ಕಟೀಲು ಗ್ರಾಮ ಸಭೆ

ಕಿನ್ನಿಗೋಳಿ: ಕಟೀಲು ಗ್ರಾಮ ಪಂಚಾಯಿತಿ ಗ್ರಾಮ ಸಭೆ ಸೋಮವಾರ ಕಟೀಲು ಗ್ರಾಂಡ್ ಸಭಾಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು
ಕಟೀಲು ಶಾಲಾ ಬಳಿ ಕುಡಿಯುವ ನೀರಿನ ಟ್ಯಾಂಕ್‌ನ್ನು ಕೆಡವಲಾಗಿದ್ದು ವರ್ಷ ಒಂದಾದರೂ ಹೊಸ ಟ್ಯಾಂಕ್ ಇನ್ನು ನಿರ್ಮಾಣ ಮಾಡಿಲ್ಲ ಪಂಚಾಯಿತಿ ಈ ಬಗ್ಗೆ ಗಾಢ ಮೌನದಿಂದಿದೆ ಎಂದು ಗ್ರಾಮಸ್ಥ ಸಂಜೀವ ಮಡಿವಾಳ ಮತ್ತು ಚಂದ್ರಹಾಸ ಶೆಟ್ಟಿ ಮತ್ತಿತರರು ಆಕ್ರೋಶದಿಂದ ಕೇಳಿದಾಗ ಪಿಡಿಒ ಪ್ರಕಾಶ್ ಬಿ. ಉತ್ತರಿಸಿ ಪಂಚಾಯಿತಿಗೆ ಮಾಹಿತಿ ಇಲ್ಲ ಎಲ್ಲಾ ಕೆಲಸ ದೇವಳದ ವತಿಯಿಂದ ಆಗುತ್ತದೆ ಎಂದಾಗ ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯೆ ಕಸ್ತೂರಿ ಪಂಜ ಮಾತನಾಡಿ ಗ್ರಾಮಸ್ಥರಿಗೆ ತಪ್ಪು ಮಾಹಿತಿ ನೀಡಬಾರದು ಎಂದು ಹೇಳಿದ ನಂತರ ಕಟೀಲು ದೇವಳದ ಅಧಿಕಾರಿಗಳನ್ನು ಕರೆಸಿ ಸ್ಪಷ್ಟನೆ ಕೇಳಲಾಯಿತು. 10 ಲಕ್ಷ ರೂ. ವೆಚ್ಚದಲ್ಲಿ ಟೆಂಡರು ಕೆರೆಯಲಾಗಿದ್ದು ಕಿನ್ನಿಗೋಳಿ ಮೂಲದ ಅನಿಲ್ ಎಂಬವರು ಗುತ್ತಿಗೆ ವಹಿಸಿದ್ದಾರೆ. ಕೊನೆಯ ಹಂತದ ಮಂಜೂರಾತಿ ದೇವಳದ ಆಡಳಿತ ಮಂಡಳಿಯ ಸಹಿಯ ಬಳಿಕ ಧಾರ್ಮಿಕ ಆಯುಕ್ತರ ಬಳಿಯಲ್ಲಿ ಮಂಜೂರಾತಿ ಕಳುಹಿಸಿದ ಬಳಿಕ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಕಟೀಲು ದೇವಳದ ಅಧಿಕಾರಿ ತಾರಾನಾಥ ಶೆಟ್ಟಿ ಮಾಹಿತಿ ನೀಡಿದಾಗಲೂ ಗ್ರಾಮಸ್ಥರು ನಮಗೆ ಟ್ಯಾಂಕರ್ ಮೂಲಕ ನೀರು ಕೊಡಿ ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.

ದೇವಳದ ಪಕ್ಕದ ಸಭಾ ಗೃಹದ ತ್ಯಾಜ್ಯದ ನೀರು, ಬಸ್‌ನಿಲ್ದಾಣ ಹಾಗೂ ಸೌಂದರ್ಯ ಹೋಟೆಲ್ ಬಳಿ ಕೆಲವರು ತ್ಯಾಜ್ಯಗಳು ಹಾಕುತ್ತಿದ್ದು ದುರ್ವಾಸನೆಯುಕ್ತವಾಗಿ ಸಾಂಕ್ರಮಿಕ ರೋಗ ಹರಡುವ ಬೀತಿ ಇದೆ ಎಂದು ಚಂದ್ರ ಶೆಟ್ಟಿ ಹೇಳಿದಾಗ ಕಟೀಲು ಪ್ರಾಥಮಿಕ ಆರೋಗ್ಯಕೇಂದ್ರದ ವೈಧ್ಯಾದಿಕಾರಿ ಡಾ. ಭಾಸ್ಕರ ಕೊಟ್ಯಾನ್ ಮಾತನಾಡಿ ಕೂಡಲೇ ಸ್ಥಳ ಪರೀಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ದೇವಳದ ಅಂಗಡಿ ಕಟ್ಟಡಗಳು ಪಂಚಾಯಿತಿ ಪರವಾನಿಗೆ ಇಲ್ಲದೆಯೇ ವ್ಯವಹಾರ ನಡೆಸುತ್ತಿದೆ. ಪರವಾನಿಗೆ ಇಲ್ಲದೆ ಬೇರೆ ಬೇರೆ ಮನೆ ನಂಬ್ರದಿಂದ ಕೆಲವರು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರು ಕೇಳಿದರು.
ಜುಮಾದಿ ಗುಡ್ಡೆ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ನೀರು ಬರುತ್ತಿಲ್ಲ ಎಂದು ಅಲ್ಲಿನ ಮಹಿಳೆಯರು ಕೇಳಿದಾಗ ಪೈಪ್ ಲೈನ್ ಕೆಟ್ಟುಹೋಗಿದೆ ನಾಳೆ ಸರಿಸಡಿಸಲಾಗುವುದು ಎಂದು ಉಪಾಧ್ಯಕ್ಷ ಕಿರಣ್‌ಕುಮಾರ್ ಶೆಟ್ಟಿ ತಿಳಿಸಿದರು.
ಕಟೀಲು ನಂದಿನಿ ನದಿಗೆ ತ್ಯಾಜ್ಯ ನೀರು, ಮಲ್ಲಿಗೆಯಂಗಡಿ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿಯರು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ, ಕಿನ್ನಿಲಚ್ಚಿಲ್ ಹಳೆಯ ವಿದ್ಯುತ್ ತಂತಿಗಳಿವೆ ಸರಿಪಡಿಸಿ, ಕೆಲವು ಕಡೆಗಳಲ್ಲಿ ಕೈಗೆಟಕುವ ತಂತಿಗಳಿದ್ದು ಸರಿಪಡಿಸಿ, ಕಟೀಲು ಸೇತುವೆ ಬಳಿ ಸಿ. ಸಿ. ಕ್ಯಾಮರಾ ಆಳವಡಿಕೆ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ತೋಟಗಾರಿಕಾ ಇಲಾಖೆಯ ಪ್ರದೀಪ್ ನೋಡಲ್ ಅಧಿಕಾರಿಯಾಗಿ ಬಾಗವಹಿಸಿದರು. ಕಂದಾಯ ಇಲಾಖೆಯ ಪ್ರದೀಪ್ ಶೆಣೈ, ಮೆಸ್ಕಾಂ ಅಧಿಕಾರಿ ದಾಮೋದರ್, ಸಮಾಜ ಕಲ್ಯಾಣ ಇಲಾಖೆಯ ಶೀಲಾವತಿ, ಆರೋಗ್ಯ ಇಲಾಖೆಯ ಡಾ. ಭಾಸ್ಕರ ಕೋಟ್ಯಾನ್, ಕೃಷಿ ಇಲಾಖೆಯ ಅಬ್ದುಲ್ ಬಶೀರ್, ಅರಣ್ಯ ಇಲಾಖೆಯ ರಾಜು, ಮಂಗಳೂರು ತಾ. ಪಂ. ಸದಸ್ಯೆ ಶುಭಲತಾ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ರಮಾನಂದ ಪೂಜಾರಿ, ಜನಾರ್ದನ ಕಿಲೆಂಜೂರು, ತಿಲಕ್ ರಾಜ್, ದಯಾನಂದ ಶೆಟ್ಟಿ, ಜಯಂತಿ, ಪುಷ್ಪಾ, ರತ್ನ ಮತ್ತಿತರರು ಉಪಸ್ಥಿತರಿದ್ದರು.

Kinnigoli-30011806

Comments

comments

Comments are closed.

Read previous post:
Kinnigoli-30011805
ಎಳತ್ತೂರು ನೆಲಗುಡ್ಡೆ ಹೈಮಾಸ್ಟ್ ದೀಪ ಉದ್ಘಾಟನೆ

ಕಿನ್ನಿಗೋಳಿ: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯೇ ಕೇಂದ್ರ ಸರಕಾರದ ಮೂಲ ಉದ್ದೇಶ. ಜನರ ಸರಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಎಂದು ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು ಹೇಳಿದರು. ಕಿನ್ನಿಗೋಳಿ...

Close