ಜೀವನದಲ್ಲಿ ಆತ್ಮವಿಶ್ವಾಸವಿದ್ದರೆ ಸುಖಮಯ ಬದುಕು

ಕಿನ್ನಿಗೋಳಿ: ಜೀವನ ಎಂಬುದು ಕ್ರೀಡೆ ಇದ್ದಂತೆ. ಧೈರ್ಯ ಮತ್ತು ಶಕ್ತಿ ಇದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಜೀವನದಲ್ಲಿ ಆತ್ಮವಿಶ್ವಾಸ ಇದ್ದರೆ ಸುಖಮಯ ಬದುಕು ಎಂದು ಕರ್ನಾಟಕ ರಾಜ್ಯ ರಾಮಸೇನಾ ಸಂಸ್ಥಾಪಕ ಪ್ರಸಾದ ಅತ್ತಾವರ ಹೇಳಿದರು.
ಶ್ರೀ ರಾಮ್ ಸ್ಪೋಟ್ಸ್ ಕ್ಲಬ್ ರಾಮನಗರ ಅಂಗರಗುಡ್ಡೆ ಇದರ ಆಶ್ರಯದಲ್ಲಿ 85 ಕೆಜಿ ವಿಭಾಗದ ಮೂಲ್ಕಿ ವಲಯದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ರಾಮ ಸೇನಾ ಕಬ್ಬಡ್ಡಿ ಟ್ರೋಫಿ-2018 ಪಂದ್ಯಾಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದ್ಯಮಿ ಶಶಿ ಬೆಳಪು, ಮುಲ್ಕಿ ಮೂಡಬಿದ್ರೆ ಬಿಜೆಪಿ ಅಧ್ಯಕ್ಷ ಈಶ್ವರ ಕಟೀಲು, ಕಿನ್ನಿಗೋಳಿ ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಪುನರೂರು, ರಾಮಸೇನೆ ಕರ್ನಾಟಕ ರಾಜ್ಯದ ಉಪಾಧ್ಯಕ್ಷ ಶಿವಕುಮಾರ್ ಕರ್ಜೆ, ಗುತ್ತಿಗೆದಾರರಾದ ಲೀಲಾಧರ್ ಎಸ್ ಸಾಲ್ಯಾನ್, ರಾಮಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಆಚಾರ್ಯ, ಅತಿಕಾರಿಬೆಟ್ಟು ಗ್ರಾ.ಪಂ. ಸದಸ್ಯ ಜೀವನ್ ಅಂಗರಗುಡ್ಡೆ, ಸಹಾಯ ಹಸ್ತ ಫೌಂಡೇಷನ್ ಸ್ಥಾಪಕ ಸುಧೀರ್ ಶೆಟ್ಟಿ, ಉದ್ಯಮಿ ರಾಜೇಶ್ ಕೆಂಚನಕೆರೆ, ಕೃಷ್ಣ ಶೆಟ್ಟಿಗಾರ್, ಶ್ರೀರಾಮ ಮಹಿಳಾ ಮಂಡಲ ಅಧ್ಯಕ್ಷೆ ಸುನಿತಾ ಶೆಟ್ಟಿ, ಮಿಥುನ್ ಕೋಟ್ಯಾನ್ ಉಪಸ್ಥಿತರಿದ್ದರು. ಶ್ರೀರಾಮ್ ಸ್ಪೋಟ್ಸ್ ಕ್ಲಬ್ಬಿನ ಸುಗುಣೇಶ್ ಸಾಲ್ಯಾನ್ ಸ್ವಾಗತಿಸಿದರು. ಸತೀಶ್ ಅಂಗರಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.
ಸುಮಾರು 18 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು.

Kinnigoli-22011802

Comments

comments

Comments are closed.