ಸಸಿಹಿತ್ಲು ರಸ್ತೆ ಶಿಲಾನ್ಯಾಸ

ಕಿನ್ನಿಗೋಳಿ : ಅಂತರಾಷ್ಟ್ರೀಯ ಮಟ್ಟದಲ್ಲಿ ಸಸಿಹಿತ್ಲು ಸರ್ಫಿಂಗ್ ನಲ್ಲಿ ಹೆಸರು ಪಡೆದಿದೆ. ಸಸಿಹಿತ್ಲು ನ ಬೀಚ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈಗಾಗಲೇ ಸುಮಾರು 5 ಕೋಟಿ ವೆಚ್ಚದಲ್ಲಿ ತಡೆಗೋಡೆ ರಚನೆ, 4.9 ಕೋಟಿ ವೆಚ್ಚದಲ್ಲಿ ಜೆಟ್ಟಿ ನಿರ್ಮಣ, ಸಸಿಹಿತ್ಲುವಿನ ಮುಂಡಾ ಬೀಚ್ ಸೇರಿದಂತೆ ಹಲವಾರು ಅಭಿವೃದ್ದಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ ಅಭಯಚಂದ್ರ ಜ್ಯೆನ್ ಹೇಳಿದರು.
ಸುಮಾರು 4.4 ಕೋಟಿ ಅಂದಾಜು ವೆಚ್ಚದಲ್ಲಿ ಸುನಾಮಿ ಫಂಡ್ ನಲ್ಲಿ ನಿರ್ಮಾಣಗೊಳ್ಳಲಿರುವ ಸಸಿಹಿತ್ಲು ವಿನ ಶ್ರೀ ಭಗವತಿ ಕ್ಷೇತ್ರದಲ್ಲಿಂದ ಸಸಿಹಿತ್ಲು ಬೀಚ್ ಗೆ ಹೋಗುವ ಮುಖ್ಯ ರಸ್ತೆಯ ಕಾಂಕ್ರೀಟಿಕರಣಕ್ಕೆ ಸಸಿಹಿತ್ಲುವಿನ ಶ್ರೀ ಭಗವತಿ ಕ್ಷೇತ್ರದ ಬಳಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು ಈಗಿರುವ ಡಾಮರು ರಸ್ತೆಯು ಮಳೆಗಾಲದಲ್ಲಿ ಕೊಚ್ಚಿ ಹೋಗುತ್ತಿರುವುದರಿಂದ ಸುನಾಮಿ ಫಂಡ್ ಮೂಲಕ ರಸ್ತೆಯ ಕಾಂಕ್ರೀಟಿಕರಣವನ್ನು ಕ್ಯೆಗೆತ್ತಿಕೊಳ್ಳಲಾಗಿದೆ. ಸಸಿಹಿತ್ಲುವನ್ನು ರಾಜ್ಯದಲ್ಲಿ ಅತ್ಯುತ್ತಮ ಪ್ರವಾಸಿ ಕೇಂದ್ರವನ್ನಾಗಿ ರೂಪಿಸುವ ಯೋಜನೆಯನ್ನು ಸರ್ಕಾರ ಕ್ಯೆಗೆತ್ತಿಕೊಂಡಿದ್ದು ಇದಕ್ಕೆ ಸ್ಥಳೀಯರ ಸಂಪೂರ್ಣ ಸಹಕಾರ ಅಗತ್ಯ ಎಂದರು.
ರಾಜ್ಯ ಅಲ್ಪ ಸಂಖ್ಯಾತರ ನಿಗಮದ ಅಧ್ಯಕ್ಷ ಎಂ ಎ ಗಫೂರ್ ರವರು ಮಾತನಾಡಿ ಶಾಸಕ ಕೆ ಅಭಯ ಚಂದ್ರರವರು ಕಳೆದ 25 ವರ್ಷಗಳಿಂದ ತಮ್ಮ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದು ಅವರ ಕ್ಷೇತ್ರವು ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ದಿ ಹೊಂದಿದ ಕ್ಷೇತ್ರವಾಗಿದೆ. ಸಸಿಹಿತ್ಲು ಉತ್ತಮ ವಾತಾವರಣ ಹೊಂದಿದ್ದು ಪ್ರವಾಸೋದ್ಯಮ ಕೇಂದ್ರವಾಗಿ ರೂಪುಗೊಂಡಲ್ಲಿ ಸ್ಥಳೀಯರಿಗೆ ಹೆಚ್ಚಿನ ಅವಕಾಶಗಳು ಸಿಗಲಿದೆ. ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಮೂಲಕ ಇಲ್ಲಿನ ಅಭಿವೃದ್ದಿಗೆ ಸಹಕರಿಸುವುದಾಗಿ ತಿಳಿಸಿದರು. ಸ್ಥಳೀಯರಾದ ಕೇಶವ ಸಾಲ್ಯಾನ್ ತೆಂಗಿನ ಕಾಯಿ ಒಡೆಯುವ ಮೂಲಕ ಗುದ್ದಲಿ ಪೂಜೆ ಮಾಡಿದರು. ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ಯಾಲೆಟ್ ಪಿಂಟೋ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಹಳೆಯಂಗಡಿ ಪಂಚಾಯಿತಿ ಅಧ್ಯಕ್ಷೆ ಜಲಜ ಪಾಣರ್, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಅಬ್ದುಲ್ ಅಜೀಜ್, ಅಬ್ದುಲ್ ಖಾದರ್, ಚಿತ್ರಾ ಸುರೇಶ್, ಗುಣವತಿ, ಚಂದ್ರ ಕುಮಾರ್, ಅನಿಲ್ ಕುಮಾರ್, ಅಶೋಕ್ ಬಂಗೇರ, ಸಸಿಹಿತ್ಲು ಬೀಚ್ ಅಭಿವೃದ್ದಿ ಸಮಿತಿ ಅಧ್ಯಕ್ಷ ಎಚ್ ವಸಂತ ಬೆರ್ನಾಡ್, ಕಾಂತು ಲಕ್ಕಣ ಯಾನೇ ಯಾದವ ಬಂಗೇರ, ಮೂಲ್ಕಿ ನಗರ ಪಂಚಾಯಿತಿ ಸದಸ್ಯರಾದ ಯೋಗೀಶ್ ಕೋಟ್ಯಾನ್, ಅಶೋಕ್ ಪೂಜಾರ, ಕದಿಕೆ ಮೊಗವೀರ ಸಭಾದ ಅಧ್ಯಕ್ಷ ವಿಠಲ ಬಂಗೇರ, ಧನರಾಜ್ ಕೋಟ್ಯಾನ್, ಜಗನ್ನಾಥ ಕೋಟ್ಯಾನ್, ಗುತ್ತಿಗೆದಾರರಾದ ಫಿಲಿಪ್ ಡಿ ಕೋಸ್ತಾ, ಮಾಜಿ ತಾ.ಪಂ. ಸದಸ್ಯ ಮನ್ಸೂರ್ ಸಾಗ್, ಶಿವಾನಂದ ಆರ್ ಕೆ, ಮಲ್ಲಿಕಾರ್ಜುನ ಆರ್ ಕೆ, ಮಯ್ಯದ್ದಿ ಪಕ್ಷಿಕೆರೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-29011803

Comments

comments

Comments are closed.

Read previous post:
Kinnigoli-29011802
ರಾಷ್ಟ್ರ ಭಕ್ತಿ ಮಕ್ಕಳಲ್ಲಿ ಮೂಡಿಸಬೇಕು

ಕಿನ್ನಿಗೋಳಿ: ರಾಷ್ಟ್ರ ಭಕ್ತಿ ಮಕ್ಕಳಲ್ಲಿ ಮೂಡಿಸಬೇಕು. ಎಳವೆಯಲ್ಲಿಯೇ ಮಕ್ಕಳಿಗೆ ಮೌಲ್ಯಾಧಾರಿತ ಸಂಸ್ಕಾರಬದ್ಧ ಶಿಕ್ಷಣ ಕೊಡಿಸುವುದು ಹೆತ್ತವರ ಆದ್ಯ ಕರ್ತವ್ಯ ಎಂದು ಮಂಗಳೂರಿನ ಎ. ಬಿ. ಶೆಟ್ಟಿ ದಂತ ಕಾಲೇಜು...

Close