37 ನೇ ವಾರ್ಷಿಕ ಆರ್ರಿಫಾಯಿಯ್ಯ ದಪ್ ರಾತೀಬ್

ಕಿನ್ನಿಗೋಳಿ: ಸೇವಾ ಸಂಸ್ಥೆಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತದೆ ಎಂದು ಚೊಕ್ಕಬೆಟ್ಟು ಜುಮ್ಮಾ ಮಸೀದಿಯ ಖತೀಬರಾದ ಅಲ್ ಹಾಜ್ ಅಝ್ ಘರ್ ಫೈಝಿ ಬೊಳ್ಳೂರು ಹೇಳಿದರು.
ಪಕ್ಷಿಕೆರೆ ಬದ್ರಿಯಾ ಜುಮಾ ಮಸೀದಿ (ರಿ) ರಿಯಾಲುತ್ ಇಸ್ಲಾಂ ಜಮಾಅತ್ ಕಮಿಟಿ ಪಕ್ಷಿಕೆರೆ ಇದರ ವತಿಯಿಂದ ನಡೆದ ಮಹಾತ್ಮರಾದ ಶೈಖುಲ್ ಮಶಾಯಿಲ್ ಸುಲ್ತಾನುಲ್ ಅರಿಫಿನ್ ಅಸ್ಸಯ್ಯಿದ್ ಅಹ್ಮದುಲ್ ಕಬೀರು ರಿಫಾಯಿ (ಖ.ಸಿ) ಅವರ 37 ನೇ ವಾರ್ಷಿಕ ಆರ್ರಿಫಾಯಿಯ್ಯ ದಪ್ ರಾತೀಬ್, ಜಲಾಲಿಯ್ಯ ರಾತೀಬ್ ಮಜ್ಲೀಸ್, ವಾರ್ಷಿಕ ಸ್ವಲಾತ್ ಮಜ್ಲಿಸ್, ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಗಾರರಾಗಿ ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಎಷ್ಟು ಮುಂದುವರಿದರೂ, ಮಾನವೀಯತೆ ಇಲ್ಲದಂತಾಗಿದೆ, ಬದುಕುದೇ ಒಂದು ಕಾಯಕವಾಗಬಾರದು ಅದರೊಟ್ಟಿಗೆ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಮೂಲ್ಕಿ ಮೂಡಬಿದ್ರೆ ಶಾಸಕ ಕೆ.ಅಭಯಚಂದ್ರ ಜೈನ್ ಮಾತನಾಡಿ ಬಾವೈಕ್ಯತೆಯಿಂದ ಬದುಕುದೇ ಒಂದು ಸಂದೇಶ, ಜಾತಿ ಧರ್ಮದ ಬೇಧವನ್ನು ಮರೆತು ಬಾಳಿದರೆ ಜೀವನ ಸಾರ್ಥಕವಾಗುತ್ತದೆ ಎಂದರು.
ಪಕ್ಷಿಕೆರೆ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಕೆ.ಯು ಮಹಮ್ಮದ್ ಅಧ್ಯಕ್ಷತೆ ವಹಿಸಿದ್ದರು.
ಅಝ್ ಘರ್ ಫೈಝಿ ಬೊಳ್ಳೂರು ಕಾರ್ಯಕ್ರಮವನ್ನು ಉದ್ಘಟಿಸಿದರು,
ಈ ಸಂದರ್ಭ ಸಂತ ಜೂದರ ಯಾತ್ರಿಕ ಕೇಂದ್ರ ಪಕ್ಷಿಕೆರೆ ಚರ್ಚ್ ಧರ್ಮ ಗುರು ಆಂಡ್ರೋ ಲಿಯೋ ಡಿಸೋಜ, ಪಕ್ಷಿಕೆರೆ ಬದ್ರಿಯಾ ಜುಮಾ ಮಸೀದಿಯ ಖತಿಬರಾದ ಅಬ್ದುಲ್ ಖಾದಿರ್ ಮದನಿ, ಎಂ.ಜೆ.ಎಂ ಬೊಳ್ಳೂರು ಅಧ್ಯಕ್ಷ ಪಂಡಿತ್ ಇದಿನಬ್ಬ, ಜೆ.ಎಂ ಸಾಗ್ ಅಧ್ಯಕ್ಷ ಅಬ್ದುರ್ರುಹ್ ಮಾನ್ ಕುಡುಂಬೂರು, ಜೆ.ಎಂ.ಕದಿಕೆ ಹಳೆಯಂಗಡಿ ಅಧ್ಯಕ್ಷ ಅಬ್ದುರ್ರುಹ್ ಮಾನ್ ಸಾಗ್, ಕೆ.ಜೆ.ಎಂ ಗುತ್ತಕಾಡು ಅಧ್ಯಕ್ಷ ಅಬ್ದುರ್ರುಹ್ ಮಾನ್, ಜೆ.ಎಂ.ಕಿನ್ನಿಗೋಳಿ ಅಧ್ಯಕ್ಷ ಅಬ್ಬುರ್ರಝಾಕ್, ಎ.ಎಂ ಪುನರೂರು ಅಧ್ಯಕ್ಷ ಸಿದ್ದೀಕ್ ಪುನರೂರು, ಬಿ.ಜೆ.ಎಂ ಅಂಗಾರಗುಡ್ಡೆ ಅಧ್ಯಕ್ಷ ಅಬ್ದುಲ್ ಅಝೀಝ್, ಕೆಮ್ರಾಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲದಿತ್ಯ ಅಳ್ವ ಮತ್ತಿತರರು ಉಪಸ್ಥಿತರಿದ್ದರು.

Kinnigoli-05021801

Comments

comments

Comments are closed.

Read previous post:
Kateel-05021801
ಅಮ್ಮನಡೆ ನಮ್ಮ ನಡೆ

ಕಿನ್ನಿಗೋಳಿ : ಜೀವನದ ಸಕಲ ಕಷ್ಟ ನಿವಾರಣೆಗಾಗಿ ಕಟೀಲು ದೇವಿಯ ಸನ್ನಿಧಿಗೆ ಭಕ್ತರೊಂದಿಗೆ ಕಳೆದ ಐದು ವರ್ಷದಿಂದ ನಮ್ಮ ಸಮಿತಿ ವತಿಯಿಂದ ಪಾದಯಾತ್ರೆ ಕೈಗೊಳ್ಳುತ್ತಿದ್ದೇವೆ ಎಂದು ಅಮ್ಮನಡೆ ನಮ್ಮ...

Close