ಪಕ್ಷಿಕೆರೆ ರಜತ ಸಂಭ್ರಮ ದ್ವಾದಶಿ ಚಿಂತನೆ

ಕಿನ್ನಿಗೋಳಿ: ಪಕ್ಷಿಕೆರೆಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ರಜತೋತ್ಸವ ಸಂಭ್ರಮ-2018ರ ದ್ವಾದಶ ಚಿಂತನೆ ಅಂಗವಾಗಿ ಜನವರಿ 28 ರ ಭಾನುವಾರ ಪಕ್ಷಿಕೆರೆ ಶ್ರೀ ಗಣೇಶ ಕಲಾಮಂಟಪದಲ್ಲಿ ಮಾತ್ರ ದೇವೋಭವ ಕಾರ್ಯಕ್ರಮ ನಡೆಯಲಿದೆ.
ಭಾನುವಾರ ಮಧ್ಯಾಹ್ನ ನಡೆಯಲಿರುವ ವ್ಯೆದ್ಯಕೀಯ ಮಾಹಿತಿ ಶಿಬಿರದಲ್ಲಿ ಡಾ ಅನಿತಾ ಸಿಕ್ವೇರಾ ರವರು ಸ್ತನ ಕ್ಯಾನ್ಸರ್ ಗುರುತಿಸುವಿಕೆ ಮತ್ತು ಋತು ಚಕ್ರದ ದೋಷಗಳ ಕುರಿತು ಮಾಹಿತಿ ನೀಡಲಿದ್ದಾರೆ. ಮಧ್ಯಾಹ್ನದಿಂದ ಸಂಜೆಯವರೆಗೆ ಚಲನಚಿತ್ರ ಕಿರು ನಟಿ, ವಿಜೆ ಪೂರ್ವಿ ಕೆ ರಾವ್ ಮತ್ತು ಎದೆ ತುಂಬಿ ಹಾಡಿದೆನು ಖ್ಯಾತಿಯ ಪಲ್ಲವಿ ಪ್ರಭು ಬಳಗದವರಿಂದ ಸಂಗೀತ ರಸ ಮಂಜರಿ ನಡೆಯಲಿದೆ. ಸಂಜೆ ಜರಗಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತ್ರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಡಾ.ಆಶಾ ಜ್ಯೊತಿ ರ‍್ಯೆ ವಹಿಸಲಿದ್ದು ಪಕ್ಷಿಕೆರೆಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಧಾನ ಅರ್ಚಕ ವಿದ್ವಾನ್ ಪಂಜ ವಾಸುದೇವ ಭಟ್, ಯುವ ನ್ಯಾಯವಾದಿ ಸಹನಾ ಕುಂದರ್ ಸೂಡ ಉಡುಪಿ, ಕೊಲಕಾಡಿ ಶ್ರೀ ವಿಶ್ವಕರ್ಮ ಮಹಿಳಾ ಬಳಗದ ಅಧ್ಯಕ್ಷೆ ರಾಜೇಶ್ವರಿ ಸೂರ್ಯ ಕುಮಾರ್, ಕೆಮ್ರಾಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ದ.ಕ.ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಪಕ್ಷಿಕೆರೆ ಸಂತ ಜೂದರ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ತೆರೆಜ ಸಿಕ್ವೇರಾ, ಹಿರಿಯ ಕೃಷಿಕೆ ಅತ್ತೂರು ಭಂಡಾರ ಮನೆ ಲಕ್ಷ್ಮೀ ಶೆಟ್ಟಿ, ನವಮಂಗಳೂರು ಬಂದರು ಮಂಡಳಿ ಪಣಂಬೂರಿನ ನಿವೃತ್ತ ಸಹಾಯಕ ಕಾರ್ಯದರ್ಶಿ ಸುಧಾಶಿನಿ ಮಾರುತಿನಗರ, ಕರಕುಶಲಕರ್ಮಿ ಸುಮತಿ ಶೆಟ್ಟಿ, ಉಡುಪಿ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕಿ ಮಮ್ತಾಜ್ ಹೊಸಕಾಡು ಅವರನ್ನು ಅಭಿನಂದಿಸಲಾಗುವುದು. ಕೆಮ್ರಾಲ್ ಪಂಚಾಯಿತಿ ಸದಸ್ಯರಾದ ಲೀಲಾ ಪೂಜಾರ್ತಿ, ರೇವತಿ ಶೆಟ್ಟಿಗಾರ್, ಮಮತಾ ಅಮೀನ್, ಪ್ರಮೀಳಾ ಡಿ. ಶೆಟ್ಟಿ, ಸುಮಲತಾ, ಆಶಾಲತಾ, ಮಮತಾ ಆಚಾರ್ಯ ಉಪಸ್ಥಿತರಿರುವರು. ರಾತ್ರಿ ಕವಿ ಗೋಷ್ಠಿ ಹಾಗೂ ನೃತ್ಯ ವ್ಯೆಭವ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Kinnigoli-23011802
ಸಮೂಹ ಸಮಾಜ ಸೇವೆಯಲ್ಲಿ ಸಂತೃಪ್ತಿ

ಕಿನ್ನಿಗೋಳಿ: ಸಂಘ ಸಂಸ್ಥೆಗಳ ಮೂಲಕ ನಡೆಸುವ ಸಮಾಜ ಸೇವೆಯಲ್ಲಿ ಸಂತೃಪ್ತಿ ಭಾವನೆ ಹಾಗೂ ದೊರಕುವ ಮನ್ನಣೆಯಿಂದ ನಮ್ಮಲ್ಲಿ ಧನ್ಯತೆ ಮೂಡುತ್ತದೆ. ಸಂಸ್ಥೆ ಬೆಳೆದಂತೆ ಸೇವಾ ಮನೋಭಾವನೆಯನ್ನೂ ವಿಸ್ತರಿಸಿಕೊಳ್ಳಬೇಕು ಎಂದು...

Close