ಕಿನ್ನಿಗೋಳಿ ಕಾಳಿಕಾಂಬಾ ಮಹಿಳಾ ವೃಂದ

ಕಿನ್ನಿಗೋಳಿ: ಸಂಸ್ಥೆಯನ್ನು ಪ್ರಾರಂಭಿಸುವುದು ಸುಲಭ ಆದರೆ ತಮ್ಮ ಇಚ್ಚಾಶಕ್ತಿಯಿಂದ ಯಶಸ್ವಿಯಾಗಿ ಮುನ್ನಡೆಸಿ ವಿವಿಧ ಸಮಾಜ ಅಭಿವೃದ್ದಿ ಮಾಡಬೇಕು ಆಗ ಮಾತ್ರ ಕಾರ್ಯಕರ್ತರ ಮನಸ್ಸಿಗೆ ನೆಮ್ಮದಿ ಸಿಗುವುದು. ಈ ಮಹಿಳಾ ಸಂಘವು ವಿವಿಧ ಕಾರ್ಯಚಟುವಟಿಕೆಯಿಂದ ಮುನ್ನಡೆದು ದಶಮಾನೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ ಎಂದರು ಬಬ್ಬುಕಟ್ಟೆ ಪೆರ್ಮನ್ನೂರು ಸರಕಾರಿ ಪ್ರೌಢಶಾಲಾ ಶಿಕ್ಷಕಿ ವಿಜಯಲಕ್ಷೀ ಕಟೀಲು ಹೇಳಿದರು.
ಅವರು ಕಿನ್ನಿಗೋಳಿ ಸರಾಫ್ ಅಣ್ಣಾಯ್ಯಾಚಾರ್ಯ ಸಭಾಭವನದಲ್ಲಿ ಸೋಮವಾರ ನಡೆದ ಕಿನ್ನಿಗೋಳಿ ಕಾಳಿಕಾಂಬಾ ಮಹಿಳಾ ವೃಂದದ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಸಂಘದಲ್ಲಿ ನಡೆಯುವ ವಿವಿಧ ಸೇವಾ ಕಾರ್ಯಕ್ರಮಗಳು ಸಂಘದ ಹಾಗೂ ಸಮಾಜದ ಬೆಳವಣಿಗೆಗೆ ಸಹಕಾರಿ ಎಂದು ಪುರೋಹಿತ್ ಯೋಗೀಶ ಆಚಾರ್ಯ ಬೆಳುವಾಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಸಮಾಜ ಸೇವಕಿ ದಾನಿ ಅಪ್ಪಿ ಆಚಾರ್ಯ ಉಡುಪಿ, ಶಿಕ್ಷಕಿ ರತ್ನಾವತಿ ಜೆ ಬೈಕಾಡಿ, ಕಸ್ತೂರಿ ರಾಮಚಂದ್ರ ಪಡುಬಿದ್ರೆ ಅವರನ್ನು ಸನ್ಮಾನಿಸಲಾಯಿತು. ಸ್ಥಳೀಯ ಸ್ವಸಮಾಜದ ಮಹಿಳಾ ಮಂಡಳಿಗಳ ಅಧ್ಯಕ್ಷರುಗಳಾದ ರಾಜೇಶ್ವರೀ ಸೂರ್ಯಕುಮಾರ್ ಕೊಲೆಕಾಡಿ, ಸರೋಜಾ ದಿನಕರ್ ಕಾಪು, ಪ್ರಭಾವತಿ ಗೋಪಾಲ್ ಮೂಡಬಿದ್ರೆ, ರಮಾ ನವೀನ್ ಕಾರ್ಕಳ, ಯಶೋಧ ಯೋಗೀಶ್ ಸುರತ್ಕಲ್, ಗೀತಾ ರತ್ನಕುಮಾರ್ ಮಂಜರಪಲ್ಕೆ, ಶಾಲಿನಿ ಮಂಜುನಾಥ್ ಬಜಪೆ, ವಂದನಾ ಯೋಗೀಶ್ ಉಡುಪಿ, ವನಿತಾ ಉಪೇಂದ್ರ ಮಂಗಳೂರು, ಶಶಿಕಲಾ ದಾಮೋದರ್ ಕಟಪಾಡಿ ಅವರನ್ನು ಗೌರವಿಸಲಾಯಿತು.
ಸನ್ವಿತಾ ಮತ್ತು ವಿಘ್ನೇಶ್ ಆಚಾರ್ಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಭೀಷ್ಮಾ ಆಚಾರ್ಯ ಜಲ್ಲಿಗುಡ್ಡೆ, ಪ್ರೇಮಾ ಉಲ್ಲಂಜೆ, ಸುಂದರಿ ಕೆರೆಕಾಡು, ಸಹಾನಾ ನೇಕಾರ ಕಾಲನಿ, ಶುಭ ಬಲವಿನಗುಡ್ದೆ ಅವರಿಗೆ ಸಹಾಯಧನ ನೀಡಲಾಯಿತು.
ಶಶಿಕಲಾ ಯೋಗೀಶ್, ರತ್ನಾ ಪ್ರಭಾಕರ ಆಚಾರ್ಯ, ಸವಿತಾ ದಿನೇಶ್ ಸನ್ಮಾನ ಪತ್ರ ವಾಚಿಸಿದರು.
ಈ ಸಂದರ್ಭ ಕಿನ್ನಿಗೋಳಿ ಕಾಳಿಕಾಂಬಾ ಮಹಿಳಾ ವೃಂದದ ಅಧ್ಯಕ್ಷೆ ಗೀತಾ ಯೋಗೀಶ್ ಆಚಾರ್ಯ, ಸ್ಥಾಪಕಾಧ್ಯಕ್ಷೆ ಮಮತಾ ಸುರೇಂದ್ರ, ಉಪಾಧ್ಯಕ್ಷೆ ವಿಮಲಾ ಚಂದ್ರ ಶೇಖರ್, ಕೋಶಾಧಿಕಾರಿ ರೇವತಿ ಬಾಸ್ಕರ್, ಜೊತೆ ಕಾರ್ಯದರ್ಶಿ ರಾಜೇಶ್ವರೀ ಪ್ರಕಾಶ್, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿಲ್ಪಿ ಶಿವಪ್ರಸಾದ್ ಆಚಾರ್ಯ, ಸಭಾಭವನ ಸಮಿತಿ ಅಧ್ಯಕ್ಷ ಪ್ರಥ್ವಿರಾಜ್ ಆಚಾರ್ಯ, ವೃಂದದ ಮತ್ತಿತರರು ಉಪಸ್ಥಿತರಿದ್ದರು.
ಕಿನ್ನಿಗೋಳಿ ಕಾಳಿಕಾಂಬಾ ಮಹಿಳಾ ವೃಂದ ಕಾರ್ಯದರ್ಶಿ ಅನಿತಾ ವಿಶ್ವನಾಥ್ ವರದಿ ವಾಚಿಸಿದರು. ಸಾಂಸ್ಕ್ರತಿಕ ಕಾರ್ಯದರ್ಶಿ ಅನಿತಾ ಪ್ರಥ್ವಿರಾಜ್ ಸ್ವಾಗತಿಸಿದರು. ಪ್ರತಿಮಾ ವಂದಿಸಿದರು. ಶೈಲಜಾ ದಿವಾಕರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-23011806

Comments

comments

Comments are closed.