ಕಂಬಳ ಕ್ರೀಡೆ ಗ್ರಾಮೀಣ ಜನರ ಧಾರ್ಮಿಕ ನಂಬಿಕೆ

ಕಿನ್ನಿಗೋಳಿ: ಜಲ್ಲಿಕಟ್ಟು ಮತ್ತು ಕಂಬಳಕ್ಕೆ ತುಂಬಾ ವ್ಯತ್ಯಾಸವಿದೆ ಹೋಲಿಕೆ ಸರಿಯಲ್ಲ. ಕಂಬಳ ಕೇವಲ ಕ್ರೀಡೆಯಾಗಿರದೆ ಗ್ರಾಮೀಣ ಜನರ ಧಾರ್ಮಿಕ ನಂಬಿಕೆಯಾಗಿದೆ. ಎಂದು ಮಾಜಿ ಅಡ್ವೋಕೇಟ್ ಜನರಲ್ ಡಾ. ಬಿ ವಿ ಆಚಾರ್ಯ ಹೇಳಿದರು.
ಶನಿವಾರ ನಡೆದ ಐಕಳ ಬಾವ ಕಾಂತಬಾರೆ -ಬೂದಾಬಾರೆ ಜೊಡುಕರೆ ಕಂಬಳ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೈಜ್ಞಾನಿಕ ಜ್ಯೋತಿಷಿ ಹಾಗೂ ಅಂತರಾಷ್ಟೀಯ ವಾಸ್ತು ತಜ್ಞ ಚಂದ್ರಶೇಖರ ಸ್ವಾಮೀಜಿ ಮಾತನಾಡಿ ಇತಿಹಾಸ ಪ್ರಸಿದ್ದ ಕಾರ್ನಿಕದ ಐಕಳಬಾವ ಜೊಡುಕರೆ ಕಂಬಳ ಸಂಪ್ರದಾಯ ಬದ್ಧ ಧಾರ್ಮಿಕ ವಿಧಿವಿಧಾನ ಮತ್ತು ಜಾನಪದೀಯ ಸಂಸ್ಕ್ರತಿಗಳನ್ನು ಮೇಳೈಸಿಕೊಂಡು ಬಂದಿದ್ದು ಇದೀಗ ಐಕಳೋತ್ಸವ ಮಾದರಿಯಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭ ಸಾಧಕರಾದ ಮಾಜಿ ಅಡ್ವೋಕೇಟ್ ಜನರಲ್ ಡಾ. ಬಿ ವಿ ಆಚಾರ್ಯ ದಂಪತಿ, ವೈಜ್ಞಾನಿಕ ಜ್ಯೋತಿಷಿ ಹಾಗೂ ಅಂತರಾಷ್ಟೀಯ ವಾಸ್ತು ತಜ್ಞ ಚಂದ್ರಶೇಖರ ಸ್ವಾಮೀಜಿ ದಂಪತಿ ಹಾಗೂ ಐಕಳ ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅದಾನಿ ಪೌಂಡೇಶನ್ ನ ಜಂಟಿ ಅಧ್ಯಕ್ಷ ಕಿಶೋರ್ ಅಳ್ವ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್‌ಕುಮಾರ್ ರೈ, ಐಕಳ ಬಾವ ಯಜಮಾನರಾದ ದೋಗಣ್ಣ ಶೆಟ್ಟಿ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಲವ ಶೆಟ್ಟಿ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಐಕಳ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯೆ ರಶ್ಮಿ ಆಚಾರ್ಯ, ಲೀಲಾಧರ ಶೆಟ್ಟಿ ಕಾಪು, ದಾಮಸ್ ಕಟ್ಟೆ ವಿಜಯ ಬ್ಯಾಂಕ್ ಪ್ರಬಂಧಕ ಸೌರಭ್ ಆರ್ ಕೆ ಗುಪ್ತ, ಜಗದೀಶ್ ಅಧಿಕಾರಿ, ನಿಡ್ಡೋಡಿ ಚಾವಡಿ ಮನೆ ಜಗನಾಥ ಶೆಟ್ಟಿ, ಕೆ. ಭುವನಾಬಿರಾಮ ಉಡುಪ, ಸಾಹುಲ್ ಹಮೀದ್, ಮಯ್ಯದಿ ಪಕ್ಷಿಕೆರೆ, ಪ್ರಪುಲ್ಲ ಶೆಟ್ಟಿ ಎಲ್ಲೂರುಗುತ್ತು, ಗುಣಪಾಲ ಕಡಂಬ, ಮುಂಬೈ ಉದ್ಯಮಿ ಜೆ.ಬಿ.ಶೆಟ್ಟಿ, ಬಂಟರ ಸಂಘ ಮಾತೃಮಂಡಳಿ ಕಾರ್ಯದರ್ಶಿ ವಸಂತ್ ಶೆಟ್ಟಿ, ಉಡುಪಿ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಕಂಬಳ, ಕಂಬಳ ಸಮಿತಿ ಕಾರ್ಯಾಧ್ಯಕ್ಷ ಚಿತ್ತರಂಜನ್ ಭಂಡಾರಿ, ಸಂಚಾಲಕ ಐಕಳ ಮುರಳೀಧರ ಶೆಟ್ಟಿ, ಕೃಷ್ಣ ಮಾರ್ಲ, ಯೋಗೀಶ್ ರಾವ್, ಸಂಜೀವ ಶೆಟ್ಟಿ ಸ್ಥಳಂತಗುತ್ತು, ಲೀಲಾಧರ ಶೆಟ್ಟಿ ಐಕಳ, ಸದಾನಂದ ಕುಂದರ್, ಆನಂದ ಗೌಡ, ಶಶಿಧರ ಐಕಳ ಹರೀಶ್ ಶೆಟ್ಟಿ ತಾಮಣಿಗುತ್ತು, ಮುಂಬೈ ಸಮಿತಿಯ ಕುಶಲ್ ಭಂಡಾರಿ ಐಕಳ ಬಾವ, ಗಣನಾಥ ಜೆ ಶೆಟ್ಟಿ ಐಕಳ ಬಾವ, ತಿಲಕ್ ರಾಜ್ ಬಲ್ಲಾಳ್ ಐಕಳ ಬಾವ, ಪುರಂದ ಶೆಟ್ಟಿ ಐಕಳಬಾವ, ವೇಣುಗೋಪಲ ಶೆಟ್ಟಿ ಐಕಳ ಬಾವ, ಸ್ವರಾಜ್ ಶೆಟ್ಟಿ , ಮನಮೋಹನ ಕೊಂಡೆ ಐಕಳ ಬಾವ, ಸಚಿನ್ ಕೆ ಶೆಟ್ಟಿ ಐಕಳ ಬಾವ, ಸಚಿನ್ ಶೆಟ್ಟಿ ಐಕಳ ಬಾವ, ದೇವಿಪ್ರಸಾದ್ ಶೆಟ್ಟಿ, ಐಕಳಬಾವ ಜಯಪಾಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಐಕಳ ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿದರು, ಟಿವಿ ನಿರೂಪಕ ನವೀನ್ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.

ಐಕಳ ಕಂಬಳಕ್ಕೆ ಹೋಗುವ ರಸ್ತೆಗೆ ಐಕಳ ಬಾವ ಮನೆತನದ ಹಿರಿಯ ಮಾಜಿ ಶಾಸಕ ಸಂಜೀವನಾಥ ಐಕಳ ಅವರ ನಾಮಕರಣದ ನಾಮಪಲಕವನ್ನು ಶ್ರೀ ಚಂದ್ರಶೇಖರ ಸ್ವಾಮಿಜಿ ಅನಾವರಣಗೊಳಿಸಿದರು. ವಿಧಾನ ಪರಿಷ್ಯತ್ ಮುಖ್ಯ ಸಚೇತಕ ಐವನ್ ಡಿಸೋಜ ಅವರ ಅನುದಾನದಲ್ಲಿ ನಿರ್ಮಾಣಗೊಂಡ ಹೈಮಾಸ್ಟ್ ದೀಪ ಮತ್ತು ಕಾಂಕ್ರಿಟೀಕರಣಗೊಂಡ ರಸ್ತೆಯನ್ನು ಹಿರಿಯ ನ್ಯಾಯವಾದಿ ಬಿ.ವಿ ಆಚಾರ್ಯ ಮತ್ತು ಐವನ್ ಡಿಸೋಜ ಉದ್ಘಾಟಿಸಿದರು.

Kinnigoli-27011806 Kinnigoli-27011807 Kinnigoli-27011808 Kinnigoli-27011809 Kinnigoli-27011810 Kinnigoli-27011811 Kinnigoli-27011801 Kinnigoli-27011814 Kinnigoli-27011813 Kinnigoli-27011812 Kinnigoli-27011803 Kinnigoli-27011802 Kinnigoli-27011815 Kinnigoli-27011804 Kinnigoli-27011805

Comments

comments

Comments are closed.

Read previous post:
Kinnigoli-27011801
ಕಾಂತಾಬಾರೆ- ಬೂದಾಬಾರೆ ಜೋಡುಕರೆ ಕಂಬಳ

ತುಳುನಾಡಿನ ಕಂಬಳ ಮತ್ತು ಜಾನಪದ ಕ್ರೀಡಾ ಮೇಳ ಉದ್ಘಾಟನೆ ಕಿನ್ನಿಗೋಳಿ: ಇತಿಹಾಸ ಪ್ರಸಿದ್ಧ ಕಾರಣಿಕವಾದ ಐಕಳ ಕಾಂತಾಬಾರೆ-ಬೂದಾಬಾರೆ ಕಂಬಳವು ಶನಿವಾರ ನಡೆಯಿತು. ಐಕಳ ಬಾವ ಮನತೆನಕ್ಕೆ ಸೇರಿದ ದೈವ...

Close