ಕಿನ್ನಿಗೋಳಿ : ಟೆಟನಸ್ ಲಸಿಕಾ ಶಿಬಿರ

ಕಿನ್ನಿಗೋಳಿ: ಸಮಯಕ್ಕೆ ಸರಿಯಾಗಿ ಲಸಿಕೆಗಳನ್ನು ಪಡೆಯುವುದರಿಂದ ಅನೇಕ ಮಾರಣಾಂತಿಕ ಕಾಯಿಲೆಗಳನ್ನೂ ತಡೆಗಟ್ಟಬಹುದು. ವಯಸ್ಕರು ಇಂಥ ಲಸಿಕೆಗಳನ್ನು ಹಾಕಿಸಿಕೊಳ್ಳುವ ಪರಿಪಾಠ ವಿದೇಶಗಳಲ್ಲಿ ಈಗಾಗಲೇ ಮಾಮೂಲಿಯಾಗಿದೆ. ಆದರೆ ಭಾರತದಲ್ಲಿ ಈಬಗ್ಗೆ ಮಾಹಿತಿ ಇಲ್ಲ. ಮಕ್ಕಳಿಗೆ ಕೊಡುವ ವಿಧಾನದಲ್ಲೇ ದೊಡ್ಡವರಿಗೂ ಲಸಿಕೆ ಹಾಕುವ ಮೂಲಕ ಕೆಲವು ಕಾಯಿಲೆಗಳಿಂದ ಪ್ರತಿರೋಧ ಶಕ್ತಿ ಪಡೆಯಬಹುದಾಗಿದೆ ಎಂದು ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭಾಸ್ಕರ್ ಕೋಟ್ಯಾನ್ ಹೇಳಿದರು
ಕಿನ್ನಿಗೋಳಿ ರೋಟರಿ ಕ್ಲಬ್ ಮತ್ತು ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ರೋಟರಿ ರಜತಭವನದಲ್ಲಿ ಶನಿವಾರ ನಡೆದ ಆರೋಗ್ಯ ಮಾಹಿತಿ ಶಿಬಿರ ಹಾಗೂ ಉಚಿತ ಟೆಟನಸ್ ಲಸಿಕಾ ಶಿಬಿರದಲ್ಲಿ ಮಾತನಾಡಿದರು.
ಈ ಸಂದರ್ಭ ಕಿನ್ನಿಗೋಳಿ ರೋಟರಿಕ್ಲಬ್ ಅಧ್ಯಕ್ಷೆ ಸೆವರಿನ್ ಲೋಬೊ, ಕಾರ್ಯದರ್ಶಿ ಸಂತೋಷ್‌ಕುಮಾರ್, ಮಮತಾ ಶಾಂತಿ ಉಪಸ್ಥಿತರಿದ್ದರು.

Kinnigoli-03021802

Comments

comments

Comments are closed.

Read previous post:
Kinnigoli-03021801
ಪಾವಂಜೆ : ಹೈಮಾಸ್ಟ್ ದೀಪ ಉದ್ಘಾಟನೆ

ಕಿನ್ನಿಗೋಳಿ:  ಹಳೆಯಂಗಡಿ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾವಂಜೆ ದೇವಳ ಹತ್ತಿರ ನಿರ್ಮಾಣವಾದ 2 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಹೈಮಾಸ್ಟ್ ದೀಪವನ್ನು ಶುಕ್ರವಾರ ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ...

Close