ಹಳೆಯಂಗಡಿ ಕಾಲೇಜು ಕಟ್ಟಡ ಶಿಲಾನ್ಯಾಸ

ಕಿನ್ನಿಗೋಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದು ಶಿಕ್ಷಣಕ್ಕೆ ಪೂರಕವಾಗಿ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಮಾಡುವ ಕಾರ್ಯ ಮಾಡುತ್ತಿದೆ. ಮಕ್ಕಳು ಶಿಕ್ಷಣ ಪಡೆದು ಉನ್ನತ ಸ್ತಾನ ಗಳಿಸಿದಾಗ ಶಾಲೆಗೆ ಕೀರ್ತಿಯ ಜೊತೆಗೆ ಹೆತ್ತವರಿಗೆ ನೆಮ್ಮದಿಯುಂಟಾಗುತ್ತದೆ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಕೆ ಅಭಯಚಂದ್ರ ಜ್ಯೆನ್ ಹೇಳಿದರು.
ಹಳೆಯಂಗಡಿ ಇಂದಿರಾ ನಗರದಲ್ಲಿರುವ ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಉಚ್ಚಾತರ್ ಶಿಕ್ಷಾ ಅಭಿಯಾನ್ ಯೋಜನೆಯಡಿ 70 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.
ರಾಜ್ಯ ಅಲ್ಪ ಸಂಖ್ಯಾತರ ನಿಗಮದ ಅಧ್ಯಕ್ಷ ಎಂ ಎ ಗಫೂರ್ ಮಾತನಾಡಿ ರಾಜ್ಯ ಸರ್ಕಾರವು ಕಳೆದ ನಾಲ್ಕುವರೆ ವರ್ಷಗಳಲ್ಲಿ ಗ್ರಾಮೀಣ ಪರಿಸರಕ್ಕೆ ಹೆಚ್ಚಿನ ಅನುದಾನಗಳನ್ನು ನೀಡುತ್ತಿದ್ದು ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣಕ್ಕೆ ಪೂರಕವಾದ ಎಲ್ಲಾ ಪ್ರೋತ್ಸಾಹಗಳನ್ನು ನೀಡುತ್ತಿದೆ. ಅಲ್ಪ ಸಂಖ್ಯಾತರ ನಿಗಮದಿಂದ ಕೂಡ ಹೆಚ್ಚಿನ ಅನುದಾನ ನೀಡುತ್ತಿದೆ ಎಂದರು.
ಈ ಸಂದರ್ಭ ಹಳೆಯಂಗಡಿ ಪಂಚಾಯಿತಿ ಅಧ್ಯಕ್ಷೆ ಜಲಜ ಪಾಣರ್, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಅಬ್ದುಲ್ ಅಜೀಜ್, ಅಬ್ದುಲ್ ಖಾದರ್, ಸುಜಾತ , ಪ್ರಮೀಳಾ, ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ಯಾಲೆಟ್ ಪಿಂಟೋ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಕರಾವಳಿ ಅಭಿವೃದ್ದಿ ಪ್ರಾಕಾರದ ಸದಸ್ಯ ಸಾಹುಲ್ ಹಮೀದ್, ಉದ್ಯಮಿ ಪ್ರಸಾದ್ ಕಾಂಚನ್, ಹಳೆಯಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ವಿಶ್ವನಾಥ ಭಟ್, ಕಾಲೇಜು ಅಭಿವೃದ್ದಿ ಸಮಿತಿ ಹಾಗೂ ಮೂಡಾದ ಸದಸ್ಯ ಎಚ್ ವಸಂತ ಬೆರ್ನಾಡ್, ಲೋಕೋಪಯೋಗಿ ಇಲಾಖೆಯ ಅಭಿಯಂತರರಾದ ಗೋಪಾಲ್, ಗುತ್ತಿಗೆದಾರ ಪುರುಷೋತ್ತಮ ಕುಲಾಲ್, ಸವಿತಾ ಶರತ್ ಬೆಳ್ಳಾಯರು, ಧರ್ಮಾನಂದ ತೋಕೂರು, ಶಿವಾನಂದ ಆರ್ ಕೆ, ಅಶೋಕ್ ಪೂಜಾರ ಮತ್ತಿತರರು ಉಪಸ್ಥಿತರಿದ್ದರು.

Kinnigoli-29011804

Comments

comments

Comments are closed.

Read previous post:
Kinnigoli-29011803
ಸಸಿಹಿತ್ಲು ರಸ್ತೆ ಶಿಲಾನ್ಯಾಸ

ಕಿನ್ನಿಗೋಳಿ : ಅಂತರಾಷ್ಟ್ರೀಯ ಮಟ್ಟದಲ್ಲಿ ಸಸಿಹಿತ್ಲು ಸರ್ಫಿಂಗ್ ನಲ್ಲಿ ಹೆಸರು ಪಡೆದಿದೆ. ಸಸಿಹಿತ್ಲು ನ ಬೀಚ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈಗಾಗಲೇ ಸುಮಾರು 5 ಕೋಟಿ...

Close