ಕಿನ್ನಿಗೋಳಿ : ಉಚಿತ ಪ್ರಾಣಾಯಾಮ ಯೋಗ ಶಿಬಿರ

ಕಿನ್ನಿಗೋಳಿ: ಮೂಲ್ಕಿ ಪತಂಜಲಿ ಯೋಗ ಸಮಿತಿಯ ಆಶ್ರಯದಲ್ಲಿ ಕಿನ್ನಿಗೋಳಿಯ ಯೋಗಾಭಿಮಾನಿಗಳು,ಕೆಂಚನಕೆರೆಯ ಯೋಗ ತರಬೇತಿ ಕೇಂದ್ರ ಮತ್ತು ಕಿನ್ನಿಗೋಳಿಯ ಯುಗಪುರುಷದ ಸಹಯೋಗದೊಂದಿಗೆ ಜ. 29ರಿಂದ ಫೆಬ್ರವರಿ 4ರ ವರೆಗೆ ಕಿನ್ನಿಗೋಳಿಯ ಯುಗಪುರುಷದ ಸಭಾ ಭವನದಲ್ಲಿ ಸರ್ವ ಧರ್ಮೀಯರಿಗೆ ಉಚಿತ ಪ್ರಾಣಾಯಾಮ ಯೋಗ ಶಿಬಿರ ನಡೆಯಲಿದೆ ಎಂದು ಯುಗಪುರುಷ ಪ್ರಧಾನ ಸಂಪಾದಕ ಕೆ ಭುವನಾಭಿರಾಮ ಉಡುಪ ತಿಳಿಸಿದರು. ಕಿನ್ನಿಗೋಳಿ ಯುಗಪುರುಷದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಾಬಾ ರಾಮದೇವರಿಂದ ತರಬೇತಿ ಪಡೆದ ಕೆಂಚನಕೆರೆ ಯೋಗ ಮಂದಿರದ ಯೊಗ ಗುರು ಜಯ ಮುದ್ದು ಶೆಟ್ಟಿ ಅವರು ಶಿಬಿರವನ್ನು ನಡೆಸಿಕೊಡಲಿದ್ದಾರೆ. ಜನವರಿ 29 ರ ಸೋಮವಾರ ದಿಂದ ಫೆಬ್ರವರಿ 4 ರ ಆದಿತ್ಯವಾರದವರೆಗೆ ಪ್ರತಿದಿನ ಸಂಜೆ 5 ರಿಂದ 6.30 ರ ವರೆಗೆ ಯೋಗ ಶಿಬಿರವು ನಡೆಯಲಿದೆ ಎಂದು ತಿಳಿಸಿದರು. ಯೋಗ ಗುರು ಜಯ ಮುದ್ದು ಶೆಟ್ಟಿ ಮಾತನಾಡಿ ಯೋಗಕ್ಕೆ ಯಾವುದೇ ಜಾತಿ ಮತ ಬೇಧವಿಲ್ಲ. ನಿರಂತರ ಯೋಗಾಭ್ಯಾಸದಿಂದ ದ್ಯೆಹಿಕ ಹಾಗೂ ಮಾನಸಿಕ ಖಾಯಿಲೆಗಳನ್ನು ದೂರ ಮಾಡಲು ಸಾಧ್ಯವಿದೆ. ಸರ್ವ ಧರ್ಮೀಯರು ಶಿಬಿರದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.
ಗೋಷ್ಠಿಯಲ್ಲಿ ಶಿಬಿರದ ಸಂಯೋಜಕರಾದ ಪ್ರಥ್ವಿರಾಜ್ ಆಚಾರ್ಯ, ಸ್ಟೀವನ್ ಸಿಕ್ವೇರಾ, ಪಿ. ಸತೀಶ್ ರಾವ್, ಶ್ರೀಕಾಂತ್ ಶೆಟ್ಟಿ ಕೆಂಚನಕೆರೆ ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-26011802
ತಾಳಿಪಾಡಿ ಹೈಮಾಸ್ಟ್ ದೀಪ ಉದ್ಘಾಟನೆ

ಕಿನ್ನಿಗೋಳಿ : ತಾಳಿಪಾಡಿ ಕೋರ‍್ದಬ್ಬು ದೈವಸ್ಥಾನದ ಬಳಿ ನಿರ್ಮಾಣವಾದ ಹೈಮಾಸ್ಟ್ ದೀಪವನ್ನು ಶುಕ್ರವಾರ ಕೋರ‍್ದಬ್ಬು ದೈವಸ್ಥಾನದ ಗುರಿಕಾರ ರಂಗ ಉದ್ಘಾಟಿಸಿದರು. ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ,...

Close