ಎಳತ್ತೂರು ನೆಲಗುಡ್ಡೆ ಹೈಮಾಸ್ಟ್ ದೀಪ ಉದ್ಘಾಟನೆ

ಕಿನ್ನಿಗೋಳಿ: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯೇ ಕೇಂದ್ರ ಸರಕಾರದ ಮೂಲ ಉದ್ದೇಶ. ಜನರ ಸರಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಎಂದು ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು ಹೇಳಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಳತ್ತೂರು ನೆಲಗುಡ್ಡೆ ಕೋಡ್ಡಬ್ಬು ದೈವಸ್ಥಾನದ ಹತ್ತಿರ ನಿರ್ಮಾಣವಾದ ಹೈಮಾಸ್ಟ್ ದೀಪವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ ಕಿನ್ನಿಗೋಳಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯಿತಿಯಿಂದ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ನೆಲಗುಡ್ಡೆಯಲ್ಲಿ ೧.೫೦ಲಕ್ಷರೂ ವೆಚ್ಚದಲ್ಲಿ ಹೈಮಾಸ್ಟ್ ದೀಪ ಹಾಗೂ ರಸ್ತೆ ವೇಗತಡೆ ನಿರ್ಮಾಣವಾಗಿದೆ ಎಂದು ಹೇಳಿದರು.
ಬಿಜೆಪಿ ನಾಯಕರಾದ ಕೆ.ಭುವನಾಭಿರಾಮ ಉಡುಪ, ಮುಲ್ಕಿ ಮೂಡಬಿದಿರೆ ಬಿಜೆಪಿ ಕ್ಷೇತ್ರ ಅಧ್ಯಕ್ಷ ಈಶ್ವರ್ ಕಟೀಲು, ಮಂಗಳೂರು ತಾ. ಪಂ. ಸದಸ್ಯ ದಿವಾಕರ ಕರ್ಕೇರ, ಶರತ್ ಕುಮಾರ್ ಕುಬೆಯೂರು, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ಯಾಮಲ ಹೆಗ್ಡೆ, ಪ್ರಕಾಶ್ ಹೆಗ್ಡೆ, ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ, ಶ್ರೀಧರ ಶೆಟ್ಟಿ, ಅಂಗನವಾಡಿ ಶಿಕ್ಷಕಿ ಲೀಲಾ, ಬೇಬಿ ಕೆ, ಜಯಂತಿ, ಕುಶಲತಾ, ಪ್ರಶಾಂತ್ , ಕಪಿಲ್ ಅಂಚನ್ ಗುತ್ತಕಾಡು, ಸುರೇಶ್ ಕುಮಾರ್ ಗುತ್ತಕಾಡು ಮತ್ತಿತರರು ಉಪಸ್ಥಿತರಿದ್ದರು.

Kinnigoli-30011805

Comments

comments

Comments are closed.

Read previous post:
Kinnigoli-30011804
ಸ್ಮರಣೀಯ ಸಾಧಕ ಸೋಮಪ್ಪ ಸುವರ್ಣ

ಕಿನ್ನಿಗೋಳಿ: ಕೃಷಿಕ, ಶಿಕ್ಷಕ, ಸಮಾಜಸೇವಕ ಹಾಗೂ ಶಾಸಕರಾಗಿ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಜನಪ್ರಿಯರಾದ ಸೋಮಪ್ಪ ಸುವರ್ಣರು ಸದಾ ಸ್ಮರಣೀಯರು ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ...

Close