ಕೊಯ್ಯಾರು ಕಾಂಕ್ರೀಟ್ ರಸ್ತೆ ಉದ್ಘಾಟನೆ

ಮೂಲ್ಕಿ: ರಾಜ್ಯ ಸರ್ಕಾರವು ಗ್ರಾಮೀಣ ಪರಿಸರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಿವಾಸಿಗಳಿಗೆ ಮೂಲ ಭೂತ ಸೌಕರ್ಯಗಳ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಿದ್ದು ರಸ್ತೆ, ನೀರು ಮತ್ತಿತರ ಮೂಲಭೂತ ಸೌಕರ್ಯಗಳ ಸ್ಥಳೀಯ ಪಂಚಾಯಿತಿಗಳು ಹೆಚ್ಚಿನ ಒತ್ತು ನೀಡಬೇಕೆಂದು ಮುಲ್ಕಿ ಮೂಡಬಿದ್ರೆ ಶಾಸಕ ಕೆ ಅಭಯಚಂದ್ರ ಜ್ಯೆನ್ ಹೇಳಿದರು.
ರಾಜ್ಯ ಸರ್ಕಾರದ 2016-17ನೇ ಸಾಲಿನಲ್ಲಿ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಡಿ ಬಿಡುಗಡೆಯಾದ ಅನುದಾನದಲ್ಲಿ 12 ಲಕ್ಷದಲ್ಲಿ ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯ ವಾರ್ಡು 5 ರ ಕೊಯ್ಯಾರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೋನಿಯ ಶ್ರೀ ಬಬ್ಬು ಸ್ವಾಮಿ ದೈವಸ್ಥಾನದ ಬಳಿ ರಸ್ತೆ ಅಭಿವೃದ್ಧಿ ಮತ್ತು ಚರಂಡಿಗೆ ಸ್ಲಾಬ್ ಅಳವಡಿಸುವ ಕಾಮಗಾರಿಯ ಅಂಗವಾಗಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುನಿಲ್ ಆಳ್ವ ವಹಿಸಿದ್ದು ನಗರ ಪಂಚಾಯಿತಿ ಉಪಾಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ್ ಶೆಟ್ಟಿ ಜಿ. ಎಂ., ಪಂಚಾಯಿತಿ ಸದಸ್ಯರಾದ ಜಬೀನಾ ಇಬ್ರಾಹಿಂ, ಪುತ್ತುಬಾವು, ಯೋಗೀಶ್ ಕೋಟ್ಯಾನ್, ಸಂದೀಪ್ ಚಿತ್ರಾಪು, ಮೀನಾಕ್ಷಿ ಬಂಗೇರ, ನಗರ ಪಂಚಾಯತ್ ಮುಖ್ಯಾಧಿಕಾರಿ ಇಂದು ಎಂ,ಕಿರಿಯ ಅಭಿಯಂತರರಾದ ಅಶ್ವಿನಿ, ಕಂದಾಯ ನಿರೀಕ್ಷಕ ಅಶೋಕ್, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರ‍್ಯೆ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಗುತ್ತಿಗೆದಾರರಾದ ಜಸ್ ಬೀರುದ್ದೀನ್, ಅತಿಕಾರಿಬೆಟ್ಟು ಪಂಚಾಯತ್ ಸದಸ್ಯ ಮನೋಹರ್ ಕೋಟ್ಯಾನ್ ಮತ್ತಿತರಿದ್ದರು.

Mulki-02021803

Comments

comments

Comments are closed.

Read previous post:
Kinnigoli-02021802
ಬೆಹರಿನ್ ಭೇಟಿ – ರಾಹುಲ್ ಗಾಂಧಿ

ಕಿನ್ನಿಗೋಳಿ: ಬೆಹರಿನ್ ಭೇಟಿ ಸಂಧರ್ಭದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಬೆಹರಿನ್ ಕನ್ನಡ ಸಂಘದ ಮಾಜಿ ಅಧ್ಯಕ್ಷರು ಪ್ರಸ್ತುತ ಕಟ್ಟಡ ನಿರ್ಮಾಣ ಸಮಿತಿ...

Close