ಅತ್ತೂರು ಶ್ರೀ ಕೋರ‍್ದಬ್ಬು ದೈವಸ್ಥಾನ ಕಲದ ಹರಕೆ

ಕಿನ್ನಿಗೋಳಿ: ಪೆಬ್ರವರಿ 3 ಮತ್ತು 4 ರಂದು ಅತ್ತೂರು ಮಾಗಣೆ ಶ್ರೀ ಕೋರ‍್ದಬ್ಬು ದೈವಸ್ಥಾನದ ಕೋರ‍್ದಬ್ಬು ತನ್ನಿಮಾನಿಗ ಹಾಗೂ ಧೂಮಾವತಿ ಬಂಟ ದೈವಗಳ ಕಲದ ಹರಕೆ ನಡೆಯಲಿದೆ.
ಫೆ. 3 ರಂದು ಶನಿವಾರ ರಾತ್ರಿ 8.30ಕ್ಕೆ ಗರ್ಭಗೃಹದಿಂದ ಭಂಡಾರ ಹೊರಟು ಪಕ್ಷಿಕೆರೆ ಚರ್ಚ್ ಬಳಿ ಅತ್ತೂರು ಗುತ್ತು ಕರೆಯವರಿಂದ ಕೋಳಿ ಹರಕೆ, ರಾತ್ರಿ 12 ಗಂಟೆಗೆ ಪದ್ಮನೂರು ಗಡುವಿನಲ್ಲಿ ಕೆಮ್ರಾಲ್ ಗುತ್ತು ಕರೆಯವರಿಂದ, 12.30 ಕ್ಕೆ ಬಟ್ಟಕೋಡಿ ಗಡುವಿನಲ್ಲಿ ಮೂಡ್ರಗುತ್ತು ಕರೆಯವರಿಂದ ಕೋಳಿಹರಕೆ ಸೇವೆ ನಡೆಯಲಿದ್ದು. 2 ಗಂಟೆಗೆ ಬಲವಿನಗುಡ್ಡೆ ಕಂಬೆರ್‌ಗಳ ಸಾನಿಧ್ಯದಲ್ಲಿ ಶ್ರೀ ದೈವಗಳ ದರ್ಶನದೊಂದಿಗೆ ಭಂಡಾರ ನೆಲೆಯಾಗಿ ಪೆಬ್ರವರಿ 4 ರಂದು ಬೆಳಿಗ್ಗೆ 9 ಉಳ್ಳಾಲ್ದಿ ದೈವಗಳ ದರ್ಶನ 9.30 ಕ್ಕೆ ಕಂಬೆರ್ ಗಳ ದರ್ಶನ 10 ಗಂಟೆಗೆ ಕೋರ‍್ದಬ್ಬು, ಧೂಮಾವತಿ ದೈವದ ದರ್ಶನ ಭಕ್ತರ ಸಮಸ್ಯೆಗಳಿಗೆ ಪರಿಹಾರ, ಹರಕೆ ಅರ್ಪಣೆ, ನಂತರ ಕೋರ್ದ್ದಬ್ಬು , ಧೂಮಾವತಿ ದೈವದ ದರ್ಶನದೊಂದಿಗೆ ಭಂಡಾರ ಹೊರಟು ಬಲವಿನ ಗುಡ್ಡೆಯಲ್ಲಿ ಬಾಂಜಾಲಗುತ್ತು ಕರೆಯವರಿಂದ, ಕಿಲೆಂಜೂರು ಕಡಪುವಿನಲ್ಲಿ ಕುಡ್ತಿಮಾರಗುತ್ತು ಕರೆಯವರಿಂದ ಕೋಳಿ ಹರಕೆ ಸೇವೆ ನಡೆದು ನಂತರ ಗರ್ಭಗೃಹದಲ್ಲಿ ಭಂಡಾರ ನೆಲೆಯಾಗಲಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಐಕಳ ಗಣೇಶ್ ವಿ ಶೆಟ್ಟಿ ಹಾಗೂ ದೈವಸ್ಥಾನದ ಅನುವಂಶಿಕ ಆಡಳಿತ ಮುಕ್ತೇಸರ ಅತ್ತೂರುಗುತ್ತು ಬಾಡ ಎಸ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-01021801
ಪಕ್ಷಿಕೆರೆ : ಮಾತೃದೇವೋಭವ

ಕಿನ್ನಿಗೋಳಿ: ಸಮಾಜ ನನಗೆ ಏನನ್ನು ಕೊಟ್ಟಿದೆ ಎಂದು ನೋಡದೆ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕು. ಎಂದು ಯುವ ನ್ಯಾಯವಾದಿ ಸಹನಾ ಕುಂದರ್ ಸೂಡ ಹೇಳಿದರು. ಪಕ್ಷಿಕೆರೆ ಸಾರ್ವಜನಿಕ ಶ್ರೀ ಗಣೇಶೋತ್ಸವ...

Close