ಸಮೂಹ ಸಮಾಜ ಸೇವೆಯಲ್ಲಿ ಸಂತೃಪ್ತಿ

ಕಿನ್ನಿಗೋಳಿ: ಸಂಘ ಸಂಸ್ಥೆಗಳ ಮೂಲಕ ನಡೆಸುವ ಸಮಾಜ ಸೇವೆಯಲ್ಲಿ ಸಂತೃಪ್ತಿ ಭಾವನೆ ಹಾಗೂ ದೊರಕುವ ಮನ್ನಣೆಯಿಂದ ನಮ್ಮಲ್ಲಿ ಧನ್ಯತೆ ಮೂಡುತ್ತದೆ. ಸಂಸ್ಥೆ ಬೆಳೆದಂತೆ ಸೇವಾ ಮನೋಭಾವನೆಯನ್ನೂ ವಿಸ್ತರಿಸಿಕೊಳ್ಳಬೇಕು ಎಂದು ಲಯನ್ಸ್ ಜಿಲ್ಲೆಯ ಪ್ರಾಂತೀಯ ಅಧ್ಯಕ್ಷ ಓಸ್ವಲ್ಡ್ ಡಿಸೋಜಾ ಹೇಳಿದರು.
ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದ ವಠಾರದಲ್ಲಿ ಯುವಕ ಸಂಘ ಮತ್ತು ಮಹಿಳಾ ಮಂಡಳಿಯ ಜಂಟಿ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಸುರತ್ಕಲ್ ಎನ್‌ಐಟಿಕೆಯ ಹಿರಿಯ ಪ್ರಾಧ್ಯಾಪಕ ಪ್ರೊ. ಮುರಳೀಧರ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸೇವಾ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿದಾಗ ತನ್ನಿಂತಾನೆ ಶಿಸ್ತು ಸಂಯಮ ಜೀವನದಲ್ಲಿ ಮೈಗೂಡುತ್ತದೆ ಎಂದರು.
ಈ ಸಂದರ್ಭ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಪಡುಪಣಂಬೂರು ಗ್ರಾಮ ಪಂಚಾಯಿತಿ ಪರವಾಗಿ ಅಧ್ಯಕ್ಷ ಮೋಹನ್‌ದಾಸ್ ಮತ್ತು ಕಾರ್ಯದರ್ಶಿ ಲೋಕನಾಥ ಭಂಡಾರಿ, ರಾಜ್ಯ ಪ್ರಶಸ್ತಿ ಪಡೆದ ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಅಧ್ಯಕ್ಷ ಸುಧಾಕರ ಆರ್. ಅಮೀನ್ ಮತ್ತು ಕಾರ್ಯದರ್ಶಿ ನಾಗೇಶ್ ಆಚಾರ್ಯ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ತೋಕೂರು ಟೋರ್ಪಡೋಸ್ ಸ್ಪೋರ್ಟ್ಸ್ ಕ್ಲಬ್‌ನ ಗೌತಮ್ ಶೆಟ್ಟಿ, ಜಿಲ್ಲಾ ಯುವಜನ ಒಕ್ಕೂಟದ ಪ್ರಶಸ್ತಿ ಪಡೆದ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ರತನ್ ಶೆಟ್ಟಿ ಹಾಗೂ ಸಹ ಕಾರ್ಯದರ್ಶಿ ದೀಪಕ್ ಸುವರ್ಣ ಮತ್ತು ಜಿಲ್ಲಾ ಯುವಜನ ಪ್ರಶಸ್ತಿ ಪಡೆದ ಸಂಪತ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಆಟೋಟ ಸ್ಪರ್ಧೆಯ ಬಹುಮಾನ, 10 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಹಾಗೂ ಕಥಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಉಡುಪಿ ಜಿಲ್ಲಾ ಕರಾವಳಿ ಕಾವಲು ಪೊಲೀಸ್ ನಿರೀಕ್ಷಕ ಹರಿಶ್ಚಂದ್ರ ಕೆ.ಪಿ. ಉಪಸ್ಥಿತರಿದ್ದರು.
ಯುವಕ ಸಂಘದ ಅಧ್ಯಕ್ಷ ಹರಿದಾಸ್ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು, ಮಹಿಳಾ ಮಂಡಲದ ಅಧ್ಯಕ್ಷೆ ವಿನೋದಾ ಭಟ್ ವಂದಿಸಿದರು. ಸಹ ಕಾರ್ಯದರ್ಶಿ ಹೇಮಂತ್ ಅಮೀನ್ ನಿರೂಪಿಸಿದರು.

Kinnigoli-23011802

Comments

comments

Comments are closed.

Read previous post:
Kinnigoli-23011801
ಸಿಮೆಂಟ್ ಪೈಪ್‌ ಹಸ್ತಾಂತರ

ಕಿನ್ನಿಗೋಳಿ: ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಳಚರಂಡಿ ವ್ಯವಸ್ಥೆಗೆ ಕಟೀಲು ಶ್ರೀನಿವಾಸ ಆಸ್ರಣ್ಣ ಟ್ರಸ್ಟ್ ವತಿಯಿಂದ ಸುಮಾರು 1ಲಕ್ಷ ರೂಪಾಯಿಯ ಸಿಮೆಂಟ್ ಪೈಪ್‌ಗಳನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭ ಟ್ರಸ್ಟ್...

Close