ಪಕ್ಷಿಕೆರೆ : ಮಾತೃದೇವೋಭವ

ಕಿನ್ನಿಗೋಳಿ: ಸಮಾಜ ನನಗೆ ಏನನ್ನು ಕೊಟ್ಟಿದೆ ಎಂದು ನೋಡದೆ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕು. ಎಂದು ಯುವ ನ್ಯಾಯವಾದಿ ಸಹನಾ ಕುಂದರ್ ಸೂಡ ಹೇಳಿದರು.
ಪಕ್ಷಿಕೆರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ರಜತ ಸಂಭ್ರಮ ೨೦೧೮ ರ ದ್ವಾದಶ ಚಿಂತನೆ ಪ್ರಯುಕ್ತ ಭಾನುವಾರ ಮಾತೃದೇವೋಭವ ಕಾರ್ಯಕ್ರಮದಲ್ಲಿ ಮಾತನಾಡಿ ಇಂದಿನ ದಿನಗಳಲ್ಲಿ ಮೊಬೈಲ್‌ನಿಂದಾಗಿ ಹತ್ತಿರದಲ್ಲಿದ್ದವತರು ದೂರವಾಗಿದ್ದಾರೆ ಆದರೆ ದೂರದಲ್ಲಿದ್ದವರು ಹತ್ತಿರವಾಗಿದ್ದಾರೆ. ಜೀವನದ ಪಾರವನ್ನು ಯಾವುದೇ ವಿಶ್ವವಿದ್ಯಾನಿಲಯ ಕಲಿಸಿಕೊಡುವುದಿಲ್ಲ ಆದರೆ ನಮ್ಮ ಹಿರಿಯರು ಜೀವನದ ಪಾಠ ಹೇಳುವ ನಿಜವಾದ ಶಿಕ್ಷಕರು ಎಂದು ಹೇಳಿದರು.
ಧಾರ್ಮಿಕ ವಿದ್ವಾಂಸ ಪಂಜ ವಾಸುದೇವ ಭಟ್ ಶುಭಶಂಸನೆಗೈದರು.
ಈ ಸಂದರ್ಭ ಪಕ್ಷಿಕೆರೆ ಸಂತ ಜೂದರ ಹಿ.ಪ್ರಾ. ಶಾಲಾ ನಿವೃತ್ತ ಶಿಕ್ಷಕಿ ತೆರೆಜಾ ಸಿಕ್ವೇರಾ, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಪಣಂಬೂರು ನವಮಂಗಳೂರು ಬಂದರು ಮಂಡಳಿ ನಿವೃತ್ತ ಸಹಾಯಕ ಕಾರ್ಯದರ್ಶಿ ಸುದಾಶಿನಿ ಮಾರುತಿನಗರ, ಉಡುಪಿ ೧ ನೇ ಜೆ. ಎಂ. ಎಫ್. ಸಿ. ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕರು ಮಮ್ತಾಜ್ ಹೊಸಕಾಡು, ಹಿರಿಯ ಕೃಷಿಕೆ ಅತ್ತೂರು ಭಂಡಾರಮನೆ ಲಕ್ಷ್ಮೀ ಶೆಟ್ಟಿ, ಕರಕುಶಲ ಕರ್ಮಿ ಸುಮತಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಮಂಗಳೂರು ಮಹಿಳಾ ವಿಭಾಗ ಬಂಟರ ಯನೆ ನಾಡವರ ಮಾತೃ ಸಂಘದ ಅಧ್ಯಕ್ಷೆ ಡಾ. ಆಶಾ ಜ್ಯೋತಿ ರೈ, ಪಂಜದ ಗುತ್ತು ಶಾಂತರಾಮ ಶೆಟ್ಟಿ, ಜಗನ್ನಾಥ ಶೆಟ್ಟಿ ಮಮ್ಮೆಟ್ಟು, ಜಯರಾಮ ಆಚಾರ್ಯ ಕೊಯಿಕುಡೆ, ಸೇಸಪ್ಪ ಸಾಲ್ಯಾನ್, ಸುಧಾಕರ ಆಚಾರ್ಯ, ಪ್ರಶಾಂತ್ ಪಕ್ಷಿಕೆರೆ, ವಿಶ್ವಕರ್ಮ ಮಹಿಳಾ ಬಳಗ ಅಧ್ಯಕ್ಷೆ ಕೆಮ್ರಾಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್, ಮಾಜಿ ಅಧ್ಯಕ್ಷೆ ರೇವತಿ ಶೆಟ್ಟಿಗಾರ್, ಕೆಮ್ರಾಲ್ ಗ್ರಾಮ ಪಂಚಾಯಿತಿ ಸದಸ್ಯರಾದ ಸುಮತಿ ಪೂಜಾರಿ ಆಶಾ, ಮಾಲತಿ ಆಚಾರ್ಯ, ಮಮತಾ ರಮೇಶ್ ಅಮೀನ್, ಲೀಲಾ ಪೂಜಾರಿ, ಸುಮಲತ, ಪ್ರಮೀಳಾ ಡಿ. ಶೆಟ್ಟಿ, ನಿರ್ಮಲಾ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಪಕ್ಷಿಕೆರೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಧನಂಜಯ ಶೆಟ್ಟಿಗಾರ್ ಸ್ವಾಗತಿಸಿದರು, ರೇಖಾ ನಾರಾಯಣ್ ವಂದಿಸಿದರು.
ಕಾರ್ಯಕ್ರಮದ ಮೊದಲು ಮುಕ್ಕ ಶ್ರೀನಿವಾಸ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಡಾ. ಅನಿತಾ ಸಿಕ್ವೇರಾ, ಸ್ತನ ಕ್ಯನ್ಸರ್ ಗುರುತಿಸುವಿಕೆ ಮತ್ತು ಋತು ಚಕ್ರದ ದೋಷಗಳು ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ನಂತರ ಕವಿ ಗೋಷ್ಠಿ ಹಾಗೂ ನೃತ್ಯ ವೈಭವ ನಡೆಯಿತು.

Kinnigoli-01021801

Comments

comments

Comments are closed.

Read previous post:
Kinnigoli-30011807
ತಾಳಿಪಾಡಿ ಉತ್ಸವ ಬಲಿ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ತಾಳಿಪಾಡಿ ಶ್ರೀ ಲಕ್ಷೀ ವೆಂಕಟರಮಣ ಮಠದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಉತ್ಸವ ಬಲಿ ನಡೆಯಿತು.

Close