ಸಂಸ್ಕೃತಿಯ ಪ್ರತಿಬಿಂಬ ಧಾರ್ಮಿಕ ಕ್ಷೇತ್ರಗಳು

ಕಿನ್ನಿಗೋಳಿ: ಸಂಸ್ಕೃತಿಯ ಪ್ರತಿಬಿಂಬ ಧಾರ್ಮಿಕ ಕ್ಷೇತ್ರಗಳಾಗಿವೆ. ಸಂಸ್ಕಾರ ಸಂಸ್ಕೃತಿಗಳನ್ನು ಯುವ ಸಮುದಾಯ ತಮ್ಮ ಜೀವನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ದಿ ಓರಿಯಂಟಲ್ ಇನ್ಸೂರೆನ್ಸ್ ಕಂಪನಿ ಸುರತ್ಕಲ್ ಶಾಖೆಯ ಹಿರಿಯ ಪ್ರಬಂಧಕ ಯಾದವ ದೇವಾಡಿಗ ಹೇಳಿದರು.
ಪಡುಪಣಂಬೂರು ಗ್ರಾಮದ ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ದೇವಳದಲ್ಲಿ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶ್ರೀ ಅಶ್ವತ್ಥ ಪೂಜೆಯ ವಿವಿಧ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಸಂದರ್ಭ ಗಣಹೋಮ, ಅಶ್ವಥ ಪೂಜೆ, ಮಹಾಪೂಜೆ, ಶ್ರೀ ಸತ್ಯನಾರಾಯಣ ದೇವರ ಪ್ರತಿಷ್ಠೆ, ಪ್ರಸಾದ ವಿತರಣೆ ಮಹಾ ಅನ್ನಸಂತರ್ಪಣೆ ಜರುಗಿತು.
ಜಯಶ್ರಿ ದೇವಾಡಿಗ, ರಾಮಗುರಿಕಾರ, ಕಾಂತಣ್ಣ ಯಾನೆ ರತ್ನಾಕರ ಶೆಟ್ಟಿಗಾರ್, ಅಪ್ಪು ಗುರಿಕಾರ, ಲಕ್ಷ್ಮಣ ಗುರಿಕಾರ, ದೇವಳದ ಅಧ್ಯಕ್ಷ ವೀರಪ್ಪ ಶೆಟ್ಟಿಗಾರ್, ಯುವಕ ಸಂಘದ ಅಧ್ಯಕ್ಷ ಶಂಕರ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ದೇವಳದ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಎನ್.ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-23011803

Comments

comments

Comments are closed.

Read previous post:
ಪಕ್ಷಿಕೆರೆ ರಜತ ಸಂಭ್ರಮ ದ್ವಾದಶಿ ಚಿಂತನೆ

ಕಿನ್ನಿಗೋಳಿ: ಪಕ್ಷಿಕೆರೆಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ರಜತೋತ್ಸವ ಸಂಭ್ರಮ-2018ರ ದ್ವಾದಶ ಚಿಂತನೆ ಅಂಗವಾಗಿ ಜನವರಿ 28 ರ ಭಾನುವಾರ ಪಕ್ಷಿಕೆರೆ ಶ್ರೀ ಗಣೇಶ ಕಲಾಮಂಟಪದಲ್ಲಿ ಮಾತ್ರ ದೇವೋಭವ...

Close