ಗುತ್ತಕಾಡು ಕ್ರಿಕೆಟ್ ಪಂದ್ಯಾಟ

ಕಿನ್ನಿಗೋಳಿ: ಯುವಕರು ಆರೋಗ್ಯದ ಬಗ್ಗೆ ಗಮನ ನೀಡಿ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡು ಗಾಂಜಾ ಅಫೀಮು ಅಂತಹ ಮಾದಕ ದ್ರವ್ಯ ಹಾಗೂ ದುಶ್ಚಟಗಳಿಂದ ದೂರವಿರಬೇಕು ಎಂದು ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್ ಹೇಳಿದರು.
ಗುತ್ತಕಾಡು ಶಾಲಾ ಮೈದಾನದಲ್ಲಿ ಭಾನುವಾರ ನಡೆದ ಗುತ್ತಕಾಡು ಶಾಂತಿನಗರ ಯಂಗ್ ಫ್ರೆಂಡ್ಸ್ ಸೋಟ್ಸ್ ಕ್ಲಬ್ (ರಿ) ಗುತ್ತಕಾಡು ಇದರ ಎಂಟನೇ ವರ್ಷದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರಾ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಧರ್ಮದರ್ಶಿ ವಿವೇಕಾನಂದ, ಟಿ.ಕೆ. ಅಬ್ದುಲ್ ಕಾದರ್, ಗುತ್ತಕಾಡು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಅಬಕಾರಿ ಇಲಾಖೆಯ ರಜಾಕ್, ಗುತ್ತಿಗೆದಾರ ಟಿ. ಹನೀಫ್, ಸಂಗಮ್ ಕ್ರಿಕೆಟ್ ಸಂಸ್ಥೆಯ ಆನಂದ, ಯಂಗ್ ಫ್ರೆಂಡ್ಸ್ ಸೋಟ್ಸ್ ಕ್ಲಬ್ ಅಧ್ಯಕ್ಷ ತಾಹೀರ್ ನಕಾಶ್, ಮುಬೀನ್, ಶಶಿಕಾಂತ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-29011808

Comments

comments

Comments are closed.

Read previous post:
Kinnigoli-29011807
ಪರಿಹಾರ ನಿಧಿ-ಚೆಕ್ ವಿತರಣೆ

ಕಿನ್ನಿಗೋಳಿ: ರಾಷ್ಟ್ರೀಯ ಕುಟುಂಬ ಪರಿಹಾರ ನಿಧಿಯಲ್ಲಿ ಮಂಜೂರಾದ ರೂ 20ಸಾವಿರ ಮೊತ್ತದ ಚೆಕ್ಕುನ್ನು ಸಸಿಹಿತ್ಲು ನಿವಾಸಿ ಪ್ರತಿಮಾ, ಬೆಳ್ಳಾಯೂರು ನಿವಾಸಿಗಳಾದ ನಳಿನಾಕ್ಷಿ ಮತ್ತು ಜಾನಕಿ ಅವರಿಗೆ ಮುಲ್ಕಿ...

Close