ರಾಷ್ಟ್ರ ಭಕ್ತಿ ಮಕ್ಕಳಲ್ಲಿ ಮೂಡಿಸಬೇಕು

ಕಿನ್ನಿಗೋಳಿ: ರಾಷ್ಟ್ರ ಭಕ್ತಿ ಮಕ್ಕಳಲ್ಲಿ ಮೂಡಿಸಬೇಕು. ಎಳವೆಯಲ್ಲಿಯೇ ಮಕ್ಕಳಿಗೆ ಮೌಲ್ಯಾಧಾರಿತ ಸಂಸ್ಕಾರಬದ್ಧ ಶಿಕ್ಷಣ ಕೊಡಿಸುವುದು ಹೆತ್ತವರ ಆದ್ಯ ಕರ್ತವ್ಯ ಎಂದು ಮಂಗಳೂರಿನ ಎ. ಬಿ. ಶೆಟ್ಟಿ ದಂತ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಯು. ಎಸ್. ಕೃಷ್ಣ ನಾಯಕ್ ಹೇಳಿದರು.
ತೋಕೂರು ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಗಣರಾಜ್ಯೋತ್ಸವದ ನಿಮಿತ್ತ ಶುಕ್ರವಾರ ಶಾಲಾ ಆವರಣದಲ್ಲಿ ಸನಾತನ ನಾಟ್ಯಾಲಯ, ಮಂಗಳೂರು ಅವರಿಂದ ಚಂದ್ರಶೇಖರ್ ಶೆಟ್ಟಿ ಹಾಗೂ ಶಾರದಾ ಮಣಿ ಶೇಖರ್ ನೇತೃತ್ವದಲ್ಲಿ ಆದರ್ಶ ಗೋಖಲೆ ಅವರ ನಿರೂಪಣೆಯಲ್ಲಿ ಮೂಡಿಬರುವ ನೃತ್ಯ ಗೀತ ನಿರೂಪಣೆ ಸಂಭಾಷಣೆಗಳನ್ನೊಳಗೊಂಡ ನೃತ್ಯ ತರಂಗಿಣಿ ರಾಷ್ಟ್ರದೇವೋಭವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಷ್ಟ್ರಪ್ರೇಮ ಬೆಳೆಸುವ ಶಿಕ್ಷಣ ಮೂಡಿಬರಬೇಕು. ಮಕ್ಕಳನ್ನು ರಾಷ್ಟ್ರಸೇವೆಯಲ್ಲಿ ತೊಡಗಿಸಕೊಳ್ಳಲು ಪ್ರೇರೇಪಿಸೋಣ ಎಂದು ತೋಕೂರು ಐಟಿಐ ಪ್ರಿನ್ಸಿಪಾಲ್ ವೈ. ಎನ್ ಸಾಲ್ಯಾನ್ ಹೇಳಿದರು.

ಈ ಸಂದರ್ಭ ಚಿತ್ರ ತಾರೆ ಚಿರಶ್ರೀ ಅಂಚನ್, ತೋಕೂರು ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀಲತಾ ರಾವ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರಿನ ಸನಾತನ ನಾಟ್ಯಾಲಯದವರಿಂದ ರಾಷ್ಟ್ರದೇವೋಭವ ಹಾಗೂ ವಿದ್ಯಾರ್ಥಿಗಳು, ಶಿಕ್ಷಕರು. ಮಕ್ಕಳ ಹೆತ್ತವರ ಸಂಯೋಜನೆಯ ನೃತ್ಯರೂಪಕ ಮನಮೋಹಕವಾಗಿ ನಡೆಯಿತು.

Kinnigoli-29011802

Comments

comments

Comments are closed.