ಸಮಾಜ ಮುಖಿ ಕೆಲಸದಿಂದ ಗ್ರಾಮದ ಅಭಿವೃದ್ಧಿ

ಕಿನ್ನಿಗೋಳಿ: ಸಂಘ ಸಂಸ್ಥೆಗಳ ಸಮಾಜ ಮುಖಿ ಕೆಲಸದಿಂದ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ ಹೇಳಿದರು.
ಕೊಡೆತ್ತೂರು ಆದರ್ಶಬಳಗ (ರಿ) ಆಶ್ರಯದಲ್ಲಿ ಶನಿವಾರ ನಡೆದ ಶ್ರೀ ಕೊಡ್ಡಬ್ಬು ದೈವದ ವಾರ್ಷಿಕ ನೇಮದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಕಿನ್ನಿಗೋಳಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ನಿವೃತ್ತ ಶಿಕ್ಷಕ ಕೆ. ವಿ. ಶೆಟ್ಟಿ ಕೊಡೆತ್ತೂರು ಹಾಗೂ ವಿದ್ಯಾರ್ಥಿ ಸಾಧಕರಾದ ಸೃಜನ್ ಐ ಮೂಲ್ಯ ಹಾಗೂ ಭವ್ಯ ಶ್ರೀ ಅವರನ್ನು ಸನ್ಮಾನಿಸಲಾಯಿತು.
ಕೊಡೆತ್ತೂರು ಗುತ್ತು ಸಂಜೀವ ಶೆಟ್ಟಿ, ಅರಸು ಕುಂಜಿರಾಯ ದೈವಸ್ಥಾನದ ಜಯರಾಮ ಮುಕ್ಕಾಲ್ದಿ, ಚಂದ್ರಹಾಸ ಕೊಡೆತ್ತೂರು, ಕೊಡೆತ್ತೂರು ಆದರ್ಶಬಳಗ ಅಧ್ಯಕ್ಷ ಸೂರಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ದಾಮೋದರ ಶೆಟ್ಟಿ ಸ್ವಾಗತಿಸಿದರು. ಯುಗಪುರುಷ ಪ್ರಧಾನ ಸಂಪದಕ ಕೆ. ಭುವನಾಭಿರಾಮ ಉಡುಪ ಅಭಿನಂಧನಾ ಭಾಷಣಗೈದರು. ಅನಂತ ಉಡುಪ ಸನ್ಮಾನ ಪತ್ರ ವಾಚಿಸಿದರು. ತಾರಾನಾಥ ಶೆಟ್ಟಿ ವಂದಿಸಿದರು. ಕೇಶವ ಕರ್ಕೇರಾ ಕಾರ್ಯಕ್ರಮ ನಿರೂಪಿಸಿದರು.

Kinnigoli-29011809

Comments

comments

Comments are closed.

Read previous post:
Kinnigoli-29011808
ಗುತ್ತಕಾಡು ಕ್ರಿಕೆಟ್ ಪಂದ್ಯಾಟ

ಕಿನ್ನಿಗೋಳಿ: ಯುವಕರು ಆರೋಗ್ಯದ ಬಗ್ಗೆ ಗಮನ ನೀಡಿ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡು ಗಾಂಜಾ ಅಫೀಮು ಅಂತಹ ಮಾದಕ ದ್ರವ್ಯ ಹಾಗೂ ದುಶ್ಚಟಗಳಿಂದ ದೂರವಿರಬೇಕು ಎಂದು ಎಪಿಎಂಸಿ ಅಧ್ಯಕ್ಷ...

Close