ತಾಳಿಪಾಡಿ ಹೈಮಾಸ್ಟ್ ದೀಪ ಉದ್ಘಾಟನೆ

ಕಿನ್ನಿಗೋಳಿ : ತಾಳಿಪಾಡಿ ಕೋರ‍್ದಬ್ಬು ದೈವಸ್ಥಾನದ ಬಳಿ ನಿರ್ಮಾಣವಾದ ಹೈಮಾಸ್ಟ್ ದೀಪವನ್ನು ಶುಕ್ರವಾರ ಕೋರ‍್ದಬ್ಬು ದೈವಸ್ಥಾನದ ಗುರಿಕಾರ ರಂಗ ಉದ್ಘಾಟಿಸಿದರು. ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರಾ, ಬಿಜೆಪಿ ನಾಯಕ ಈಶ್ವರ್ ಕಟೀಲು, ತಾಳಿಪಾಡಿ ಗುತ್ತು ಧನಪಾಲ ಶೆಟ್ಟಿ, ಭಾಸ್ಕರ ಶೆಟ್ಟಿ ತಾಳಿಪಾಡಿ ಗುತ್ತು, ಸುಕುಮಾರ ಶೆಟ್ಟಿ, ಚಂದ್ರಹಾಸ ಹೆಗ್ಡೆ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯೆ ವಾಣಿ, ನಾರಾಯಣ ಪೂಜಾರಿ, ಚಂದ್ರಶೇಖರ್, ಕಪಿಲ್ ಅಂಚನ್, ನಕುಲ್ ಅಂಚನ್ ಗುತ್ತಕಾಡು, ಸುರೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಎರಡು ಲಕ್ಷರೂ ವೆಚ್ಚದಲ್ಲಿ ಹೈಮಾಸ್ಟ್ ದೀಪ ಹಾಗೂ ರಸ್ತೆ ವೇಗತಡೆ ನಿರ್ಮಾಣವಾಗಿದೆ.

Kinnigoli-26011802

Comments

comments

Comments are closed.

Read previous post:
Kinnigoli-26011801
ಸುರೇಂದ್ರನಾಥ ಶೆಣೈ ಕಿನ್ನಿಗೋಳಿ

ಕಿನ್ನಿಗೋಳಿ: ಕಿನ್ನಿಗೋಳಿ ಜಿಎಸ್‌ಬಿ ಸಮಾಜದ ಮುಂದಾಳು ಸುರೇಂದ್ರನಾಥ ಶೆಣೈ (75 ವರ್ಷ) ಅವರು ಶುಕ್ರವಾರ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರಿಗೆ ಪತ್ನಿ, ಮೂವರು ಪುತ್ರಿಯರು ಇದ್ದಾರೆ. ಕಿನ್ನಿಗೋಳಿ ಶ್ರೀ...

Close