ಐಕಳ ಕಂಬಳ ಗದ್ದೆಗೆ ಕೋಣ ಇಳಿಸುವ ಕಾರ್ಯಕ್ರಮ

ಕಿನ್ನಿಗೋಳಿ: ಕಂಬಳ ಕ್ರೀಡೆ ನಮ್ಮ ತುಳು ನಾಡಿನ ಧಾರ್ಮಿಕ ಆಚರಣೆ ಸಂಸ್ಕೃತಿಯ ಮೂಲ ಸತ್ವವಾಗಿದೆ. ಪ್ರಕೃತಿಯ ಆರಾಧನೆಯ ಈ ಆಚರಣೆ ಪೂರ್ವಿಕರ ಧಾರ್ಮಿಕತೆಯ ನೆಲಗಟ್ಟಿನಲ್ಲಿ ನಿಂತಿದ್ದು ಇದರಲ್ಲಿ ಹಿಂಸೆ ನಡೆಯುತ್ತಿಲ್ಲ. ಸಂಪ್ರದಾಯಬದ್ದವಾಗಿ ಕಾಂತಾಬಾರೆ- ಬೂದಾಬಾರೆ ಕಂಬಳ ನಡೆಯುತ್ತಿದೆ ಎಂದು ಐಕಳ ಕಂಬಳ ಸಮಿತಿ ಗೌರವಾಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಅವರು ಬುಧವಾರ ಐಕಳ ಕಂಬಳದ ಗದ್ದೆಯಲ್ಲಿ ಐಕಳಬಾವ ಕಾಂತಾಬಾರೆ – ಬೂದಾಬಾರೆ ಜೋಡುಕರೆ ಕಂಬಳದ ಪೂರ್ವಾಭಾವಿಯಾಗಿ ಕಂಬಳದ ಗದ್ದೆಗೆ ಕೋಣ ಇಳಿಸಿ ಕಂಬಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ದೇವಳದ ಪ್ರಧಾನ ಅರ್ಚಕ ಗಣೇಶ್ ಭಟ್ ಸಂಪ್ರದಾಯದಂತೆ ಗದ್ದೆಗೆ ಪೂಜೆ ಸಲ್ಲಿಸಿದ ಬಳಿಕ ಕಂಬಳದ ಕೋಣಗಳನ್ನು ಗದ್ದೆಗೆ ಇಳಿಸಲಾಯಿತು.
ಐಕಳ ಕಂಬಳ ಸಮಿತಿಯ ಕಾರ್ಯಧ್ಯಕ್ಷ ಚಿತ್ತರಂಜನ್ ಭಂಡಾರಿ ಐಕಳಬಾವ, ಐಕಳ ಬಾವ ಯಜಮಾನ ದೋಗಣ್ಣ ಶೆಟ್ಟಿ, ಸಂಚಾಲಕ ಐಕಳ ಮುರಳೀಧರ ಶೆಟ್ಟಿ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಪಡುಹಿತ್ಲು , ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾರ್ಲ ಹಿರಿಮನೆ, ಉಪಾಧ್ಯಕ್ಷ ವೈ. ಯೋಗೀಶ್ ರಾವ್, ವರುಣ್ ಭಟ್ ಏಳಿಂಜೆ, ಲೀಲಾಧರ ಶೆಟ್ಟಿ, ಸ್ವರಾಜ್ ಶೆಟ್ಟಿ, ಜಯಪಾಲ ಶೆಟ್ಟಿ ಐಕಳ, ಸದಾನಂದ ಕುಂದರ್, ಆನಂದ ಗೌಡ, ಶ್ರೀಶ ಸರಾಫ್ ಐಕಳ, ಸುರೇಶ್ ಎಮ್ ಶೆಟ್ಟಿ, ರಾಘವೇಂದ್ರ ಪೂಜಾರಿ, ಹರೀಶ್ ಶೆಟ್ಟಿ ತಾಮಣಿಗುತ್ತು, ಸುರೇಶ್ ಎಮ್ ಕೋಟ್ಯಾನ್ ಪಟ್ಟೆ, ಚೇತನ್ ಪೂಜಾರಿ, ಕೇಶವ ಶೆಟ್ಟಿ, ಯತಿರಾಜ ರೈ, ಸುರೆಂದ್ರ ಶೆಟ್ಟಿ ಹೊಸಗದ್ದೆ, ಶಶಿಧರ ಐಕಳ ಮತ್ತಿತರರು ಉಪಸ್ಥಿತರಿದ್ದರು.

Mulki-25011802

Comments

comments

Comments are closed.

Read previous post:
ಜ.27 ಐಕಳ ಕಂಬಳೋತ್ಸವ

ಕಿನ್ನಿಗೋಳಿ: ಐಕಳ ಬಾವ ಕಾಂತಾಬಾರೆ-ಬೂದಾಬಾರೆ ಕಂಬಳ ಸಮಿತಿಯ ನೇತ್ರತ್ವದಲ್ಲಿ ಜನವರಿ 27ರಂದು ಐಕಳದ ಕಾಂತಾಬಾರೆ-ಬೂದಬಾರೆ ಮಂಜೊಟ್ಟಿ ಗದ್ದೆಯಲ್ಲಿ ಐಕಳಬಾವ ಕಾಂತಾಬಾರೆ-ಬೂದಾಬಾರೆ ಕಂಬಳವು ನಡೆಯಲಿದೆ. ಬೆಳಿಗ್ಗೆ ಕಂಬಳವನ್ನು ವ್ಯೆಜ್ಞಾನಿಕ ಜ್ಯೋತಿಷಿ,...

Close