ಕಿನ್ನಿಗೋಳಿ : ಮಕ್ಕಳ ಸಪ್ತಮ ನಾಟಕೋತ್ಸವ ಸಮಾರೋಪ

ಕಿನ್ನಿಗೋಳಿ: ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಾಸರಗೋಡು ಸಹಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಒಳಗೊಂಡ ದ.ಕ. ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ (ರಿ). ಮಂಗಳೂರು ತನ್ನ ಬೆಳ್ಳಿ ಹಬ್ಬ ವರ್ಷ – 2018 ರ ಸಂದರ್ಭ ಕಿನ್ನಿಗೋಳಿ ಯುಗಪುರುಷದ ಸಹಯೋಗದಲ್ಲಿ ನಡೆದ ಮೂರು ಜಿಲ್ಲೆಗಳ ಒಂಬತ್ತು ಶಾಲೆಗಳ ನಾಟಕ ತಂಡಗಳಿಂದ ಮಕ್ಕಳ ಸಪ್ತಮ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ನಾಟಕೋತ್ಸವದಲ್ಲಿ ಭಾಗವಹಿಸಿದ ಶಾಲಾ ತಂಡಕ್ಕೆ ಅರ್ಹತಾ ಪತ್ರ ವಿತರಿಸಿದರು. ಕಿನ್ನಿಗೋಳಿ ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್, ಮಕ್ಕಳ ಸಾಹಿತ್ಯ ಸಂಗಮ ಅಧ್ಯಕ್ಷ ಬಿ.ಶ್ರೀನಿವಾಸ ರಾವ್, ಕೋಶಾಧಿಕಾರಿ ಅನಂತಪದ್ಮನಾಭ ರಾವ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ರಮೇಶ್ ಭಟ್ ಎಸ್. ಜಿ ವಂದಿಸಿದರು. ಸಾವಿತ್ರಿ ಎಸ್ ರಾವ್ ಕಾರ್ಯಕ್ರಮ ನಿರೂಪಿಸಿದರು.
Kinnigoli-24011801

Comments

comments

Comments are closed.

Read previous post:
ತೋಕೂರು ಜ.26 : ರಾಷ್ಟ್ರದೇವೋಭವ

ಕಿನ್ನಿಗೋಳಿ : ಎಳವೆಯಲ್ಲಿಯೇ ಮಕ್ಕಳಿಗೆ ರಾಷ್ಟ್ರದ ಬಗ್ಗೆ ಭಕ್ತಿ, ಗೌರವ ಅಭಿಮಾನ, ಹೆಮ್ಮೆ ಮೂಡೂವಂತೆ ಮಾಡುವುದು. ವ್ಯಕ್ತಿಗಿಂತ ರಾಷ್ಟ್ರ ದೊಡ್ಡದು ಎಂಬುದನ್ನು ಮನ ದಟ್ಟು ಮಾಡಿಕೊಡುವ ನಿಟ್ಟಿನಲ್ಲಿ ತೋಕೂರು...

Close