ಕಿನ್ನಿಗೋಳಿ : ತೇರಗುರಿ ಕಿಂಡಿ ಅಣೆಕಟ್ಟು ಉದ್ಘಾಟನೆ

ಕಿನ್ನಿಗೋಳಿ: ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಹಾಗೂ ಕೃಷಿ ಕಾರ್ಯಕ್ಕೆ ಉತ್ತೇಜನ ನೀಡುವ ಕೆಲಸ ಆಗಬೇಕಾಗಿದೆ. ಅಲ್ಲಲ್ಲಿ ಚಿಕ್ಕ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿದರೇ ಹೆಚ್ಚಿನ ಪ್ರಯೋಜನ ಕೃಷಿಕರಿಗೆ ಸಿಗಲಿದೆ ಎಂದು ಮುಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ತೇರಗುರಿಯಲ್ಲಿ ಐದು ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿದ ಕಿಂಡಿಅಣೆಕಟ್ಟನ್ನು ಉದ್ಘಾಟಿಸಿ ಮಾತನಾಡಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನ ಸಿಕ್ವೇರಾ, ಉಪಾಧ್ಯಕ್ಷೆ ಸುಜಾತ ಪೂಜಾರಿ, ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಗ್ರಾಮ ಪಂಚಾಯತ್ ಸದಸ್ಯರಾದ ಅರುಣ್ ಕುಮಾರ್, ಸಂತೋಷ್ , ಸಂತಾನ್ ಡಿಸೋಜ, ಗುತ್ತಿಗೆದಾರ ಲಾರೆನ್ಸ್ ಪಕ್ಷಿಕರೆ, ಟಿ. ಹನೀಫ್, ಪ್ರಕಾಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-29011801

Comments

comments

Comments are closed.

Read previous post:
Kinnigoli-27011803
ಕಂಬಳ ಕ್ರೀಡೆ ಗ್ರಾಮೀಣ ಜನರ ಧಾರ್ಮಿಕ ನಂಬಿಕೆ

ಕಿನ್ನಿಗೋಳಿ: ಜಲ್ಲಿಕಟ್ಟು ಮತ್ತು ಕಂಬಳಕ್ಕೆ ತುಂಬಾ ವ್ಯತ್ಯಾಸವಿದೆ ಹೋಲಿಕೆ ಸರಿಯಲ್ಲ. ಕಂಬಳ ಕೇವಲ ಕ್ರೀಡೆಯಾಗಿರದೆ ಗ್ರಾಮೀಣ ಜನರ ಧಾರ್ಮಿಕ ನಂಬಿಕೆಯಾಗಿದೆ. ಎಂದು ಮಾಜಿ ಅಡ್ವೋಕೇಟ್ ಜನರಲ್ ಡಾ. ಬಿ...

Close