ಹಳೆಯಂಗಡಿ ರಿಕ್ಷಾ ಚಾಲಕ ದಾರುಣ ಸಾವು

ಮೂಲ್ಕಿ: ಹಳೆಯಂಗಡಿಯಲ್ಲಿ ರಿಕ್ಷಾ ಚಾಲಕರಾಗಿದ್ದ ಸಾಗ್ ಬಳಿಯ ನಿವಾಸಿ ಸಾದಿಕ್ (40) ಚೆನ್ನಪಟ್ಟಣದಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಹಳೆಯಂಗಡಿ ಮೂಲದ ಆರು ಮಂದಿಯಿದ್ದ ಒಮ್ನಿ ಕಾರು ಹಾಗೂ ಲಾರಿಯ ನಡುವೆ ಸಂಭವಿಸಿದ ಅಪಘಾತದಲ್ಲಿ ಈ ದುರ್ಘಟನೆ ಸಂಭವಿಸಿದೆ.
ತಮಿಳುನಾಡಿನ ಮುತ್ತುಪೇಟೆ ಮತ್ತಿತರ ಪ್ರದೇಶದ ವಿವಿಧ ದರ್ಗಾಗಳಿಗೆ ಭೇಟಿ ನೀಡಿ ಸೋಮವಾರ ಹಿಂದುರುಗುತ್ತಿದ್ದಾಗ ಈ ದುರ್ಘಟನಡೆ ಸಂಭವಿಸಿದೆ. ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿ ಹಳೆಯಂಗಡಿ ಸಾಗ್ ನಿವಾಸಿ ಸಾದಿಕ್ (40) ಹಾಗೂ ಅವರೊಂದಿಗೆ ಒಮ್ನಿಯಲ್ಲಿ ಸಹ ಪ್ರಯಾಣಿಕರಾಗಿ ಸಂಚರಿಸುತ್ತಿದ್ದ ಸಾದಿಕ್‌ರವರ ಪತ್ನಿ ಉಮಾಬಾನು (35) ಇವರ ಪುತ್ರ ಮುಸ್ತಾಫ (6) ಹಾಗೂ ಇವರ ಜೊತೆಗೆ ತೆರಳಿದ್ದ ಸ್ಥಳೀಯ ಕದಿಕೆ ಕಲ್ಲಾಡಿ ನಿವಾಸಿಗಳಾದ ಅಬ್ದುಲ್ ರೆಹಮಾನ್ (45) ಅವರ ಪತ್ನಿ ಖೈರುನ್ನುಸಾ (32) ಇವರ ಪುತ್ರಿ ರೆಹನಾ (18) ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಿಯವಾಗಿ ಪ್ರಾಮಾಣಿಕ ರಿಕ್ಷಾ ಚಾಲಕನೆಂದೇ ಗುರುತಿಸಿಕೊಂಡಿದ್ದ ಸಾದಿಕ್ ತನ್ನ ಸ್ನೇಹಿತ ಅಬ್ದುಲ್ ರೆಹಮಾನ್‌ರೊಂದಿಗೆ ಕಿರು ಪ್ರವಾಸಕ್ಕೆ ತಮ್ಮ ಓಮ್ನಿಯಲ್ಲಿಯೇ ತೆರಳಿದ್ದಾಗ ಈ ದುರ್ಘಟನೆ ನಡೆದಿದೆ. ಮೃತ ಸಾದಿಕ್ ಶೋಕಾರ್ಥ ಹಳೆಯಂಗಡಿ ರಿಕ್ಷಾ ಚಾಲಕರು ಒಂದು ತಾಸು ಹರತಾಳ ನಡೆಸಿದರು.

Kinnigoli-23011805

Comments

comments

Comments are closed.

Read previous post:
Kinnigoli-23011804
ಶ್ರೀರಾಮ ಮಂದಿರ ಪ್ರತಿಷ್ಠಾ ವರ್ಧಂತಿ

ಕಿನ್ನಿಗೋಳಿ: ಕಿನ್ನಿಗೋಳಿ ಶ್ರೀರಾಮ ಮಂದಿರದಲ್ಲಿ ಸೋಮವಾರ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ಶ್ರೀ ದೇವರಿಗೆ ಶತಕಲಶಾಭಿಷೇಕ, ಸಾನಿಧ್ಯ ಹವನ, ಕಾಣಿಕೆ, ಭಜನಾ ಕಾರ್ಯಕ್ರಮ ನಡೆಯಿತು.

Close