ಪಾವಂಜೆ ಕೊಳುವೈಲು ರಸ್ತೆ ಗುದ್ದಲಿಪೂಜೆ

ಕಿನ್ನಿಗೋಳಿ: ಗ್ರಾಮೀಣ ರಸ್ತೆಗಳ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ದೀರ್ಘ ಬಾಳಿಕೆಯ ಕಾಂಕ್ರೀಕರಣ ರಸ್ತೆಗಳಿಗೆ ಒತ್ತುಕೊಡಲಾಗುತ್ತಿದೆ. ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗಳಿಗೆ ಸಾಗಿಸಲು ಇದರಿಂದ ರೈತರಿಗೆ ಕಡಿಮೆ ಶ್ರಮ ಹಾಗೂ ಸಮಯ ಉಳಿತಾಯವಾಗುತ್ತಿದೆ ಎಂದು ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಹೇಳಿದರು.
ಸಂಸದ ನಳಿನ್‌ಕುಮಾರ್ ಕಟೀಲ್ ಅವರ 5 ಲಕ್ಷ ಅನುದಾನದಲ್ಲಿ ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾವಂಜೆ ಕೊಳುವೈಲು ಸಂಪರ್ಕ ರಸ್ತೆಗೆ ಭಾನುವಾರ ನಡೆದ ಕಾಂಕ್ರಿಟೀಕರಣ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಮುಲ್ಕಿ ಮೂಡಬಿದಿರೆ ಬಿಜೆಪಿ ಕ್ಷೇತ್ರದ ಅಧ್ಯಕ್ಷ ಈಶ್ವರ್ ಕಟೀಲ್, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಮಾಜಿ ತ.ಪಂ. ಸದಸ್ಯೆ ಸಾವಿತ್ರಿ ಸುವರ್ಣ, ಸತೀಶ್ ಭಟ್ ಕೊಳುವೈಲು, ಬಿಜೆಪಿ ಶಕ್ತಿ ಕೇಂದ್ರದ ಸಂತೋಷ್ ಶೆಟ್ಟಿ, ರೈತ ಮೋರ್ಚಾದ ಶೇಖರ ದೇವಾಡಿಗ, ಬಿಜೆಪಿ ಸ್ಥಾನೀಯ ಸಮಿತಿಯ ನರೇಂದ್ರ ಪ್ರಭು, ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ವಿನೋದ್‌ಕುಮಾರ್ ಕೊಳುವೈಲು, ಸುಗಂಧಿ, ಅಶೋಕ್, ಜಯಂತಿ, ಓಂ ಕ್ರಿಕೆಟರ‍್ಸ್ ಅಧ್ಯಕ್ಷ ಶರತ್, ತಿಮ್ಮಪ್ಪ ಕೋಟ್ಯಾನ್, ಕೃಷ್ಣ ದೇವಾಡಿಗ, ಹಿಂದೂ ಜಾಗರಣ ವೇದಿಕೆಯ ಸಂಚಾಲಕ ತುಕರಾಮ ಸುವರ್ಣ, ಮಹಾಬಲ ಅಂಚನ್, ಲೀಲಾ ಬಂಜನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-29011805

Comments

comments

Comments are closed.

Read previous post:
Kinnigoli-29011804
ಹಳೆಯಂಗಡಿ ಕಾಲೇಜು ಕಟ್ಟಡ ಶಿಲಾನ್ಯಾಸ

ಕಿನ್ನಿಗೋಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದು ಶಿಕ್ಷಣಕ್ಕೆ ಪೂರಕವಾಗಿ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಮಾಡುವ ಕಾರ್ಯ ಮಾಡುತ್ತಿದೆ. ಮಕ್ಕಳು...

Close