶೆಟ್ಟಿ ಸಮಾರೋಪ ಭಾಷಣ ಮಾಡಲಿದ್ದು ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ಹಾಗೂ ಮಹಿಳಾ ಮಂಡಲದ ಸದಸ್ಯೆಯರಿಂದ ನೃತ್ಯ ವ್ಯೆವಿಧ್ಯ, ರಾತ್ರಿ ಚ್ಯೆತನ್ಯ ಕಲಾವಿದರು ಬ್ಯೆಲೂರು ಅವರಿಂದ ಪ್ರಸನ್ನ ಶೆಟ್ಟಿ ಬ್ಯೆಲೂರು ನಿರ್ದೇಶನದ *ತೂಯಿನಾಯೆ ಪೋಯೆ* ತುಳು ಹಾಸ್ಯಮಯ ನಾಟಕ ಪ್ರದರ್ಶನ ನಡೆಯಲಿದೆ ಮಾಡಲಿದ್ದಾರೆಂದು ಯುವಕ ಸಂಘದ ಸ್ಥಾಪಕ ಸದಸ್ಯ ಎಲ್ ಕೆ ಸಾಲ್ಯಾನ್ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಟಿ ಪುರುಷೋತ್ತಮ ರಾವ್, ಪ್ರಧಾನ ಕಾರ್ಯದರ್ಶಿ ಆರ್.ಎನ್ ಶೆಟ್ಟಿಗಾರ್, ಕೋಶಾಧಿಕಾರಿ ಪಿ ಸಿ ಕೋಟ್ಯಾನ್, ದಾಮೋದರ ಶೆಟ್ಟಿ, ಶೇಖರ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-17011804
ಭಜನಾ ಸಂಕೀರ್ತನೆಯಿಂದ ಅತ್ಮಶುದ್ಧಿ

ಮಟ್ಟು : ಭಜನಾ ಸಂಕೀರ್ತನೆಯಿಂದ ಮನಸ್ಸಿನ ಆತ್ಮವನ್ನು ಶುದ್ಧೀಕರಿಸಿಕೊಂಡು ಆಧ್ಯಾತ್ಮಕತೆಯ ಒಲವನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ದೇವರಿಗೆ ಭಕ್ತಿಯಿಂದ ನೀಡುವ ವಿವಿಧ ಸೇವೆಗಳಲ್ಲಿ ಭಜಾನಾ ಸೇವೆಯು ಪಾವಿತ್ರ್ಯತೆಯನ್ನು ಹೊಂದಿದೆ....

Close