ಕೆಂಚನಕೆರೆ : ಸ್ವಚ್ಚತಾ ಅಂದೋಲನ

ಕಿನ್ನಿಗೋಳಿ: ವಿದ್ಯಾರ್ಥಿಗಳಿಗೆ ಸ್ವಚ್ಚತೆ ಹಾಗೂ ಪರಿಸರದ ಬಗ್ಗೆ ತಿಳಿಹೇಳಿಧಗ ಭವಿಷ್ಯದಲ್ಲಿ ಮಾಲಿನ್ಯ ಮುಕ್ತ ಸಮಾಜ ಕಟ್ಟಬಲ್ಲರು ಎಂದು ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ್ ರಾವ್ ಹೇಳಿದರು.
ಕಾರ್ನಾಡು ಸಿ. ಎಸ್. ಐ. ಪ್ರೌಢಶಾಲೆ, ಕಿಲ್ಪಾಡಿ ಗ್ರಾಮ ಪಂಚಾಯಿತಿ ಹಾಗೂ ಮಂಗಳೂರು ರಾಮಕೃಷ್ಣ ಮಿಷನ್ ಸಂಸ್ಥೆಯ ಆಶ್ರಯದಲ್ಲಿ ಶುಕ್ರವಾರ ನಡೆದ ಸ್ವಚ್ಚತಾ ದಿವಸ್ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಂಚನಕೆರೆ ಅಂಗರಗುಡ್ಡೆಯ ಬಳಿಯಲ್ಲಿ ಕಸದ ತೊಟ್ಟಿ ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾವವಿದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತಕರಾರು ಇಲ್ಲದ ಸೂಕ್ತ ಜಾಗ ದೊರಕಿಲ್ಲ ಮೂಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಿಲ್ಪಾಡಿ ಗ್ರಾಮ ಪಂಚಾಯಿತಿ ಪಿಡಿಓ ಹರಿಶ್ಚಂದ್ರ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯ ರವೀಂದ್ರ ದೇವಾಡಿಗ, ನಿವೃತ್ತ ಬ್ಯಾಂಕ್ ಅಧಿಕಾರಿ ಮಾಧವ್ ರಾವ್, ಗಣೇಶ್ ಶೆಟ್ಟಿ, ಶಾಲಾ ಶಿಕ್ಷಕ ಹರಿಶ್ಚಂದ್ರ, ಶಿಕ್ಷಕಿ ಪುಷ್ಪ ಲತಾ, ಜಯಶ್ರೀ, ನಾರಾಯಣ ಕಾಮತ್ ಕೆಂಚನಕೆರೆ, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
ಶಾಲೆಗಳ ವತಿಯಿಂದ ಅಂಗರಗುಡ್ಡೆ ಹಾಗೂ ಪುನರೂರು ಕುಕ್ಕುದ ಕಟ್ಟೆಯ ಬಳಿಯಲ್ಲಿ ಕಸದ ತೊಟ್ಟಿ ರಚಿಸುವ ಬಗ್ಗೆ ಕಿಲ್ಪಾಡಿ ಹಾಗೂ ಕಿನ್ನಿಗೋಳಿ ಪಂಚಾಯಿತಿಗಳಿಗೆ ಮನವಿ ನೀಡಲಾಯಿತು. 100 ಕ್ಕೂ ಮಿಕ್ಕಿ ಮಕ್ಕಳು ರಸ್ತೆ ಬದಿಯಲ್ಲಿ ಬಿದ್ದ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿದರು.

Kinnigoli-20011801

Comments

comments

Comments are closed.

Read previous post:
ಫೆ. 5-8 ಪುನರೂರು ಜಾತ್ರಾ ಮಹೋತ್ಸವ

ಕಿನ್ನಿಗೋಳಿ: ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಫೆಬ್ರವರಿ 5 ರಿಂದ 8 ರ ವರೆಗೆ ವರ್ಷಾವಧಿ ಜಾತ್ರಾ ಮಹೋತ್ಸವ ನಡೆಯಲಿದೆ. ಫೆ. 5 ರ ಬೆಳಿಗ್ಗೆ ಶತರುದ್ರಾಭಿಷೇಕ,ರಾತ್ರಿ ದೊಡ್ಡ...

Close