ತೋಕೂರು : ಸುವರ್ಣ ಸಭಾಂಗಣ ಉದ್ಘಾಟನೆ

ಕಿನ್ನಿಗೋಳಿ : ತೋಕೂರು ಯುವಕ ಸಂಘ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದು ತೋಕೂರು ಯುವಕ ಸಂಘ, ಸುವರ್ಣ ಮಹೋತ್ಸವ ಸಮಿತಿ ಮತ್ತು ಮಹಿಳಾ ಮಂಡಲದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಸುವರ್ಣ ಸಭಾಂಗಣದ ಉದ್ಘಾಟನೆಯನ್ನು ಹಿರಿಯ ವಕೀಲ ರಾಜ್ಯದ ಮಾಜಿ ಅಡ್ವೋಕೇಟ್ ಜನರಲ್ ಬಿ ವಿ ಆಚಾರ್ಯ ನೆರವೇರಿಸಿದರು. ಈ ಸಂದರ್ಭ ಮೂಲ್ಕಿ ಸೀಮೆ ಅರಸರಾದ ಎಂ ದುಗ್ಗಣ್ಣ ಸಾವಂತರು, ಹೊಸ ದಿಗಂತ ಕನ್ನಡ ಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ ಎನ್ ಪ್ರಕಾಶ್, ಕಟೀಲು ದೇವಳ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಎಂ ಬಾಲಕೃಷ್ಣ ಶೆಟ್ಟಿ, ತೋಕೂರು ಯುವಕ ಸಂಘದ ಅಧ್ಯಕ್ಷ ಹರಿದಾಸ್ ಭಟ್, ಸ್ಥಾಪಕ ಸದಸ್ಯರಾದ ಎಲ್ ಕೆ ಸಾಲ್ಯಾನ್, ಸಾಲ್ಯಾನ್, ಸಂಘದ ಗೌರವಾಧ್ಯಕ್ಷ ಟಿ ಪುರುಷೋತ್ತಮ ರಾವ್, ಪ್ರಧಾನ ಕಾರ್ಯದರ್ಶಿ ಆರ್.ಎನ್ ಶೆಟ್ಟಿಗಾರ್, ಕೋಶಾಧಿಕಾರಿ ಪಿ ಸಿ ಕೋಟ್ಯಾನ್, ದಾಮೋದರ ಶೆಟ್ಟಿ, ಶೇಖರ ಶೆಟ್ಟಿಗಾರ್, ಮಹಿಳಾ ಮಂಡಲ ಅಧ್ಯಕ್ಷೆ ವಿನೋದಾ ಭಟ್ ಮತ್ತಿತರರು ಉಪಸ್ಥಿತರಿದ್ದರು.
Kinnigoli-24011802

Comments

comments

Comments are closed.

Read previous post:
Kinnigoli-24011801
ಕಿನ್ನಿಗೋಳಿ : ಮಕ್ಕಳ ಸಪ್ತಮ ನಾಟಕೋತ್ಸವ ಸಮಾರೋಪ

ಕಿನ್ನಿಗೋಳಿ: ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಾಸರಗೋಡು ಸಹಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಒಳಗೊಂಡ ದ.ಕ. ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ (ರಿ). ಮಂಗಳೂರು ತನ್ನ...

Close