ಕಿನ್ನಿಗೋಳಿ ಉಚಿತ ಪ್ರಾಣಾಯಾಮ ಯೋಗ ಶಿಬಿರ

ಕಿನ್ನಿಗೋಳಿ: ಯೋಗ ಸಾಧನೆಯಿಂದ ಹೆಚ್ಚಿನ ಖಾಯಿಲೆಗಳು ಗುಣವಾಗುವುದು ಸದೃಢ ಆರೋಗ್ಯ ಸಿದ್ದಿಸುವುದು ಎಂದು ವಿಶ್ವದ ವೈದ್ಯರುಗಳಿಂದ ಶ್ರುತ ಪಟ್ಟಿದೆ ಎಂದು ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.
ಸೋಮವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಮೂಲ್ಕಿಯ ಪತಂಜಲಿ ಯೋಗ ಸಮಿತಿಯ ಆಶ್ರಯದಲ್ಲಿ ಕಿನ್ನಿಗೋಳಿ ಯೋಗಾಭಿಮಾನಿಗಳು, ಕೆಂಚನಕೆರೆ ಯೋಗ ತರಬೇತಿ ಕೇಂದ್ರ ಮತ್ತು ಕಿನ್ನಿಗೋಳಿ ಯುಗಪುರುಷ ಸಹಯೋಗದೊಂದಿಗೆ ಜ. ೨೯ರಿಂದ ಫೆಬ್ರವರಿ ೪ ರ ವರೆಗೆ ನಡೆಯುವ ಸರ್ವ ಧಮೀಯರಿಗೆ ಉಚಿತ ಪ್ರಾಣಾಯಾಮ ಯೋಗ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕೆಂಚನಕೆರೆ ಯೋಗ ಮಂದಿರದ ಯೋಗ ಗುರು ಜಯ ಮುದ್ದು ಶೆಟ್ಟಿ ಯೋಗ ತರಬೇತು ನೀಡಿದರು.
ಶಿಬಿರದ ಸಂಯೋಜಕರಾದ ಪ್ರಥ್ವಿರಾಜ್ ಆಚಾರ್ಯ, ಸ್ಟೀವನ್ ಸಿಕ್ವೇರಾ, ಪಿ. ಸತೀಶ್ ರಾವ್, ಶಮೀನಾ ಆಳ್ವ ಕೆಂಚನಕೆರೆ, ಶ್ರೀಕಾಂತ್ ಶೆಟ್ಟಿ ಕೆಂಚನಕೆರೆ, ವಿಶ್ವನಾಥ ಕುಂದರ್ ಕೊಡೆತ್ತೂರು, ಜಯ ಕುಮಾರ್ ಉಪಸ್ಥಿತರಿದ್ದರು.
ವಿಶ್ವನಾಥ ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-01021802

Comments

comments

Comments are closed.

Read previous post:
ಅತ್ತೂರು ಶ್ರೀ ಕೋರ‍್ದಬ್ಬು ದೈವಸ್ಥಾನ ಕಲದ ಹರಕೆ

ಕಿನ್ನಿಗೋಳಿ: ಪೆಬ್ರವರಿ 3 ಮತ್ತು 4 ರಂದು ಅತ್ತೂರು ಮಾಗಣೆ ಶ್ರೀ ಕೋರ‍್ದಬ್ಬು ದೈವಸ್ಥಾನದ ಕೋರ‍್ದಬ್ಬು ತನ್ನಿಮಾನಿಗ ಹಾಗೂ ಧೂಮಾವತಿ ಬಂಟ ದೈವಗಳ ಕಲದ ಹರಕೆ ನಡೆಯಲಿದೆ. ಫೆ....

Close