ಭಜನಾ ಮಂದಿರ ಸಭಾಂಗಣಕ್ಕೆ ಶಿಲಾನ್ಯಾಸ

ಕಿನ್ನಿಗೋಳಿ: ಭಜನಾ ಮಂದಿರ ಹಾಗೂ ಧಾರ್ಮಿಕ ಕೇಂದ್ರಗಳು ಧರ್ಮ ಜಾಗೃತಿಯೊಂದಿಗೆ ಸಮಾಜ ಸೇವಾ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಹೇಳಿದರು.
ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ಆಶ್ರಯದಲ್ಲಿ ಭಾನುವಾರ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ನೂತನ ಸಭಾಂಗಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉದ್ಯಮಿ ಪಟೇಲ್ ವಾಸುದೇವ ರಾವ್ ನೂತನ ಸಭಾಂಗಣಕ್ಕೆ ಶಿಲಾನ್ಯಾಸಗೈದರು. ಪುನರೂರು ಜನವಿಕಾಸ ಸಮಿತಿಯ ಮಾಜಿ ಅಧ್ಯಕ್ಷ ಸುರೇಶ್ ರಾವ್ ನೀರಳಿಕೆ ಮಂದಿರ ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿದರು.
ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ತೋಕೂರು, ಹಳೆಯಂಗಡಿ ಪಿಸಿಎ ಬ್ಯಾಂಕ್ ನಿರ್ದೇಶಕ ವಿನೋದ್ ಎಸ್ ಸಾಲ್ಯಾನ್, ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ್ ರಾವ್, ಮಂದಿರದ ಅಧ್ಯಕ್ಷ ಮನೋಹರ್ ಜಿ. ಕುಂದರ್, ಮಾಜಿ ಅಧ್ಯಕ್ಷ ಟಿ. ಎನ್ ರವೀಂದ್ರನ್, ಸಂಜೀವ ಶೆಟ್ಟಿ, ರಾಜಶೇಖರ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಹರ್ಷ ಬಿ ಸ್ವಾಗತಿಸಿದರು. ಲಲಿತಾ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-30011801

Comments

comments

Comments are closed.

Read previous post:
Kinnigoli-290118010
ಐಕಳ ಕಂಬಳ ಕೂಟ ಫಲಿತಾಂಶ.

ಐಕಳ "ಕಾಂತಬಾರೆ-ಬೂದಬಾರೆ" ಜೋಡುಕರೆ ಬಯಲು ಕಂಬಳ ಕೂಟ ಫಲಿತಾಂಶ. ಕಿನ್ನಿಗೋಳಿ: ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : 111 ಜೊತೆ ಕನೆಹಲಗೆ: 05 ಜೊತೆ ಅಡ್ಡಹಲಗೆ: 06 ಜೊತೆ...

Close