ಜೋಗಿದೊಟ್ಟು-ಕರ್ನಿರೆ ರಸ್ತೆ ಡಾಮರೀಕರಣ

ಕಿನ್ನಿಗೋಳಿ: ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಮಂಜೂರಾದ 60 ಲಕ್ಷ ವೆಚ್ಚದಲ್ಲಿ ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ನಿರೆಯ ಜೋಗಿದೊಟ್ಟುವಿನಿಂದ ಕರ್ನಿರೆವರೆಗಿನ ರಸ್ತೆಯ ಫೇವರ್ ಫಿನಿಶ್ ಡಾಮರೀಕರಣ ಹಾಗೂ 50 ಲಕ್ಷ ವೆಚ್ಚದಲ್ಲಿ ಫೇವರ್ ಫಿನಿಶ್ ಡಾಮರೀಕರಣಗೊಳ್ಳಿರುವ ಕವತ್ತಾರು-ಕನ್ನಡಿಗರ ಕೋಡಿ ರಸ್ತೆಯ ಶಿಲಾನ್ಯಾಸವನ್ನು ಮುಲ್ಕಿ ಮೂಡಬಿದಿರೆ ಶಾಸಕ ಕೆ ಅಭಯಚಂದ್ರ ಜೈನ್ ಅವರು ಕವತ್ತಾರಿನಲ್ಲಿ ನೆರವೇರಿಸಿದರು. ದ.ಕ .ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರ‍್ಯೆ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್, ಪಂಚಾಯತ್ ಸದಸ್ಯರು, ಉದ್ಯಮಿ ಕರ್ನಿರೆ ವಿಶ್ವನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-05021802

Comments

comments

Comments are closed.

Read previous post:
Kinnigoli-05021801
37 ನೇ ವಾರ್ಷಿಕ ಆರ್ರಿಫಾಯಿಯ್ಯ ದಪ್ ರಾತೀಬ್

ಕಿನ್ನಿಗೋಳಿ: ಸೇವಾ ಸಂಸ್ಥೆಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತದೆ ಎಂದು ಚೊಕ್ಕಬೆಟ್ಟು ಜುಮ್ಮಾ ಮಸೀದಿಯ ಖತೀಬರಾದ ಅಲ್ ಹಾಜ್ ಅಝ್ ಘರ್ ಫೈಝಿ ಬೊಳ್ಳೂರು ಹೇಳಿದರು. ಪಕ್ಷಿಕೆರೆ ಬದ್ರಿಯಾ ಜುಮಾ...

Close