ತೋಕೂರು ಜ.26 : ರಾಷ್ಟ್ರದೇವೋಭವ

ಕಿನ್ನಿಗೋಳಿ : ಎಳವೆಯಲ್ಲಿಯೇ ಮಕ್ಕಳಿಗೆ ರಾಷ್ಟ್ರದ ಬಗ್ಗೆ ಭಕ್ತಿ, ಗೌರವ ಅಭಿಮಾನ, ಹೆಮ್ಮೆ ಮೂಡೂವಂತೆ ಮಾಡುವುದು. ವ್ಯಕ್ತಿಗಿಂತ ರಾಷ್ಟ್ರ ದೊಡ್ಡದು ಎಂಬುದನ್ನು ಮನ ದಟ್ಟು ಮಾಡಿಕೊಡುವ ನಿಟ್ಟಿನಲ್ಲಿ ತೋಕೂರು ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಗಣರಾಜ್ಯೋತ್ಸವದ ನಿಮಿತ್ತ ಜನವರಿ 26 ರಂದು ಸಂಜೆ 5.30 ಕ್ಕೆ ಶಾಲಾ ಆವರಣದಲ್ಲಿ ’ಸನಾತನ ನಾಟ್ಯಾಲಯ’, ಮಂಗಳೂರು ಅವರಿಂದ ಚಂದ್ರಶೇಖರ್ ಶೆಟ್ಟಿ ಹಾಗೂ ಶಾರದಾ ಮಣಿ ಶೇಖರ್ ನೇತೃತ್ವದಲ್ಲಿ ಆದರ್ಶ ಗೋಖಲೆ ಅವರ ನಿರೂಪಣೆಯಲ್ಲಿ ಮೂಡಿಬರುವ ನೃತ್ಯ ಗೀತ ನಿರೂಪಣೆ ಸಂಭಾಷಣೆಗಳನ್ನೊಳಗೊಂಡ ನೃತ್ಯ ತರಂಗಿಣಿ ರಾಷ್ಟ್ರದೇವೋಭವ ನಿನೂತನ ಶೈಲಿಯ ಕಾರ್ಯಕ್ರಮ ನಡೆಯಲಿದೆ ಎಂದು ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀಲತಾ ರಾವ್ ಹೇಳಿದರು.
ಮಂಗಳವಾರ ತೋಕೂರು ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಂಗಳೂರಿನ ಎ. ಬಿ. ಶೆಟ್ಟಿ ದಂತ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಯು. ಎಸ್. ಕೃಷ್ಣ ನಾಯಕ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಚಿತ್ರ ತಾರೆ ಚಿರಶ್ರೀ ಅಂಚನ್, ತೋಕೂರು ಐಟಿಐ ಪ್ರಿನ್ಸಿಪಾಲ್ ವೈ. ಎನ್ ಸಾಲ್ಯಾನ್ ಭಾಗವಹಿಸಲಿದ್ದಾರೆ.
ಈ ಸಂದರ್ಭ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ , ಉಪಾಧ್ಯಕ್ಷ ಲಕ್ಷಣ್ ಸಾಲ್ಯಾನ್ ಪುನರೂರು, ಕಾರ್ಯದರ್ಶಿ ದಿವ್ಯಾ ಅರುಣ್, ಸುನೀತಾ ರೋಡ್ರಿಗಸ್, ಕೋಶಾಧಿಕಾರಿ ಶಾಂತಿ ಸಲ್ಡಾನ್ಹ, ಮಾಜಿ ಅಧ್ಯಕ್ಷ ಯಾದವ ದೇವಾಡಿಗ, ಸ್ವರಾಜ್ ಶೆಟ್ಟಿ, ಡಾ. ಕೃಷ್ಣ, ದೇವಪ್ರಸಾದ್ ಪುನರೂರು, ಶಾಲೆಟ್ ಪಿಂಟೋ, ಅಜಿತ್ ಕೋಟ್ಯಾನ್, ಸೀಮಾ ಆರ್. ಕೆ, ಬಬಿತಾ ಕೃಷ್ಣ, ರಂಜಿತಾ ಶೆಟ್ಟಿ, ಲಿಡಿಯಾ ನೊರಾಹ್ನ, ಶಾಲಾ ಶಿಕ್ಷಕರಾದ ವಾಣಿ ಜಯರಾಜ್, ಜಯಂತಿ ಗಡಿಯಾರ್, ವಿಜಯಾ ಕಿಣಿ ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-23011806
ಕಿನ್ನಿಗೋಳಿ ಕಾಳಿಕಾಂಬಾ ಮಹಿಳಾ ವೃಂದ

ಕಿನ್ನಿಗೋಳಿ: ಸಂಸ್ಥೆಯನ್ನು ಪ್ರಾರಂಭಿಸುವುದು ಸುಲಭ ಆದರೆ ತಮ್ಮ ಇಚ್ಚಾಶಕ್ತಿಯಿಂದ ಯಶಸ್ವಿಯಾಗಿ ಮುನ್ನಡೆಸಿ ವಿವಿಧ ಸಮಾಜ ಅಭಿವೃದ್ದಿ ಮಾಡಬೇಕು ಆಗ ಮಾತ್ರ ಕಾರ್ಯಕರ್ತರ ಮನಸ್ಸಿಗೆ ನೆಮ್ಮದಿ ಸಿಗುವುದು. ಈ ಮಹಿಳಾ...

Close