ಸ್ಮರಣೀಯ ಸಾಧಕ ಸೋಮಪ್ಪ ಸುವರ್ಣ

ಕಿನ್ನಿಗೋಳಿ: ಕೃಷಿಕ, ಶಿಕ್ಷಕ, ಸಮಾಜಸೇವಕ ಹಾಗೂ ಶಾಸಕರಾಗಿ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಜನಪ್ರಿಯರಾದ ಸೋಮಪ್ಪ ಸುವರ್ಣರು ಸದಾ ಸ್ಮರಣೀಯರು ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಭಾನುವಾರ ಕೊಲ್ಲೂರು ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರದಲ್ಲಿ ದಿ. ಸೋಮಪ್ಪ ಸುವರ್ಣರ ನೆರಳು ನೆಂಪು ಸಮಿತಿ ಆಯೋಜಿಸಿದ ಸುವರ್ಣ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದ ಎ ಸೀತಾರಾಮ ರಾವ್, ಕೃಷಿ ಕ್ಷೇತ್ರದ ಕೃಷ್ಣಪ್ಪ ಗೌಡ ಪಡ್ಡಂಬೈಲ್, ಸಮಾಜ ಸೇವಾಕ್ಷೇತ್ರದ ಕಲ್ಯಾಣಿ ಶೆಡ್ತಿ ಕಿಲ್ಪಾಡಿ ಇವರಿಗೆ ಸೋಮಪ್ಪ ಸುವರ್ಣ ಸಂಸ್ಮರಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಉಪನ್ಯಾಸಕ ಸೋಂದಾ ಭಾಸ್ಕರ ಭಟ್ ಸಂಸ್ಮರಣ ಮಾತುಗಳನ್ನಾಡಿದರು.
ಹರಿಕೃಷ್ಣ ಪುನರೂರು, ಬಪ್ಪನಾಡು ದೇಗುಲ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಎಂ. ನಾರಾಯಣ ಶೆಟ್ಟಿ, ನಾರಾಯಣಗುರು ಚಾರೀಟೇಬಲ್ ಟ್ರಸ್ಟ್ ನ ಚಂದ್ರಶೇಖರ ನಾನಿಲ್, ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರ ಸಮಿತಿಯ ದಾಮೋದರ ದಂಡಕೇರಿ, ತಾಳಿಪಾಡಿ ನಾರಾಯಣಗುರು ಪರಿಪಾಲನಾ ಸಮಿತಿಯ ಕುಶಲ ಪೂಜಾರಿ, ಚೆನ್ನಕೇಶವ ಸುವರ್ಣ, ಹರೀಂದ್ರ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಗಣೇಶ ಅಮೀನ್ ಸಂಕಮಾರ್ ಸ್ವಾಗತಿಸಿದರು. ಪ್ರಮೋದ್ ಕುಮಾರ್ ಪ್ರಸ್ತಾವನೆಗೈದರು. ವೈ. ಎನ್. ಸಾಲ್ಯಾನ್ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಚಂದ್ರಶೇಖರ ಸುವರ್ಣ ವಂದಿಸಿದರು. ವಿಜಯಕುಮಾರ ಕುಬೆವೂರು ಕಾರ್ಯಕ್ರಮ ನಿರೂಪಿಸಿದರು.

Kinnigoli-30011804

 

Comments

comments

Comments are closed.

Read previous post:
Kinnigoli-30011803
ಹಳೆಯಂಗಡಿ ಸಾಗು ಬಳಿ ಶ್ರಮದಾನ

ಕಿನ್ನಿಗೋಳಿ: ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆಯಂಗಡಿ ಸಾಗು ರಸ್ತೆಯ ಇಕ್ಕೆಲಗಳನ್ನು ಸ್ಥಳೀಯರು ಮಾಜಿ ತಾ.ಪಂ. ಸದಸ್ಯ ಮನ್ಸೂರ್ ಸಾಗು ನೇತೃತ್ವದಲ್ಲಿ ಶ್ರಮದಾನ ಮಾಡಿದರು. ಈ ಸಂದರ್ಭ...

Close