ದೇವರ ಆರಾಧನೆಯಿಂದ ಕಷ್ಟನಿವಾರಣೆ ಸಾಧ್ಯ

ಕಿನ್ನಿಗೋಳಿ: ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ನೀತಿ, ಧರ್ಮ, ಮಾನವೀಯತೆ ಹಾಗು ದೇವರ ಆರಾಧನೆಯಿಂದ ಕಷ್ಟ ನಿವಾರಣೆ ಸಾದ್ಯ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಹಳೆಯಂಗಡಿ ಸಮೀಪದ ಕೊಳುವೈಲು ಶ್ರೀ ಕೃಷ್ಣ ಭಜನಾ ಮಂಡಳಿ(ರಿ) ಕೊಳುವೈಲು, ಶ್ರೀ ಕೃಷ್ಣ ಸೇವಾ ಟ್ರಸ್ಟ್, ಮುಂಬಯಿ(ರಿ), ಶ್ರೀ ಕೃಷ್ಣ ಮಹಿಳಾ ಮಂಡಳಿ ವತಿಯಿಂದ ನಡೆದ 40ನೇ ವಾರ್ಷಿಕ ಮಂಗಳೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಿಮಿತ್ತ ನಡೆದ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಚಂದ್ರಶೇಖರ ನಾನಿಲ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಸಾಧಕರಾದ ಪದ್ಮನಾಭರಾವ್ ಕೊಳುವೈಲು, ಶ್ರೀಧರ ಕುಕ್ಯಾನ್ ಕೊಳುವೈಲು, ಲೀಲಾವತಿ ಎಂ ಕೋಟ್ಯಾನ್ ಕೊಳುವೈಲು, ಶೇಖರ್, ರತ್ನಾವತಿ ಜಿ ಪೂಜಾರಿ ಮುಂಬಯಿ, ಸುರೇಂದ್ರನಾಥ ಜಿ.ಹಳೆಯಂಗಡಿ, ಸತೀಶ್ ಎಸ್ ಅಮೀನ್ ಮುಂಬಯಿ, ಕ್ರೀಡಾಪಟು ಕು.ಸೃಷ್ಠಿ ಮುಂಬಯಿ, ರಘುನಾಥ್ ಜಿ.ಹಳೆಯಂಗಡಿ, ಮುಂಬಯಿ, ಮಾಜೀ ಸೈನಿಕ ರತ್ನಾಕರ್ ಕೋಟ್ಯಾನ್, ದೈವಾರಾದಕ ಶಿವಣ್ಣ ಗುರಿಕಾರ ಇಂದಿರಾನಗರ, ಕೃಷಿಕ ಗಾಡ್ವಿನ್ ಕರ್ಕಡ, ವಿಠಲ ದೇವಾಡಿಗ ಪಾವಂಜೆ ಅವರನ್ನು ಗೌರವಿಸಲಾಯಿತು
ದ.ಕ.ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ, ಕೆಪಿಸಿಸಿ ಸದಸ್ಯ ಎಚ್.ವಸಂತ್ ಬೆರ್ನಾಡ್ ಹಳೆಯಂಗಡಿ, ಉದ್ಯಮಿ ಪದ್ಮನಾಭ ರಾವ್, ಉಪನ್ಯಾಸಕ ಡಾ.ಗಣೇಶ್ ಅಮೀನ್ ಸಂಕಮಾರ್, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಎಸ್.ಸತೀಶ್ ಭಟ್, ಜಿ.ಪಂ. ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾ.ಪಂ. ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಹಳೆಯಂಗಡಿ ಪಂಚಾಯಿತಿ ಅಧ್ಯಕ್ಷೆ ಜಲಜ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಮುಲ್ಕಿ ಬ್ಲಾಕ್ ಕಾಂಗ್ರೆಸ್ಸ್ ಅಧ್ಯಕ್ಷ ಧನಂಜಯ ಮಟ್ಟು, ಭಜನಾ ಮಂಡಳಿಯ ಅಧ್ಯಕ್ಷ ನವೀನ್ ಕುಮಾರ್, ಮಂಗಲೋತ್ಸವ ಸಲಹಾ ಸಮಿತಿಯ ಅಧ್ಯಕ್ಷ ನವೀನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
.
ಧರ್ಮಪಾಲ ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ದೇವದಾಸ್ ಕಾಪಿಕಾಡ್ ರಚಿಸಿ ನಿರ್ದೇಶಿಸಿರುವ ಚಾಪರ‍್ಕ ಕಲಾವಿದರಿಂದ ಬಂಗಾರ್ ತುಳು ನಾಟಕ ನಡೆಯಿತು.

Kinnigoli-26011804

Comments

comments

Comments are closed.

Read previous post:
Kinnigoli-26011803
ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳ

ಕಿನ್ನಿಗೋಳಿ: ಪಾವಂಜೆಯ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದಲ್ಲಿ ನಡೆಯುತ್ತಿರುವ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಗುರುವಾರ ಮಂಗಳೂರು ಸ್ವರಶ್ರೀ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.

Close