ಕೆಮ್ರಾಲ್ ಗ್ರಾಮ ಸಭೆ

ಕಿನ್ನಿಗೋಳಿ: ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜ ಕೆಮ್ರಾಲ್ , ಕೊಯಿಕುಡೆ ಗ್ರಾಮ ಗಳ 2017-18 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಂ. ಅಂಚನ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.
ಪಡಿತರ ವ್ಯವಸ್ಥೆ ಪಕ್ಷಿಕೆರೆಯಲ್ಲಿ ಸರಿಯಾಗಿ ಸಿಗುತ್ತಿಲ್ಲ ಪ್ರತೀ ಕಾರ್ಡಿಗೆ 2 ಕೆ. ಜಿ ಕಡಿಮೆ ಸಿಗುತ್ತದೆ ಇದು ಯಾಕೆ? ಗಂಟೆ ಕಟ್ಟಳೆ ಪಡಿತರಗಾಗಿ ಕಾದು ಕುಳಿತುಕೊಳ್ಳಬೇಕು. ಸರ್ವರ್ ಸಮಸ್ಯೆ ಬಗೆ ಹರಿಯುವುದು ಯಾವಾಗ ಎಂದು ಗ್ರಾಮಸ್ಥ ಮಹಿಳೆಯರು ಒಕ್ಕೊರಲಿನಿಂದ ಕೇಳಿದಾಗ ಉತ್ತರಿಸಿದ ಆಹಾರ ಇಲಾಖಾಧಿಕಾರಿ ವಾಸು ಶೆಟ್ಟಿ ಉತ್ತರಿಸಿ ಮುಂದಿನ ತಿಂಗಳಿನಿಂದ ವೇಗದ ಬ್ರಾಡ್ ಬ್ಯಾಂಡ್ ಸಂಪರ್ಕ ಪಡೆಯಲಾಗುತ್ತದೆ ಎಂದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಗದ್ದೆಯ ಬಯಲು ಪ್ರದೇಶಗಳಲ್ಲಿ ತಂತಿಗಳು ನಿಗದಿಕ್ಕಿಂತ ಹೆಚ್ಚಾಗಿ ಜೋತು ಬಿದ್ದು ಅಪಾಯಕಾರಿಯಾಗಿದೆ ಮೆಸ್ಕಾಂ ಇಲಾಖೆ ನಿರ್ಲಕ್ಷ ತೋರದೆ ಕ್ರಮ ಕೈ ಗೊಳ್ಳಬೇಕು ಎಂದು ಬಾಲದಿತ್ಯ ಆಳ ಹೇಳಿದರು.
ಇಲಾಖಾ ಅಧಿಕಾರಿಗಳ ಗೈರು ನಿರ್ಣಯ ಮಾಡಿ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಉತ್ತರಿಸಿ ನಿರ್ಣಯ ಮಾಡಿ ಜಿಲ್ಲಾ ಪಂಚಾಯಿತಿಗೆ ಕಳುಹಿಸಿ ಅಲ್ಲಿ ಸಬೆಯಲ್ಲಿ ಈ ಬಗ್ಗೆ ಚರ್ಚಿಸಿ ಕ್ರಮ ಜರಗಿಸಲಾಗುವುದು ಎಂದು ಹೇಳಿದರು.
10 ತಿಂಗಳು ಆದರೂ ಮತದಾರರ ಗುರುತಿನ ಚೀಟಿ ಸರಿಪಡಿಸಿ ಹಾಗೂ ತಿದ್ದುಪಡಿಗಾಗಿ ಕಳುಹಿಸಿದರೇ ಬಂದಿಲ್ಲ ಯಾಕೇ ಎಂದು ಕುಮಾರ್ ಕೇಳಿದಾಗ ಈ ಮುಂದಿನ ಚುನಾವಣೆಗಿಂತ ಮೊದಲು ಬರುತ್ತೆ ಎಂದು ಕಂದಾಯ ಇಲಾಖೆಯ ಸಂತೋಷ್ ತಿಳಿಸಿದರು.
ಮದರ್‌ತೇರಸ ವಸತಿ ನಿವೇಶದಲ್ಲಿ ಒಳಚಂರಡಿ ನೀರು ರಸ್ತೆಯಲ್ಲಿ ಹರಿಯುತ್ತಿದೆ ಇದರಿಂದ ದುರ್ನಾತ ಇದೆ ಸರಿಪಡಿಸಿ ಎಂದು ಕಿಶೋರ್ ಡಯಾಸ್ ದೂರು ನೀಡಿದಾಗ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಿಡಿಒ ರಮೇಶ್ ರಾಥೋಡ್ ತಿತಿಳಿಸಿದರು.
ಚರ್ಚ್ ಬಸ್ ಸ್ಟಾಪ್ ಅಕ್ರಮ ಅಡ್ಡೆಯಾಗಿದೆ ಪುಂಡು ಪೋಕರಿಗಳು ತಾಣವಾಗಿದೆ ಅದನ್ನು ತೆರವು ಗೊಳಿಸಿ ಎಂದು ಸೀತಾರಾಮ ತಿಳಿಸಿದಾಗ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಯಿತು. ಕೆಮ್ರಾಲ್ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ. ಮಾಧವ ಪೈ, ಶಿಕ್ಷಣ ಇಲಾಖೆಯ ಐರಿನ್ ಪಿಂಟೋ, ಪಂಚಾಯತ್ ರಾಜ್ ಇಂಜೀನಿಯರ್ ಪ್ರಶಾಂತ್ ಆಳ್ವ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಶ್ವಿನಿ, ಕೃಷಿ ಇಲಾಖೆಯ ಎಲ್ಲಣ್ಣ ಗೌಡ ಇಲಾಖಾ ಮಾಹಿತಿ ನೀಡಿದರು.
ತಾ. ಪಂ. ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಶುಭಲತಾ ಶೆಟ್ಟಿ ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್, ಗ್ರಾಮ ಪಂಚಾಯಿತಿ ಸದಸ್ಯರಾದ, ದೀಪಕ್ ಕೋಟ್ಯಾನ್, ಲೀಲಾ ಪೂಜಾರ್ತಿ, ಮಯ್ಯದ್ದಿ, ಸುಧಾಕರ ಶೆಟ್ಟಿ, ಸೇಸಪ್ಪ ಸಾಲ್ಯಾನ್, ಸುರೇಶ್ ದೇವಾಡಿಗ ಪಂಜ, ಹರಿಪ್ರಸಾದ್, ರೇವತಿ ಶೆಟ್ಟಿಗಾರ್, ಮಮತಾ ಅಮೀನ್, ಪ್ರಮೀಳಾ ಡಿ. ಶೆಟ್ಟಿ , ಸುಮತಿ, ಆಶಾಲತಾ, ಮಾಲತಿ ಆಚಾರ್ಯ, ಲೋಹಿತ್ ಉಪಸ್ಥಿತರಿದ್ದರು ಪಿಡಿಒ ರಮೇಶ್ ರಾಥೋಡ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕೇಶವ ದೇವಾಡಿಗ ವಂದಿಸಿದರು.

Kinnigoli-20011802

Comments

comments

Comments are closed.

Read previous post:
Kinnigoli-20011801
ಕೆಂಚನಕೆರೆ : ಸ್ವಚ್ಚತಾ ಅಂದೋಲನ

ಕಿನ್ನಿಗೋಳಿ: ವಿದ್ಯಾರ್ಥಿಗಳಿಗೆ ಸ್ವಚ್ಚತೆ ಹಾಗೂ ಪರಿಸರದ ಬಗ್ಗೆ ತಿಳಿಹೇಳಿಧಗ ಭವಿಷ್ಯದಲ್ಲಿ ಮಾಲಿನ್ಯ ಮುಕ್ತ ಸಮಾಜ ಕಟ್ಟಬಲ್ಲರು ಎಂದು ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ್ ರಾವ್ ಹೇಳಿದರು. ಕಾರ್ನಾಡು...

Close