ಪ್ರಾಣಾಯಾಮ ಯೋಗ ಶಿಬಿರ ಸಮಾರೋಪ

ಕಿನ್ನಿಗೋಳಿ: ನಿಯಮಿತ ಯೋಗಾಭ್ಯಾಸದಿಂದ ರೋಗಮುಕ್ತ ಜೀವನ ನಡೆಸಬಹುದು. ಯೋಗಭ್ಯಾಸಕ್ಕೆ ಯಾವುದೇ ಜಾತಿ ಮತ ಬೇಧವಿಲ್ಲ ಎಂದು ಯೋಗ ಶಿಕ್ಷಕ ಜಯ ಮುದ್ದು ಶೆಟ್ಟಿ ಹೇಳಿದರು.
ಮೂಲ್ಕಿ ಪತಂಜಲಿ ಯೋಗ ಸಮಿತಿಯ ಆಶ್ರಯದಲ್ಲಿ ಕಿನ್ನಿಗೋಳಿ ಯೋಗಾಭಿಮಾನಿಗಳು, ಕೆಂಚನಕೆರೆಯ ಯೋಗ ತರಬೇತಿ ಕೇಂದ್ರ ಮತ್ತು ಕಿನ್ನಿಗೋಳಿಯ ಯುಗಪುರುಷದ ಸಹಯೋಗದೊಂದಿಗೆ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಳೆದ ೮ ದಿನಗಳಿಂದ ನಡೆಯುತ್ತಿದ್ದ ಸರ್ವ ಧರ್ಮೀಯರಿಗೆ ಉಚಿತ ಪ್ರಾಣಾಯಾಮ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ಯೋಗ ಶಿಕ್ಷಕ ಜಯ ಮುದ್ದು ಶೆಟ್ಟಿ ಅವರನ್ನು ಶಿಬಿರಾರ್ಥಿಗಳ ಪರವಾಗಿ ಸನ್ಮಾನಿಸಲಾಯಿತು.
ಯುಗಪುರುಷ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು.
ಸಾಗರಿಕ ಸಂಸ್ಥೆಯ ಧನಂಜಯ ಶೆಟ್ಟಿಗಾರ್ ಪಕ್ಷಿಕೆರೆ, ಶಿಬಿರದ ಸಂಯೋಜಕರಾದ ಪ್ರಥ್ವಿರಾಜ್ ಆಚಾರ್ಯ, ಸ್ಟೀವನ್ ಸಿಕ್ವೇರಾ, ಶ್ರೀಕಾಂತ್ ಶೆಟ್ಟಿ ಕೆಂಚನಕೆರೆ, ದಿನೇಶ್ ಆಚಾರ್ಯ, ವಿಶ್ವನಾಥ ಕುಂದರ್ ಕೊಡೆತ್ತೂರು, ಜಯ ಕುಮಾರ್, ನಾರಾಯಣ ಕೋಟ್ಯಾನ್ ಕುಬೆವೂರು ಮತ್ತಿತರರು ಉಪಸ್ಥಿತರಿದ್ದರು.
ಬಬಿತಾ ಶೆಟ್ಟಿ ಶಿಬಿರಾರ್ಥಿಗಳ ಪರವಾಗಿ ಅನಿಸಿಕೆ ತಿಳಿಸಿದರು. ಪಿ. ಸತೀಶ್ ರಾವ್ ವಂದಿಸಿದರು. ಶಮೀನ ಆಳ್ವ ಕೆಂಚನಕೆರೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-06021802

Comments

comments

Comments are closed.

Read previous post:
Kinnigoli-06021801
ತಾಳಿಪಾಡಿ ದಾರಿ ದೀಪ ಉದ್ಘಾಟನೆ

ಕಿನ್ನಿಗೋಳಿ: ಕಿನ್ನಿಗೊಳಿ ಗ್ರಾ.ಪಂ. ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಗುತ್ತಕಾಡು 5 ನೇ ವಾರ್ಡ್ ರಸ್ತೆಗೆ ಪಂಚಾಯಿತಿ ನಿಧಿ 1 ರ ಅನುದಾನದಿಂದ 90,000 ರೂ ವೆಚ್ಚದಲ್ಲಿ ದಾರಿದೀಪದ...

Close