ಕೊಲಕಾಡಿ ಅಭಿನಂದನಾ ಸಮಾರಂಭ

ಮುಲ್ಕಿ: ಯಕ್ಷಗಾನ ಕಲೆಯಾಗಿರದೆ ಯಕ್ಷಗಾನ ಎಂಬುದು ಒಂದು ಶಾಸ್ತ್ರ. ಯಕ್ಷಗಾನದ ಉಳಿವಿಗೆ ಸೇವೆ ಮಾಡುವ ಗಣೇಶ್ ಕೊಲಕಾಡಿ ಅಭಿನಂದನಾರ್ಹರು ಎಂದು ವಿದ್ವಾನ್ ಪಂಜ ಬಾಸ್ಕರ ಭಟ್ ಹೇಳಿದರು.
ಕುಂಜಾರಗಿರಿ ಶಾಸ್ತಾವು ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ನಡೆದ ಕವಿ, ಯಕ್ಷಗುರು ಗಣೇಶ್ ಕೊಲಕಾಡಿಯವರ ಅಭಿನಂದನಾ ಸಮಾರಂಭ ಕೊಲೆಕಾಡಿ ಯಕ್ಷವೈಭವ ಕಾರ್ಯಕ್ರಮದಲ್ಲಿ ಆಶೀರ್ವಾಚನ ನೀಡಿ ಮಾತನಾಡಿದರು.
ಛಂದೋಬ್ರಹ್ಮ ಡಾ. ಎನ್ ನಾರಾಯಣ ಶೆಟ್ಟಿ ಶಿಮಂತೂರು ಕಾರ್ಯಕ್ರಮ ಉದ್ಘಾಟಿಸಿದರು.
ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಕೊಲಕಾಡಿ ಅವರು ಅಲ್ಪ ಸಮಯದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ, ಅನಾರೋಗ್ಯದಲ್ಲಿದ್ದರೂ ಯಕ್ಷಗಾನದ ಸೇವೆಯನ್ನು ಕೈಬಿಟ್ಟವರಲ್ಲ, ಸಾಮಾನ್ಯ ವಿದ್ಯಾರ್ಥಿಯಾಗಿದ್ದ ಕೊಲೆಕಾಡಿಯವರು ಛಂದಸ್ಸಿನ ಮೇಲೆ ಹಿಡಿತ ಸಾಧಿಸಿದ್ದು ಶಾಘ್ಲನೀಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜಾಧ್ಯಕ್ಷ ಹರಿಕೃಷ್ಣ ಪುನರೂರು ಶುಭ ಹಾರೈಸಿದರು.
ಈ ಸಂದರ್ಭ ಮೂಲ್ಕಿ ವಿಜಯ ರೈತ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ರಾಮದಾಸ್ ಶೆಟ್ಟಿ ಬಾಳಿಕೆ ಮನೆ, ಮೂಲ್ಕಿ ವಿಜಯಾ ಕಾಲೇಜು ನಿವೃತ್ತ ಪ್ರಿನ್ಸಿಪಾಲ್ ನಾರಾಯಣ ಶೆಟ್ಟಿಗಾರ್, ಇನ್ಪೋಸಿಸ್‌ನ ಹರೀಶ್ ಕೊಲೆಕಾಡಿ, ಹರಿದಾಸ ನಾರ್ಣಪ್ಪಯ್ಯ ಸ್ಮಾರಕ ಕಲಾ ಪೂಷಕ ವೇದಿಕೆಯ ಅಧ್ಯಕ್ಷ ಶಶೀಂದ್ರ ಕುಮಾರ್, ಶೇಖರ ಶೆಟ್ಟಿ ಕಿಲ್ಪಾಡಿ ಬಂಡಸಾಲೆ, ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಗಂಗಾಧರ ವಿ ಶೆಟ್ಟಿ ಬರ್ಕೆ ತೋಟ ಕೊಲೆಕಾಡಿ, ಮತ್ತಿತರರು ಇದ್ದರು.
ಗೋಪಿನಾಥ ಪಡಂಗ ಸ್ವಾಗತಿಸಿ, ಪತ್ರಕರ್ತ ಪ್ರಥ್ವಿರಾಜ ಕವತ್ತಾರು ಪ್ರಸ್ತಾವನೆಗೈದರು. ಮನೋಹರ್ ಕೋಟ್ಯಾನ್ ವಂದಿಸಿದರು. ಪತ್ರಕರ್ತ ಶರತ್ ಕಿನ್ನಿಗೋಳಿ ನಿರೂಪಿಸಿದರು.

Kinnigoli-22011801

Comments

comments

Comments are closed.

Read previous post:
Kinnigoli-20011803
ಕಿನ್ನಿಗೋಳಿ ಮಕ್ಕಳ ಸಪ್ತಮ ನಾಟಕೋತ್ಸವ – 2018

ಕಿನ್ನಿಗೋಳಿ: ಮಕ್ಕಳ ಸುಪ್ತ ಪ್ರತಿಭೆ ಅರಳಲು ಪಾಠ್ಯದ ಜೊತೆಗೆ ಇಂತಹ ನಾಟಕೋತ್ಸವ ಪೂರಕವಾಗಿದ್ದು ವಿದ್ಯಾರ್ಥಿಗಳಲ್ಲಿ ಪ್ರೋತ್ಸಾಹ ಆಸಕ್ತಿ ಮೂಡಿಸಬೇಕು ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು....

Close