ಸಹಾಯ ಧನ ಹಸ್ತಾಂತರ

ಕಿನ್ನಿಗೋಳಿ: ಸೇವಾ ಸಂಸ್ಥೆಗಳು ಆಶಕ್ತರಿಗೆ ಸಹಾಯಹಸ್ತ ನೀಡುವುದರ ಮೂಲಕ ಬಡವರ್ಗಕ್ಕೆ ಆಶಾಕಿರಣವಾಗಲಿ. ಇಂತಹ ಜನ ಪರ ಕಾರ್ಯಗಳು ಇನ್ನಷ್ಟು ನಡೆಯಲಿ ಎಂದು ಕಟೀಲು ದೇವಳ ಪ್ರಧಾನ ಅರ್ಚಕ ಕಮಲಾದೇವಿ ಪ್ರಸಾದ್ ಆಸ್ರಣ್ಣ ಹೇಳಿದರು. ಭಾನುವಾರ ತುಳುನಾಡು ಪೊರ್ಲು ಸೇವಾ ಟ್ರಸ್ಟ್ ಆಶ್ರಯದಲ್ಲಿ ಆಶಕ್ತ ಬಡ ವರ್ಗಕ್ಕೆ ಧನ ಸಹಾಯ ಹಸ್ತಾಂತರ ಮಾಡಿ ಮಾತನಾಡಿ ಫೆಸ್ ಬುಕ್ ವಾಟ್ಸಪ್ ನಂತಹ ಸಾಮಾಜಿಕ ಜಾಲತಾಣ ಉಪಯೋಗಿಸಿ ಸಮಾಜ ಮುಖಿ ಕಾರ್ಯ ಮಾಡಲು ಜನ್ಮತಾಳಿದ ಸಂಸ್ಥೆ ಕಳೆದ 15 ತಿಂಗಳಲ್ಲಿ ಹಲವು ಲಕ್ಷರೂ ಗಳನ್ನು 32 ಸೇವಾ ಕಾರ್ಯಗಳ ಮೂಲಕವಾಗಿ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಕಟೀಲು ದೇವಳದ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಟ್ರಸ್ಟ್ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
ಕಿಡ್ನಿ ವೈಪಲ್ಯದಿಂದ ಬಳಲುತ್ತಿರುವ ಬಂಟ್ವಾಳ ನೇರಳಕಟ್ಟೆ ನೆಟ್ಲ ಮಡ್ನೂರು ಗಣೇಶ್ ನಗರ ನಿವಾಸಿ ನಾರಾಯಣ ಕುಲಾಲ್ ಮತ್ತು ಸಾವಿತ್ರಿ ದಂಪತಿಯ ಬಾಲಕ ಗಗನ್‌ಗೆ 25,000 ಚೆಕ್, ಮುಖದ ಅಂಗವಿಕತೆಯಿಂದ ಬಳಲುತ್ತಿರುವ ಮಂಗಳೂರು ತಾಲೂಕು ಸಸಿಹಿತ್ಲು ಮೂಡು ಕೊಪ್ಲ ದಿವಾಕರ ಕರ್ಕೇರಾ ಹಾಗೂ ವಾರಿಜ ಅವರ ಪುತ್ರಿ ರಕ್ಷಿತಾ ಅವರ ಚಿಕಿತ್ಸೆಗೆ 25,000, ಕಾನ್ಸರ್ ಪೀಡಿತೆ ಮಂಗಳೂರು ತಾಲೂಕು ಮಲ್ಲೂರು ದಮ್ಮೆಲೆ ತಾಲೊಂಟು ನಿವಾಸಿ ಉಮೇಶ್ ಪೂಜಾರಿಯ ಅವರ ಪತ್ನಿ ಜಯಂತಿ ಅವರಿಗೆ 25,000 ರೂ ಚೆಕ್ ವಿತರಣೆ ನಡೆಯಿತು.

Kinnigoli-22011803

Comments

comments

Comments are closed.

Read previous post:
Kinnigoli-22011802
ಜೀವನದಲ್ಲಿ ಆತ್ಮವಿಶ್ವಾಸವಿದ್ದರೆ ಸುಖಮಯ ಬದುಕು

ಕಿನ್ನಿಗೋಳಿ: ಜೀವನ ಎಂಬುದು ಕ್ರೀಡೆ ಇದ್ದಂತೆ. ಧೈರ್ಯ ಮತ್ತು ಶಕ್ತಿ ಇದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಜೀವನದಲ್ಲಿ ಆತ್ಮವಿಶ್ವಾಸ ಇದ್ದರೆ ಸುಖಮಯ ಬದುಕು ಎಂದು ಕರ್ನಾಟಕ ರಾಜ್ಯ ರಾಮಸೇನಾ...

Close