ಕಾಂತಾಬಾರೆ- ಬೂದಾಬಾರೆ ಜೋಡುಕರೆ ಕಂಬಳ

ತುಳುನಾಡಿನ ಕಂಬಳ ಮತ್ತು ಜಾನಪದ ಕ್ರೀಡಾ ಮೇಳ ಉದ್ಘಾಟನೆ
ಕಿನ್ನಿಗೋಳಿ: ಇತಿಹಾಸ ಪ್ರಸಿದ್ಧ ಕಾರಣಿಕವಾದ ಐಕಳ ಕಾಂತಾಬಾರೆ-ಬೂದಾಬಾರೆ ಕಂಬಳವು ಶನಿವಾರ ನಡೆಯಿತು. ಐಕಳ ಬಾವ ಮನತೆನಕ್ಕೆ ಸೇರಿದ ದೈವ ದೇವರುಗಳಿಗೆ ಹಾಗೂ ದೈವಸ್ಥಾನಗಳಿಗನ್ನು ತಳೀರು ತೋರಣಗಳಿಂದ ಅಲಂಕರಿಸಿ ಮತ್ತು ಐಕಳಬಾವ ಮನೆತನಕ್ಕೆ ಸೇರಿದ ಒಂದು ಜೊತೆ ಜಟ್ಟಿ ಕೋಣಗಳನ್ನು ಅಲಂಕರಿಸಿ ಐಕಳ ಬಾವ ಕುಂಟುಂಬದ ಪುರೋಹಿತರು ಹಾಗೂ ಯಜಮಾನ ಮುಖ್ಯಸ್ಥರ ಮುಖೇನ ಐಕಳ ಬಾವ ಧರ್ಮಚಾವಡಿಯಲ್ಲಿ ಸೇರಿ ಎಲ್ಲಾ ದೈವ ದೇವರನ್ನು ನೆನದು ಪ್ರಾರ್ಥನೆಯ ಬಳಿಕ ಜಟ್ಟಿ ಕೋಣಗಳನ್ನು ಮೆರವಣಿಗೆಯ ಮೂಲಕ ಕಂಬಳಗದ್ದೆಯವರೆಗೆ ತಂದು ಕಂಬಳ ಗದ್ದೆಯ ಬಳಿ ಪ್ರಾರ್ಥಿಸಿ ಶುಭ ಮೂಹರ್ತದಲ್ಲಿ ಏಳಿಂಜೆ ಲಕ್ಷ್ಮೀಜನಾರ್ದನ ದೇವಳದ ಅರ್ಚಕ ಗಣೇಶ್ ಭಟ್ ಸಂಪ್ರದಾಯದಂತೆ ಗದ್ದೆಗೆ ಪೂಜೆ ಸಲ್ಲಿಸಿದ ಬಳಿಕ ಕಂಬಳ ಗದ್ದೆಗೆ ಕೋಣಗಳನ್ನು ಇಳಿಸಲಾಯಿತು. ಬಳಿಕ ಸ್ಪರ್ಧೆಗಾಗಿ ಬಂದ ಕಂಬಳ ಕೋಣಗಳನ್ನು ಇಳಿಸಲಾಯಿತು.
ವೈಜ್ಞಾನಿಕ ಜ್ಯೋತಿಷಿ ಹಾಗೂ ಅಂತರಾಷ್ಟೀಯ ವಾಸ್ತು ತಜ್ಞ ಶ್ರೀ ಚಂದ್ರಶೇಖರ ಸ್ವಾಮೀಜಿ ಕಂಬಳಕ್ಕೆ ಚಾಲನೆಯನ್ನು ನೀಡಿದರು.
ಅದಾನಿ ಫೌಂಡೇಶನ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಕಂಬಳ ಕರೆಗಳ ಉದ್ಘಾಟನೆ ನಡೆಸಿದರು. ಐಕಳಬಾವ ಯಜಮಾನ ದೋಗಣ್ಣ ಶೆಟ್ಟಿ, ಮಾಜಿ ಅಡ್ವೊಕೇಟ್ ಜನರಲ್ ಡಾ. ಬಿ. ವಿ ಆಚಾರ್ಯ, ವಿಧನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಮಂಗಳೂರು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಮಾಲಡಿ, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ಕುಮಾರ್ ಹೆಗ್ಡೆ, ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕಂಬಳ ಸಮಿತಿ ಕಾರ್ಯಾಧ್ಯಕ್ಷ ಚಿತ್ತರಂಜನ್ ಭಂಡಾರಿ ಐಕಳಬಾವ, ಸಂಚಾಲಕ ಐಕಳ ಮುರಳೀಧರ ಶೆಟ್ಟಿ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾರ್ಲ ಹಿರಿಮನೆ, ಉಪಾಧ್ಯಕ್ಷ ವೈ. ಯೋಗೀಶ್ ರಾವ್, ಹರಿಕೃಷ್ಣ ಪುನರೂರು, ಕೆ. ಭುವನಾಭಿರಾಮ ಉಡುಪ, ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ, ಜಗದೀಶ ಅಧಿಕಾರಿ, ಐಕಳ ಗ್ರಾ.ಪಂ. ಅಧ್ಯಕ್ಷ ದಿವಾಕರ ಚೌಟ, ಗುಣಪಾಲ ಕಡಂಬ, ವರುಣ್ ಭಟ್ ಏಳಿಂಜೆ, ಲೀಲಾಧರ ಶೆಟ್ಟಿ, ಸ್ವರಾಜ್ ಶೆಟ್ಟಿ, ಐಕಳಬಾವ ಜಯಪಾಲ ಶೆಟ್ಟಿ, ಸದಾನಂದ ಕುಂದರ್, ಆನಂದ ಗೌಡ, ಶ್ರೀಶ ಸರಾಫ್ ಐಕಳ, ಸುರೇಶ್ ಎಮ್ ಶೆಟ್ಟಿ, ರಾಘವೇಂದ್ರ ಪೂಜಾರಿ, ಸಂಜೀವ ಶೆಟ್ಟಿ ಸ್ಥಳಂತಗುತ್ತು, ಹರೀಶ್ ಶೆಟ್ಟಿ ತಾಮಣಿಗುತ್ತು, ಸುರೇಶ್ ಎಮ್ ಕೋಟ್ಯಾನ್ ಪಟ್ಟೆ, ಚೇತನ್ ಪೂಜಾರಿ, ಕೇಶವ ಶೆಟ್ಟಿ, ಯತಿರಾಜ ರೈ, ಸುರೆಂದ್ರ ಶೆಟ್ಟಿ ಹೊಸಗದ್ದೆ, ಶಶಿಧರ ಐಕಳ ಮತ್ತಿತರರು ಉಪಸ್ಥಿತರಿರಿದ್ದರು.

Kinnigoli-27011801

Comments

comments

Comments are closed.

Read previous post:
Kinnigoli-260118011
Republic day

Kinnigoli: January 26th the Republic day of India was celebrated in befitting manner by paying respect to our county by...

Close