ಐಕಳಬಾವ ಕಂಬಳ : ಸಾಧಕರಿಗೆ ಗೌರವ

ಕಿನ್ನಿಗೋಳಿ: ಧಾರ್ಮಿಕ ನೆಲೆಗಟ್ಟಿನಲ್ಲಿ ತುಳುನಾಡಿನ ಕಂಬಳಗಳು ನಿಂತಿದೆ. ಎಂದು ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ. ಎನ್ . ರಾಜೇಂದ್ರಕುಮಾರ್ ಹೇಳಿದರು.
ಶನಿವಾರ ನಡೆದ ಇತಿಹಾಸ ಪ್ರಸಿದ್ದ ಐಕಳ ಭಾವ ಕಾಂತಾಬಾರೆ ಬೂದಬಾರೆ ಜೊಡುಕರೆ ಕಂಬಳದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಡಿದರು. ಮಾಜಿ ಸಚಿವ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಂಬಳ ನಿಂತು ಹೋಗಿದ್ದ ಸಂದರ್ಭದಲ್ಲಿ ಕಂಬಳದ ಪರವಾಗಿ ಜನಪ್ರತಿನಿಗಳು ಸರಕಾರಕ್ಕೆ ಒತ್ತಾಯಿಸಿ ಹಾಗೂ ಹಲವಾರು ಸಂಘ ಸಂಸ್ಥೆಗಳು ಮತ್ತೆ ಆರಂಭಿಸಲು ಪ್ರಯತ್ನ ಮಾಡಿದ್ದಾರೆ. ಎಂದು ಹೇಳಿದರು.
ಸಾಧಕರಿಗೆ ಗೌರವ
ದ.ಕ. ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಮ್ . ಎನ್ ರಾಜೇಂದ್ರ ಕುಮಾರ್, ಮಾಜಿ ಸಚಿವ ಕಾಪು ಶಾಸಕ ವಿನಯ ಕುಮಾರ್ ಸೊರಕೆ, ಮುಂಬಯಿ ಉದ್ಯಮಿ ವಿಶ್ವ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬಯಿಯ ಉದ್ಯಮಿ ಕೃಷ್ಣ ಶೆಟ್ಟಿ ದಂಪತಿ, ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಮತ್ತಿತರರನ್ನು ಸನ್ಮಾನಿಸಲಾಯಿತು.
ಐಕಳ ಬಾವ ಯಜಮಾನರಾದ ದೋಗಣ್ಣ ಶೆಟ್ಟಿ, ಬಾರ್ಕೂರು ಶಾಂತಾರಾಮ ಶೆಣೈ, ತಾರಾ ನಟಿ ಚಿರಶ್ರೀ ಅಂಚನ್, ನವೀನಚಂದ್ರ ಶೆಟ್ಟಿ, ಶೆಡ್ಡೆ ಮಂಜುನಾಥ ಭಂಡಾರಿ, ಮುಂಬಯಿ ಉದ್ಯಮಿ ಐಕಳ ಗುಣಪಾಲ ಶೆಟ್ಟಿ, ಇರ್ವತ್ತೂರು ಭಾಸ್ಕರ ಕೋಟ್ಯಾನ್, ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ದ.ಕ. ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಗಣೇಶ್ ಶೆಟ್ಟಿ ಐಕಳ, ಶಶಿಕುಮಾರ್ ಬೊಲ್ಯೂಟ್ಟು, ರಘುರಾಮ ಅಡ್ಯಂತಾಯ, ದಿವಾಕರ ಸಾಮಾನಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಗಫೂರ್, ಐಕಳ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಚಿತ್ತರಂಜನ್ ಭಂಡಾರಿ, ಐಕಳ ಮುರಳೀಧರ ಶೆಟ್ಟಿ, ಕೃಷ್ಣ ಮಾರ್ಲ, ಯೋಗೀಶ್ ರಾವ್ ಏಳಿಂಜೆ, ಸಂಜೀವ ಶೆಟ್ಟಿ ಸ್ಥಳಂತಗುತ್ತು, ಲೀಲಾಧರ ಶೆಟ್ಟಿ ಐಕಳ, ಸದಾನಂದ ಕುಂದರ್, ಆನಂದ ಗೌಡ, ಶಶಿಧರ ಐಕಳ, ಹರೀಶ್ ಶೆಟ್ಟಿ ತಾಮಣಿಗುತ್ತು, ಮುಂಬೈ ಸಮಿತಿಯ ಕುಶಲ್ ಭಂಡಾರಿ ಐಕಳ ಬಾವ, ಗಣನಾಥ ಜೆ ಶೆಟ್ಟಿ ಐಕಳ ಬಾವ, ತಿಲಕ್ ರಾಜ್ ಬಲ್ಲಾಳ್ ಐಕಳ ಬಾವ, ಪುರಂಧರ ಶೆಟ್ಟಿ ಐಕಳಬಾವ, ವೇಣುಗೋಪಲ ಶೆಟ್ಟಿ ಐಕಳ ಬಾವ, ಸ್ವರಾಜ್ ಶೆಟ್ಟಿ, ಮನಮೋಹನ ಕೊಂಡೆ ಐಕಳ ಬಾವ, ಸಚಿನ್ ಕೆ ಶೆಟ್ಟಿ ಐಕಳ ಬಾವ, ಸಚಿನ್ ಶೆಟ್ಟಿ ಐಕಳ ಬಾವ, ಐಕಳ ಜಯಪಾಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಂಬಳ ಸಮಿತಿಯ ಅಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-29011806

Comments

comments

Comments are closed.

Read previous post:
Kinnigoli-29011805
ಪಾವಂಜೆ ಕೊಳುವೈಲು ರಸ್ತೆ ಗುದ್ದಲಿಪೂಜೆ

ಕಿನ್ನಿಗೋಳಿ: ಗ್ರಾಮೀಣ ರಸ್ತೆಗಳ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ದೀರ್ಘ ಬಾಳಿಕೆಯ ಕಾಂಕ್ರೀಕರಣ ರಸ್ತೆಗಳಿಗೆ ಒತ್ತುಕೊಡಲಾಗುತ್ತಿದೆ. ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗಳಿಗೆ ಸಾಗಿಸಲು ಇದರಿಂದ ರೈತರಿಗೆ ಕಡಿಮೆ ಶ್ರಮ ಹಾಗೂ ಸಮಯ...

Close