ಫೆ. 5-8 ಪುನರೂರು ಜಾತ್ರಾ ಮಹೋತ್ಸವ

ಕಿನ್ನಿಗೋಳಿ: ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಫೆಬ್ರವರಿ 5 ರಿಂದ 8 ರ ವರೆಗೆ ವರ್ಷಾವಧಿ ಜಾತ್ರಾ ಮಹೋತ್ಸವ ನಡೆಯಲಿದೆ.
ಫೆ. 5 ರ ಬೆಳಿಗ್ಗೆ ಶತರುದ್ರಾಭಿಷೇಕ,ರಾತ್ರಿ ದೊಡ್ಡ ರಂಗ ಪೂಜೆ, ಮಧ್ಯಾಹ್ನ ಧ್ವಜಾರೋಹಣ, ರಾತ್ರಿ ಬಲಿ, ಫೆ. 6 ರ ಮಧ್ಯಾಹ್ನ ಬಲಿ, ರಾತ್ರಿ ಹೂವಿನ ಪೂಜೆ, ಬಲಿ, ಬಾಕಿಮಾರು ದೀಪ, ಫೆ.7 ರ ಮಧ್ಯಾಹ್ನ ರಥೋತ್ಸವ,ರಾತ್ರಿ ಭೂತ ಬಲಿ,8 ರ ಬೆಳಿಗ್ಗೆ ಕವಾಟೋದ್ಘಾಟನೆ,ರಾತ್ರಿ ರಥೋತ್ಸವ, ಫೆ. 9 ರ ಬೆಳಿಗ್ಗೆ ಸಂಪ್ರೋಕ್ಷಣೆ, ಮಹಾ ಮಂತ್ರಾಕ್ಷತೆ, ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಪ್ರತಿ ದಿನ ಸಂಜೆ ಸಾಂಸ್ಕ್ರತಿಕ ಕಾರ್ಯಕ್ರಮ, ಫೆ. 10 ರ ಶನಿವಾರ ಸಂಜೆ ದೇವಳಕ್ಕೆ ಸಂಬಂಧಪಟ್ಟ ಕುಜಿಂಗಿರಿ ಶ್ರೀ ರಕ್ತೇಶ್ವರಿ ದ್ಯೆವದ ನೇಮೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Kinnigoli-19011804
ಎಳತ್ತೂರು – ಒವರ್ ಹೆಡ್ ಟ್ಯಾಂಕ್‌ ಶಿಲಾನ್ಯಾಸ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಳತ್ತೂರು ನೆಲಗುಡ್ಡೆ ಬಳಿ ಜಿಲ್ಲಾ ಪಂಚಾಯಿತಿ ಅನುದಾನದ ಒವರ್ ಹೆಡ್ ಟ್ಯಾಂಕ್‌ಗೆ ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು ಶಿಲಾನ್ಯಾಸ...

Close