ಅಮ್ಮನಡೆ ನಮ್ಮ ನಡೆ

ಕಿನ್ನಿಗೋಳಿ : ಜೀವನದ ಸಕಲ ಕಷ್ಟ ನಿವಾರಣೆಗಾಗಿ ಕಟೀಲು ದೇವಿಯ ಸನ್ನಿಧಿಗೆ ಭಕ್ತರೊಂದಿಗೆ ಕಳೆದ ಐದು ವರ್ಷದಿಂದ ನಮ್ಮ ಸಮಿತಿ ವತಿಯಿಂದ ಪಾದಯಾತ್ರೆ ಕೈಗೊಳ್ಳುತ್ತಿದ್ದೇವೆ ಎಂದು ಅಮ್ಮನಡೆ ನಮ್ಮ ನಡೆ ಪಾದಯಾತ್ರೆ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಮರವೂರು ಹೇಳಿದರು
ಲೋಕ ಕಲ್ಯಾಣಾರ್ಥ, ಸಕಲ ಕಷ್ಟ ನಿವಾರಣೆ ಹಾಗೂ ಗ್ರಹಚಾರ ದೋಷ ನಿವಾರಣೆಗಾಗಿ ಮರವೂರು ದುರ್ಗಾಪರಮೇಶ್ವರೀ ದೇವಳದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದವರೆಗೆ ನಡೆದ ಐದನೇ ವರ್ಷದ ಅಮ್ಮನಡೆಗೆ ನಮ್ಮ ನಡೆ ಪಾದಯಾತ್ರೆಯ ಸಮಾರೋಪದಲ್ಲಿ ಮಾತನಾಡಿದರು ಪಾದಯಾತ್ರೆಯ ಮೂಲಕ ದೇವಳಗಳಿಗೆ ಹೋದರೆ ಒಳಿತಾಗುವುದು ಎಂದು ಜನರಲ್ಲಿ ನಂಬಿಕೆ ಇದೆ. ಪಾದಯಾತ್ರೆಗೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ವಿವಿಧ ಸಂಘ ಸಂಸ್ಥೆ ಮತ್ತು ಸ್ವಯಂ ಸೇವಕರಿಂದ ಈ ಪಾದಯಾತ್ರೆ ಯಶಸ್ಸಾಗುತ್ತಿದೆ ಎಂದರು.
ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ ಮಾತನಾಡಿ ದುರ್ಗೆಯ ಸನ್ನಿಧಿಗೆ ಭಕ್ತರು ಪಾದಯಾತ್ರೆ ಮಾಡುವ ಮೂಲಕ ಭಕ್ತರಲ್ಲಿನ ಧಾರ್ಮಿಕ ನಂಬಿಕೆ ಬಲಗೊಳ್ಳುತ್ತಿದೆ.
ಮಂಗಳೂರು ಕದ್ರಿ ಮಠದ ರಾಜಯೋಗಿ ನಿರ್ಮಲ್ ನಾಥ್ ಜೀ ಮಹಾರಾಜ್, ಪಾದಯಾತ್ರೆಗೆ ಚಾಲನೆ ನೀಡಿದರು, ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ಮೇಯರ್ ಕವಿತಾ ಸನಿಲ್, ಕಟೀಲು ದೇವಳದ ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ, ಲಕ್ಷೀ ನಾರಾಯಣ ಆಸ್ರಣ್ಣ, ಹರಿ ನಾರಾಯಣ ದಾಸ ಆಸ್ರಣ್ಣ, ರವೀಂದ್ರ ಅರಸು ಮುಂಬೈ, ಸುರೇಶ್ಚಂದ್ರ ಶೆಟ್ಟಿ, ಆದಾನಿ ಸಂಸ್ಥೆಯ ಕಿಶೋರ್ ಅಳ್ವ, ಮಾತಾ ಡೆವಲಪರ್ಸ್ ನ ಸಂತೋಷ್ ಕುಮಾರ್ ಹೆಗ್ಡೆ, ಜಗದೀಶ್ ಶೇಣವ, ದೇವದಾಸ್ ಪಾಂಡೇಶ್ವರ, ಸಾಯಿನಾಥ್ ಶೆಟ್ಟಿ ಮತ್ತಿತರರು ಇದ್ದರು.
ಸುಮಾರು 30 ಸಾವಿರ ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಬೆಳಿಗ್ಗೆ 7.30 ಕ್ಕೆ ಹೊರಟ ಪಾದಯಾತ್ರೆ ಸುಮಾರು 12 ಗಂಟೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳವವನ್ನು ತಲುಪಿದ್ದು, ದಾರಿಯುದ್ದಕ್ಕೂ ವಿವಿಧ ಭಜನಾ ತಂಡ ಮತ್ತು ಭಕ್ತರಿಂದ ಭಜನೆ ನಡೆಯಿತು. ಭಕ್ತರ ಆಯಾಸವನ್ನು ತಣಿಸಲು, ಮರವೂರಿನಿಂದ ಕಟೀಲು ವರೆಗೆ ಸುಮಾರು 30 ಕಡೆಗಳಲ್ಲಿ ನೀರು, ಬೆಲ್ಲ ನೀರು, ಶರಬತ್ತು, ಮಜ್ಜಿಗೆ ಮತ್ತಿತರ ಪಾನೀಯಗಳನ್ನು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ವ್ಯವಸ್ಥೆ ಮಾಡಲಾಗಿತ್ತು.

ಮುಂಜಾನೆಯಿಂದ ದೇವಳದಲ್ಲಿ ಜನಸಾಗರ
ಪಾದಯಾತ್ರೆ ಮರವೂರಿನಲ್ಲಿ ಸುಮಾರು 7.30 ಕ್ಕೆ ಅಧಿಕೃತವಾಗಿ ಹೊರಡಿದ್ದು, ಪಾದಯಾತ್ರೆ ಕೈಗೊಂಡ ಭಕ್ತರು ಮರವೂರು ಮಾತ್ರವಲ್ಲದೆ ಮಂಗಳೂರಿನ ವಿವಿದೆಡೆಗಳಿಂದ ಮುಂಜಾನೆ 4 ಗಂಟೆಯಿಂದಲೇ ಪಾದಯಾತ್ರೆಯಲ್ಲಿ ತೊಡಗಿದ್ದರು. ಮುಂಜಾನೆ ಸುಮಾರು 6 ಗಂಟೆಯಿಂದಲೇ ದೇವಳದಲ್ಲಿ ಭಕ್ತರ ಜನ ಸಾಗರವಿತ್ತು. ಕಟೀಲು ದೇವಳದ ಕಾಲೇಜಿನ ಎನ್.ಎಸ್.ಎಸ್. ವಿದ್ಯಾರ್ಥಿಗಳು ಮತ್ತು ನೂರಾರು ಜನರು ಸ್ವಯಂ ಸೇವಕರಾಗಿ ಪಾಲ್ಗೊಂಡರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಜಪೆ ಪೋಲಿಸರು ಬಂದೋಹಸ್ತ್ ಮಾಡಿದ್ದರು.

ಬೆಳಿಗ್ಗೆಯಿಂದ ದೇವಳದಲ್ಲಿ ಊಟದ ವ್ಯವಸ್ಥೆ
ಕಟೀಲು ದೇವಳದಲ್ಲಿ ಬೆಳಿಗ್ಗೆ 9 ಗಂಟೆಯಿಂದಲೇ ಊಟದ ವ್ಯವಸ್ಥೆ ಮಾಡಲಾಗಿದ್ದು, ಮೂರು ಗಂಟೆಯವರೆಗೆ ಅನ್ನಪ್ರಸಾದ ಸ್ವೀಕರಿಸಿದರು.

ಭಕ್ತರ ಆಯಾಸವನ್ನು ತಣಿಸಲು ದಾರಿಯುದ್ದಕ್ಕೂ ವಿವಿದ ಪಾನೀಯಗಳನ್ನು ನೀಡುವ ವ್ಯವಸ್ಥೆ ಮಾಡಿದ್ದು, ಬಜಪೆ ಮತ್ತು ಪೆರ್ಮುದೆ ಚರ್ಚ್ ವತಿಯಿಂದ ಕ್ರೈಸ್ತ ಬಾಂದವರು ಭಕ್ತರಿಗಾಗಿ ಬೆಲ್ಲ ನೀರಿನ ವ್ಯವಸ್ಥೆ ಮಾಡಿದ್ದು ಶಾಘ್ಲನೀಯವಾಗಿತ್ತು.

Kateel-05021806 Kateel-05021807 Kateel-05021808

Kateel-05021801

Kateel-05021802 Kateel-05021803 Kateel-05021804 Kateel-05021805

Comments

comments

Comments are closed.

Read previous post:
Kinnigoli-03021802
ಕಿನ್ನಿಗೋಳಿ : ಟೆಟನಸ್ ಲಸಿಕಾ ಶಿಬಿರ

ಕಿನ್ನಿಗೋಳಿ: ಸಮಯಕ್ಕೆ ಸರಿಯಾಗಿ ಲಸಿಕೆಗಳನ್ನು ಪಡೆಯುವುದರಿಂದ ಅನೇಕ ಮಾರಣಾಂತಿಕ ಕಾಯಿಲೆಗಳನ್ನೂ ತಡೆಗಟ್ಟಬಹುದು. ವಯಸ್ಕರು ಇಂಥ ಲಸಿಕೆಗಳನ್ನು ಹಾಕಿಸಿಕೊಳ್ಳುವ ಪರಿಪಾಠ ವಿದೇಶಗಳಲ್ಲಿ ಈಗಾಗಲೇ ಮಾಮೂಲಿಯಾಗಿದೆ. ಆದರೆ ಭಾರತದಲ್ಲಿ ಈಬಗ್ಗೆ ಮಾಹಿತಿ...

Close